HEALTH TIPS

ಡ್ರೈ ಡೇ, ಅನುದಾನ ಕಡಿತ: ದುರ್ಗಾಪೂಜೆಗೆ ಹೊಸ ಮಾರ್ಗಸೂಚಿ ಪ್ರಕಟಿಸಿದ ಬಂಗಾಳ ಸಿಎಂ

ಕೋಲ್ಕತ್ತ: ಪಶ್ಚಿಮ ಬಂಗಾಳದ ಅತಿದೊಡ್ಡ ಹಬ್ಬವಾದ 'ದುರ್ಗಾಪೂಜೆ' ಕುರಿತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಬಿಜೆಪಿ ಸರ್ಕಾರವು ಹೊಸ ನಿಯಮ ಮತ್ತು ಮಾರ್ಗಸೂಚಿ ಬಿಡುಗಡೆ ಮಾಡಿದೆ.

ದೊಡ್ಡ ಪೂಜಾ ಸಮಿತಿಗಳಿಗೆ ಇನ್ನು ಮುಂದೆ ರಾಜ್ಯ ಸರ್ಕಾರದಿಂದ ಅನುದಾನ ನೀಡುವುದಿಲ್ಲ. 


ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಳೆದ 15 ವರ್ಷಗಳಿಂದ ಈ ಅನುದಾನ ನೀಡುವ ಪದ್ಧತಿಯನ್ನು ನಡೆಸಿಕೊಂಡು ಬಂದಿದ್ದರು. ಹಬ್ಬದ ಪ್ರಮುಖ ದಿನವಾದ ಅಷ್ಟಮಿಯಂದು 'ಡ್ರೈ ಡೇ' (ಮದ್ಯ ಮಾರಾಟ ನಿಷೇಧ) ಘೋಷಿಸಲಾಗಿದೆ.

'ದುರ್ಗಾಪೂಜೆಗಾಗಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡುವಂತಿಲ್ಲ. ಕೋಲ್ಕತ್ತದಲ್ಲಿ ಪೂಜೆಗಾಗಿ 14 ಪ್ರಮುಖ ರಸ್ತೆಗಳನ್ನು ಮುಚ್ಚುವಂತಿಲ್ಲ. ಪೂಜೆಯ ಸಮಯದಲ್ಲಾಗಲಿ ಅಥವಾ ವಿಸರ್ಜನೆಯ ದಿನದಂದಾಗಲಿ ಡಿಜೆ ಬಳಸುವಂತಿಲ್ಲ. ಎಲ್ಲಾ ಪೂಜಾ ಸಮಿತಿಗಳು ಈ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು' ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ.

ಕಳೆದ ವರ್ಷದ ದುರ್ಗಾಪೂಜೆಯ ಸಂದರ್ಭದಲ್ಲಿ ಟಿಎಂಸಿ ಸರ್ಕಾರವು ಪ್ರತಿಯೊಂದು ಪೂಜಾ ಸಮಿತಿಗೆ ₹1.10 ಲಕ್ಷ ಅನುದಾನ ನೀಡಿತ್ತು. ಆದರೆ, 'ಮುಖ್ಯಮಂತ್ರಿಯಾಗಿ ಧಾರ್ಮಿಕ ಹಬ್ಬಕ್ಕೆ ಸಾರ್ವಜನಿಕ ಹಣವನ್ನು ನೀಡಲು ಸಾಧ್ಯವಿಲ್ಲ' ಎಂದು ಅಧಿಕಾರಿ ತಿಳಿಸಿದ್ದಾರೆ.

ದೊಡ್ಡ ಪೂಜಾ ಸಮಿತಿಗಳಿಗೆ ಸರ್ಕಾರದಿಂದ ಹಣ ನೀಡುವುದಿಲ್ಲ ಎಂದು ನಾನು ಹೇಳಿದ್ದೆ. ದೊಡ್ಡ ಬಜೆಟ್‌ನ ಪೂಜಾ ಸಮಿತಿಗಳು ದಯವಿಟ್ಟು ಸರ್ಕಾರದ ನೆರವನ್ನು ಪಡೆಯಬೇಡಿ ಎಂದು ವಿನಂತಿಸಿದ್ದಾರೆ.

ಆದಾಗ್ಯೂ, ಆರ್ಥಿಕ ನೆರವಿನ ಅಗತ್ಯವಿರುವ ಮತ್ತು ಅನುದಾನವಿಲ್ಲದೆ ಪೂಜೆ ನಡೆಸಲು ಸಾಧ್ಯವಾಗದ ಸಮಿತಿಗಳಿಗೆ ₹1 ಲಕ್ಷ ನೀಡಲಾಗುವುದು. ನಾವು ಈ ಕುರಿತು ಪರಿಶೀಲನೆ ನಡೆಸಲಿದ್ದೇವೆ ಎಂದೂ ಅವರು ಭರವಸೆ ನೀಡಿದ್ದಾರೆ.

ಆದರೆ, ಪೂಜಾ ಸಮಿತಿಗಳಿಗೆ ಕೆಲವು ರಿಯಾಯಿತಿಗಳು ಸಿಗಲಿವೆ. ವಿದ್ಯುತ್‌ಗೆ ಯಾವುದೇ ಶುಲ್ಕವಿರುವುದಿಲ್ಲ ಮತ್ತು ಅಗ್ನಿಶಾಮಕ ಪರವಾನಗಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಸರ್ಕಾರ ಆಯೋಜಿಸುವ ಸಂಭ್ರಮಾಚರಣೆಯಲ್ಲೂ ಸಿಎಂ ಪ್ರಮುಖ ಬದಲಾವಣೆಯನ್ನು ಘೋಷಿಸಿದ್ದಾರೆ. ತೃಣಮೂಲ ಸರ್ಕಾರ ನಡೆಸುತ್ತಿದ್ದ ಕಾರ್ನಿವಲ್ ಬದಲಿಗೆ, ಬಿಜೆಪಿ ಸರ್ಕಾರವು ಈಡನ್ ಗಾರ್ಡನ್ಸ್‌ನಲ್ಲಿ ನಾಲ್ಕು ಗಂಟೆಗಳ ಬೃಹತ್ ಕಾರ್ಯಕ್ರಮ ನಡೆಸಲಿದೆ ಎಂದಿದ್ದಾರೆ.

'ನಾವು ಮಹಾಲಯದಂದು ಈಡನ್ ಗಾರ್ಡನ್ಸ್‌ನಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸುತ್ತೇವೆ. ಇದರಲ್ಲಿ ಡ್ರೋನ್ ಶೋ, ಫೈರ್‌ವರ್ಕ್ಸ್ ಇರುತ್ತದೆ. ನಾವು ರೋಡ್‌ಶೋಗಳನ್ನು ಸಹ ನಡೆಸಲಿದ್ದೇವೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ' ಎಂದು ಸಿಎಂ ಹೇಳಿದ್ದಾರೆ.

ದುರ್ಗಾ ದೇವಿಯ ಜಾಹೀರಾತಿನ ವಿಚಾರವಾಗಿ ಬಂಗಾಳದಲ್ಲಿ ಬಿಜೆಪಿ ತೀವ್ರ ಟೀಕೆಗೆ ಗುರಿಯಾಗುತ್ತಿರುವ ಬೆನ್ನಲ್ಲೇ ಈ ಘೋಷಣೆ ಹೊರಬಂದಿದೆ.

11 ಕೈಗಳಿರುವ ದುರ್ಗಾದೇವಿಯ ಚಿತ್ರವನ್ನು ಬಳಸಿರುವುದು ವಿರೋಧ ಪಕ್ಷವಾದ ಟಿಎಂಸಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಿದ್ದು, ಸರ್ಕಾರವು ದುರ್ಗಾ ದೇವತೆ ಮತ್ತು ರಾಜ್ಯದ ಸಂಸ್ಕೃತಿಯನ್ನು ಕಡೆಗಣಿಸುತ್ತಿದೆ ಎಂದು ಟೀಕಿಸಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries