ಉಪ್ಪಳ: ಜಿ.ಎಚ್.ಎಸ್.ಎಸ್. ಪೈವಳಿಕೆ ಕಾಯರ್‍ಕಟ್ಟೆ ಶಾಲೆಯಲ್ಲಿ 2026-27ನೇ ಶೈಕ್ಷಣಿಕ ವರ್ಷದ ಪಿಟಿಎ ಸಾಮಾನ್ಯ ಸಭೆ ಹಾಗೂ ಹೊಸ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಹಾಲಿ ಪಿಟಿಎ ಅಧ್ಯಕ್ಷ ಆದಂ ಬಳ್ಳೂರು ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಪ್ರಾಂಶುಪಾಲ ಡೊಮಿನಿಕ್ ಆಗಸ್ಟಿನ್ ಆದಾಯ-ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದರು. ಶಿಕ್ಷಕ ಅಶ್ರಫ್ ವಾರ್ಷಿಕ ಕಾರ್ಯಚಟುವಟಿಕೆ ವರದಿಯನ್ನು ಮಂಡಿಸಿದರು. ಶಾಲೆಯ ಕ್ರೀಡಾಕೂಟದ ವೇಳೆ ಗಾಯಗೊಂಡ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚಕ್ಕಾಗಿ ಆರ್ಥಿಕ ನೆರವು ನೀಡಿದ ಮುನ್ನಾ ಪ್ರೆಂಡ್ಸ್ ಕಾಯರ್‍ಕಟ್ಟೆ ಕ್ಲಬ್‍ನ ಸಮಾಜಮುಖಿ ಸೇವೆಯನ್ನು ಗುರುತಿಸಿ, ಶಾಲೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬಳಿಕ ನಡೆದ ಎಸ್.ಎಂ.ಸಿ. ಸಮಿತಿಯಲ್ಲಿ ತೆರವು ಬಂದ ಸ್ಥಾನಗಳಿಗೆ ಹೊಸ ಸದಸ್ಯರನ್ನು ಆಯ್ಕೆ ಮಾಡಲಾಯಿತು.
2026-27ನೇ ಶೈಕ್ಷಣಿಕ ವರ್ಷದ ಹೊಸ ಪಿಟಿಎ ಪದಾಧಿಕಾರಿಗಳಾಗಿ ಹಮೀದ್ ಬಿ.ಎಂ. (ಅಧ್ಯಕ್ಷರು), ಖಲೀಲ್ ಚಿಪ್ಪಾರ್ (ಉಪಾಧ್ಯಕ್ಷರು) ಹಾಗೂ ಉಷಾಕುಮಾರಿ (ಮಾತೃ ಪಿಟಿಎ ಅಧ್ಯಕ್ಷೆ) ಆಯ್ಕೆಯಾದರು. ಮೊಹಮ್ಮದ್ ಹನೀಫ್, ಮಾಂಕು, ಸಿದ್ದೀಕ್ ಉಸ್ತಾದ್ ಬಾಯಾರ್, ಅಬೂಬಕ್ಕರ್, ತಾಹಿರಾ ಹಾಗೂ ಸ್ವಾತಿ ಅವರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಮುಖ್ಯ ಶಿಕ್ಷಕಿ ಭಾಗ್ಯಲಕ್ಷ್ಮಿ ಸ್ವಾಗತಿಸಿ. ಬೇಬಿ ಟೀಚರ್ ವಂದಿಸಿದರು.

-hameed%20b%20m-side.jpg)
-hameed%20b%20m-side.jpg)
