ಮಧೂರು: ಭಾರತೀಯ ಮಜ್ದೂರ್ ಸಂಘ (ಬಿಎಂಎಸ್) ಮಧೂರು ವಲಯದ ಪ್ರತಿನಿಧಿಗಳ ಸಮಾವೇಶ ಕೂಡ್ಲು ಅಧ್ಯಾಪಕ ಭವನ ಸಭಾಂಗಣದಲ್ಲಿ ಜರುಗಿತು. ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಸಮಾರಂಭ ಉದ್ಘಾಟಿಸಿದರು. ಬಿಎಂಎಸ್ ಮಧೂರು ವಲಯದ ಅಧ್ಯಕ್ಷ ವಸಂತ ಕೊರುವೈಲ್ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಅನಿಲ್ ಬಿ.ನಾಯರ್, ಕೆ.ಗುರುದಾಸ್, ಬಿ.ಮನೀಶ್, ಕೆ.ಕೆ. ಸುರೇಶ್, ಎನ್.ನಮಿತಾ, ಎ.ದೇವಕಿ, ಕೆ.ತೇಜಸ್, ಕೆ.ಎಸ್. ಶರತ್ ಕುಮಾರ್, ಪ್ರಭಾಶಂಕರ ಮಾಸ್ತರ್, ಕೆ.ದಯಾನಂದ, ಕೆ.ಸದಾಶಿವ ಉಪಸ್ಥಿತರಿದ್ದರು. ಮಧೂರು ಪ್ರಾದೇಶಿಕ ಕಾರ್ಯದರ್ಶಿ ಸಿ.ಎಚ್. ಶ್ರೀಧರ ಸ್ವಾಗತಿಸಿದರು. ಬಿಎಂಎಸ್ ಪ್ರಾದೇಶಿಕ ಸಮಿತಿ ಕೋಶಧಿಕಾರಿ ಕೆ.ಅವಿನಾಶ್ ವಂದಿಸಿದರು.

