HEALTH TIPS

ದೇವಾಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ-ಭಾಮಾ ಸ್ಟ್ರೈಕರ್ಸ್ ಪ್ರಥಮ

ಕಾಸರಗೋಡು: ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳ ಶಾಲಿಯ-ದೇವಾಂಗ ಸಮುದಾಯದ ಕುಕ್ಕಾಡಿ ನಗರ (ಮಂಗಳೂರು), ಮಂಜೇಶ್ವರ ನಗರ (ಚೆರುಗೋಳಿ), ಕುಂಬಳೆ  ನಗರ (ನಾರಾಯಣಮಂಗಲ), ಕಾಡಗಂ-ಚಂದನ ಹಾಗೂ ಕಾಸರಗೋಡು ತೆರುವತ್ತು ಎಂಬ ಐದು  ಕ್ಷೇತ್ರಗಳ ಅಧೀನದಲ್ಲಿರುವ ಸಮುದಾಯದ ಯುವಕರನ್ನೊಳಗೊಂಡ'ದೇವಾಂಗ ಪ್ರೀಮಿಯರ್ ಲೀಗ್' ಕ್ರಿಕೆಟ್ ಪಂದ್ಯಾಟ ಕಾಸರಗೋಡು ಅಶೋಕನಗರ ಮೈದಾನದಲ್ಲಿ ಜರುಗಿತು. 


ಕಾಸರಗೋಡು ತೆರುವತ್ತು  ಶ್ರೀ ಚೀರುಂಬಾ ಭಗವತೀ  ಕ್ಷೇತ್ರದ  ಕಾರ್ನವರ್  ನಿರ್ಮಲಾಕ್ಷನ್ ಕಾರ್ನವರ್  ಪಂದ್ಯಟಕ್ಕೆ ಚಾಲನೆ ನೀಡಿದರು. ಪಂದ್ಯಟದಲ್ಲಿ ಒಟ್ಟು 10 ತಂಡಗಳು ಭಾಗವಹಿಸಿತ್ತು. ಭಾನುವಾರ ನಡೆದ  ಫೈನಲ್ ಪಂದ್ಯದಲ್ಲಿ ಭಾಮಾ ಸ್ಟ್ರೈಕರ್ಸ್ ಕಾಸರಗೋಡು ಪ್ರಥಮ ಹಾಗೂ ದೇವಾಂಗ ಸ್ಟ್ರೈಕರ್ಸ್  ನಾಯ್ಕಾಪು ದ್ವಿತೀಯ ಸ್ಥಾನವನ್ನು ಪಡೆಯಿತು.

ಸಮಾರೋಪ ಸಮಾರಂಭದಲ್ಲಿ ವಕೀಲ ನಾರಾಯಣ  ವಡಕ್ಕೆವೀಡು  ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದರು.  ಕಾಸರಗೋಡಿನ ಖ್ಯಾತ ವೈದ್ಯ ಡಾ. ಮಂಜುನಾಥ ಶೆಟ್ಟಿ ಮತ್ತು ಡಾ. ವೀಣಾ ಮಂಜುನಾಥ ಶೆಟ್ಟಿ  ವಿಜೇತರಿಗೆ ಬಹುಮಾನ ವಿತರಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries