ಮಂಜೇಶ್ವರ: ಕೊಡ್ಲಮೊಗರು ಶ್ರೀ ವಾಣಿ ವಿಜಯ ಪ್ರೌಢಶಾಲೆಯಲ್ಲಿ ಶಾಲಾ ಕಲೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಜರುಗಿತು. ಈ ಕಾರ್ಯಕ್ರಮ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾಯಿತು. ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಮೋಹನ ಸಮಾರಂಭ ಉದ್ಘಾಟಿಸಿದರು. ಹಿಂದಿ ಅಧ್ಯಾಪಕ ಮಂಚ್ ಕಾಸರಗೋಡು ವತಿಯಿಂದ ಪ್ರೇಮಚಂದ್ ಜಯಂತಿಯ ಅಂಗವಾಗಿ ಆಯೋಜಿಸಲಾದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿದ್ಯಾರ್ಥಿನಿ ಲಕ್ಷ್ಯ ಸಿ.ಎಸ್ ಅವರನ್ನು ಅಭಿನಂದಿಸಲಾಯಿತು. ಕುಬಣೂರು ಎಸ್‍ಆರ್‍ಎಯುಪಿ ಶಾಲೆ ಯಲ್ಲಿ ಕೇರಳ ರಾಜ್ಯ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಅಸೋಸಿಯೇಶನ್ ಮಂಜೇಶ್ವರ ಸ್ಥಳೀಯ ಸಮಿತಿ ವತಿಯಿಂದ ಪಟಾಲಂ ನಾಯಕರ ತರಬೇತಿ ಶಿಬಿರ ನಡೆಯಿತು.
ಶಿಬಿರದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಎಲ್ಲಾ ವಿಷಯ ಗಳಲ್ಲಿ ಎಪ್ಲಸ್ ಹಾಗೂ ರಾಜ್ಯ ಪುರಸ್ಕಾರ ಪಡೆದ ಸೃಜನ್ ಅವರನ್ನು ಗೌರವಿಸಲಾಯಿತು. ಪೆÇ್ರೀಗ್ರಾಮ್ ಕನ್ವಿರ್ ಆರತಿ, ಪ್ರಕಾಶ್ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ವಿಜಯ ಕುಮಾರ್ ಸ್ಟಾಗತಿಸಿದರು. ಜ್ಯೋತ್ಸ್ನಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಕೃಷ್ಣ ವೇಣಿ, ವಂದಿಸಿದರು.


