ಬದಿಯಡ್ಕ: ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದಲ್ಲಿ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಆರನೇ ಚಾತುರ್ಮಾಸ್ಯ ವ್ರತಾಚರಣೆಯ ಸಂದರ್ಭ ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಉಡುಪಮೂಲೆ ಭೂಮಿಕಾ ಪ್ರತಿಷ್ಠಾನ ಪ್ರಸ್ತುತಪಡಿಸಿದ ನೃತ್ಯಗಾನ ಚಿತ್ರಯಾನ ಕಾರ್ಯಕ್ರಮ ಜನಮನಸೂರೆಗೊಂಡಿತು. ಯೋಗನೃತ್ಯದಲ್ಲಿ ಕು. ಅಪರ್ಣಾ, ಚಿತ್ರದಲ್ಲಿ ಕು. ಶ್ರೀಲಕ್ಷ್ಮೀ ಕುಳೂರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಗಾಯನದಲ್ಲಿ ಕಿಶೋರ್ ಪೆರ್ಲ, ಶಿಲ್ಪಾಪರಮೇಶ್ವರಿ, ಹಿಮ್ಮೇಳದಲ್ಲಿ ಸಂತೋಷ್ ವಿಟ್ಲ, ಸತ್ಯನಾರಾಯಣ ಐಲ, ಲವಕುಮಾರ್ ಐಲ, ಪ್ರಭಾಕರ ಮಲ್ಲ ಜೊತೆಗೂಡಿದರು. ವಿದುಷಿ ಅನುಪಮಾ ರಾಘವೇಂದ್ರ ಉಡುಪುಮೂಲೆ ನೇತೃತ್ವದಲ್ಲಿ ಸಹಕಲಾವಿದರು ನೃತ್ಯ ಪ್ರದರ್ಶಿಸಿದರು.

.jpg)
