ಪೆರ್ಲ: ಜಾನುವಾರುಗಳನ್ನು ಸಾಕುವ ಮಾಲೀಕರು ತಮ್ಮ ಜಾನುವಾರುಗಳನ್ನು ಮೇಯಿಸಲು ಅಥವಾ ಇತರ ಉದ್ದೇಶಗಳಿಗಾಗಿ ಸಾರ್ವಜನಿಕ ರಸ್ತೆ ಹಾಗೂ ಬಯಲು ಪ್ರದೇಶಗಳಲ್ಲಿ ಮುಕ್ತವಾಗಿ ಅಲೆದಾಡಲು ಬಿಡುವುದರಿಂದ ಸಮಸ್ಯೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮಾಲಿಕರು ಈ ಬಗ್ಗೆ ಗಮನಹರಿಸುವಂತೆ ಎಣ್ಮಕಜೆ ಗ್ರಾಮ ಪಂಚಾಯಿ ಅಧಿಕಾರಿಗಳು ತಿಳಿಸಿದ್ದಾರೆ. ಜಾನುವಾರುಗಳು ಸಾರ್ವಜನಿಕ ಪರದೇಶದಲ್ಲಿ ಅಲೆದಾಡುತ್ತಿರುವುದರಿಂದ ಸಮಸ್ಯೆ ಎದುರಾಗುತ್ತಿರುವ ಬಗ್ಗೆ ಪಂಚಾಯಿತಿಗೆ ಈಗಾಗಲೇ ಹಲವಾರು ದೂರುಗಳು ಲಭಿಸಿದೆ.
ರಸ್ತೆಗಳಲ್ಲಿ ಅಲೆದಾಡುವ ದನಕರುಗಳಿಂದ ವಾಹನ ಸವಾರರಿಗೆ ಅಪಘಾತದ ಭೀತಿ ಎದುರಾಗುತ್ತಿದೆ. ಇದರಿಂದ ಜಾನುವಾರುಗಳ ಜೀವಕ್ಕೂ ಅಪಾತ ತಟ್ಟುವ ಸಾಧ್ಯತೆಯಿದೆ ಇದರಿಂದ ದನಕರುಗಳ ಮಾಲೀಕರು ತಮ್ಮ ಜಾನುವಾರುಗಳನ್ನು ಸಾರ್ವಜನಿಕ ರಸ್ತೆಗಳಿಗೆ ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿ ಅಲೆದಾಡಲು ಬಿಡುವ ಬದಲು, ಅವುಗಳನ್ನು ಸುರಕ್ಷಿತವಾಗಿ ಬಿಗಿದು ಪೋಷಿಸುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.
ಜಾನುವಾರುಗಳನ್ನು ಆಯಾ ಮಾಲಿಕರು ಸ್ವಂತ ಜವಾಬ್ದಾರಿಯಲ್ಲಿಯೇ ಸಾಕಬೇಕೆಂದೂ ತಿಳಿಸಲಾಘಿದೆ. ಸೂಚನೆ ಉಲ್ಲಂಘಿಸಿದಲ್ಲಿ ಸಂಬಂಧಪಟ್ಟ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

