HEALTH TIPS

ಬೀಡಿ ಉದ್ಯಮದೊಂದಿಗೆ ಯಕ್ಷಗಾನವನ್ನು ಪೋಷಿಸಿದ ಮಹಾನ್ ವ್ಯಕ್ತಿ - ದಿ. ಅನಂತ ಗಟ್ಟಿ ಸಿದ್ದಿಬೈಲು

ಕುಂಬಳೆ: ಅತ್ಯಂತ ಕಡಿಮೆ ಶಿಕ್ಷಣ ಪಡೆದವರಾದರೂ ಅನಿವಾರ್ಯವಾಗಿ ನೆಚ್ಚಿಕೊಂಡ ಬೀಡಿ ಉದ್ಯಮದ ಜೊತೆಗೆ ಯಕ್ಷಗಾನವೆಂಬ ಮಹಾನ್ ಕಲೆಯನ್ನು ಉಳಿಸಿ ಬೆಳಿಸಿ ಪೆÇೀಷಿಸಿದ, ತನ್ನ ಕಟ್ಟಡದಲ್ಲಿಯೇ ಒಂದು ಭಾಗವನ್ನು ಯಕ್ಷಗಾನ ಸಂಘಕ್ಕಾಗಿ ಮೀಸಲಿಟ್ಟ ಅನನ್ಯ ಕಲಾಪೆÇೀಷಕ ಅನಂತ ಗಟ್ಟಿ ಸಿದ್ದಿಬೈಲು ಅವರ ಹಿರಿಮೆಯಾಗಿತ್ತು ಎಂದು ನಿವೃತ್ತ ಅಂಚೆ ಇಲಾಖೆ ಅಧಿಕಾರಿ, ಯಕ್ಷಗಾನ ಕಲಾವಿದ ಗೋಪಾಲಕೃಷ್ಣ ನಾಯಕ್ ತಿಳಿಸಿದರು.

ತಾನು ಕಲಾವಿದನಾಗಿ ಮೆರೆಯಬೇಕು ಎಂಬ ಆಸೆಯೇ ಇಲ್ಲದೆ ಯಕ್ಷಗಾನ ಕಲೆ ಉಳಿಯಬೇಕು ಬೆಳೆಯಬೇಕು ಎಂಬ ಉದ್ದೇಶದಿಂದ ನಾರಾಯಣಮಂಗಲದ ಶ್ರೀ ವಿಘ್ನೇಶ್ವರ ಯಕ್ಷಗಾನ ಸಂಘದ, ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ ಹಾಗೂ ತಮ್ಮದೇ ಕಟ್ಟಡದಲ್ಲಿ ಕಟ್ಟಿ ಬೆಳೆಸಿದ ಆಚೆಗೋಳಿ ಯಕ್ಷಗಾನ ಸಂಘದ ನಿರಂತರ ಸುದೀರ್ಘ ಪ್ರಯಾಣಕ್ಕೆ ಕಾರಣಕರ್ತರಾಗಿದ್ದು ಇತ್ತೀಚೆಗೆ ನಿಧನರಾದ ಅನಂತ ಗಟ್ಟಿ ಸಿದ್ದಿಬೈಲು ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಅವರು ಮಾತನಾಡಿದರು.

ಶೇಡಿಕಾವು ಪಾರ್ತಿಸುಬ್ಬ ಯಕ್ಷಗಾನ ಸಂಘದ ಸಭಾಂಗಣದಲ್ಲಿ ನಡೆದ ಅನಂತ ಗಟ್ಟಿ ಸಿದ್ದಿಬೈಲು ಶ್ರದ್ಧಾಂಜಲಿ ಸಮರ್ಪಣೆ ಸಭೆಯಲ್ಲಿ ಅಶೋಕ ಶೇಡಿಕಾವು, ಸದಾಶಿವ ಮುಳಿಯಡ್ಕ, ಉದಯಶಂಕರ ಮಜಲು ಮೊದಲಾದವರು ಅನಂತಗಟ್ಟಿಯವರ ಕೊಡುಗೆಯನ್ನು ಸ್ಮರಿಸಿ ಮಾತನಾಡಿದರು.

ಶ್ರದ್ಧಾಂಜಲಿ ಸಮರ್ಪಣೆ ಸಭೆಯ ಬಳಿಕ ಸುಧನ್ವ ಮೋಕ್ಷ ಯಕ್ಷಗಾನ ತಾಳಮದ್ದಳೆ ಜರಗಿತು. ಕಲಾವಿದರಾಗಿ ಶ್ರೀಹರಿ ಹೊಳ್ಳ ಮಧೂರು, ಕೃಷ್ಣಮೂರ್ತಿ ಪಾಡಿ, ನವೀನ್ ಚಂದ್ರ, ಮುರಳೀಧರ ಶೇಡಿಕಾವು, ವಿಶ್ವನಾಥ ಶೆಟ್ಟಿ ಮಾನ್ಯ, ಬಾಲಕೃಷ್ಣ ಆಚಾರ್ಯ ನೀರ್ಚಾಲು, ಗೋಪಾಲಕೃಷ್ಣ ನಾಯಕ್ ಸೂರಂಬೈಲು, ಉದಯಶಂಕರ ಮಜಲು, ಅಶೋಕ ಶೇಡಿಕಾವು, ದುರ್ಗಾಶಂಕರ ಅಡಿಗ ಶೇಡಿಕಾವು, ಪ್ರತಾಪ ಕುಂಬಳೆ, ಸದಾಶಿವ ಮುಳಿಯಡ್ಕ ಮೊದಲಾದವರು ಭಾಗವಹಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries