HEALTH TIPS

ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ 2026ರ ಲಾಂಛನ ಎಡನೀರು ಶ್ರೀಗಳಿಂದ ಬಿಡುಗಡೆ

ಬದಿಯಡ್ಕ: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪ ಸಂಖ್ಯಾತರ ಸಾಂಸ್ಕøತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕನ್ನಡ ಗ್ರಾಮ, ಕಾಸರಗೋಡು ಇದರ ನೇತೃತ್ವದಲ್ಲಿ ಕಳೆದ 36 ವರ್ಷಗಳಿಂದ ಕೇರಳ ರಾಜ್ಯದ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಪರಂಪರೆಯನ್ನು ಅಂತರ್ ರಾಜ್ಯ ಮಟ್ಟದಲ್ಲಿ ಕನ್ನಡ ಜನತೆಗೆ ತಲುಪಿಸುವ ಉದ್ದೇಶದಿಂದ ಕೇರಳ, ಕರ್ನಾಟಕ ಹಾಗೂ ಅಖಿಲ ಭಾರತ ಮತ್ತು ಆನಿವಾಸಿ ಭಾರತೀಯ ಕನ್ನಡಿಗರು, ಕಲಾವಿದರು, ಸಾಹಿತಿಗಳನ್ನು ಆಮಂತ್ರಿಸಿ ರಾಜ್ಯ, ರಾಷ್ಟ್ರೀಯ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಸಾಂಸ್ಕೃತಿಕ ವಿನಿಮಯಕ್ಕಾಗಿ ಕಾಸರಗೋಡಿನ ಮೀಪುಗುರಿ- ಪಾರೆಕಟ್ಟೆಯ ಕಾಸರಗೋಡು ಕನ್ನಡ ಗ್ರಾಮದಲ್ಲಿ 2026 ನವಂಬರ್ 28 ಮತ್ತು 29 ರಂದು ಐತಿಹಾಸಿಕ ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ- 2026 ಮತ್ತು ಕೇರಳ- ಕರ್ನಾಟಕ ಉತ್ಸವ ಕೇರಳ  ಕರ್ನಾಟಕ ಕನ್ನಡ ರಾಜ್ಯೋತ್ಸವ, ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವವನ್ನು ಏರ್ಪಡಿಸಲಾಗಿದೆ. 


ಕೇರಳ ರಾಜ್ಯ 8 ನೇ ಕನ್ನಡ ಸಮ್ಮೇಳನ,- ಕೇರಳ- ಕರ್ನಾಟಕ ಉತ್ಸವದ ಲಾಂಛನ (ಲೋಗೋ)ವನ್ನು ಕಾಸರಗೋಡಿನ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು, ವೆಂಕಟ್ ಭಟ್ ಎಡನೀರು, ನ್ಯಾಯವಾದಿ ಎಂ.ನಾರಾಯಣ ಭಟ್ ಕಾಸರಗೋಡು, ಕೆ ಗುರುಪ್ರಸಾದ ಕೋಟೆಕಣಿ, ಕೆ ಜಗದೀಶ ಕೂಡ್ಲು, ಅಶ್ವಿನಿ ಗುರುಪ್ರಸಾದ ಕೋಟೆಕಣಿ, ಪ್ರಶಾಂತ ಕಲ್ಲುಗದ್ದೆ ಎಡನೀರು, ಶ್ರೀಕಾಂತ್ ಕಾಸರಗೋಡು ಉಪಸ್ಥಿತರಿದ್ದರು.

ಕನ್ನಡ ಸಮ್ಮೇಳನವನ್ನು ಸಾಹಿತಿ, ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ.ಎಂ ವೀರಪ್ಪ ಮೊಯಿಲಿ ಉದ್ಘಾಟಿಸಲ್ಲಿದ್ದಾರೆ

ವಿವಿಧ ಕಲಾ ಪುಸ್ತಕ, ವಸ್ತು ಪ್ರದರ್ಶನಗಳ ಉದ್ಘಾಟನೆ, ಹೊಸ ಕೃತಿಗಳು, ಸ್ಮರಣ ಸಂಚಿಕೆ ಬಿಡುಗಡೆ, ಅಂತರ ರಾಜ್ಯಮಟ್ಟದ ಬಹುಭಾಷಾ ಕವಿಗೋಷ್ಠಿ, ಅಂತರ್ ರಾಜ್ಯ ಮಟ್ಟದ ಚುಟುಕು ಕವಿಗೋಷ್ಠಿ, ಅಂತರ ರಾಜ್ಯಮಟ್ಟದ ಮಕ್ಕಳ ಕವಿಗೋಷ್ಠಿ ಭಾಷಾ ಬಾಂಧವ್ಯ ಗೋಷ್ಠಿ,ಹಾಸ್ಯ ಗೋಷ್ಠಿ, ಮಾಧ್ಯಮ ಗೋಷ್ಠಿ , ಗಡಿನಾಡು- ಹೊರನಾಡು ಅನಿವಾಸಿ ಭಾರತೀಯ ಕನ್ನಡಿಗರು-ಕನ್ನಡ ಸಂಘಟನೆಗಳು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಲಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries