ಕಾಸರಗೋಡು: ನಗರಸಭೆಯ 4 ಮತ್ತು 7ನೇ ವಾರ್ಡ್‍ಗಳಲ್ಲಿ ಪ್ರಸಕ್ತ ಇರುವ ಆಶಾ ಕಾರ್ಯಕರ್ತೆಯರ ತೆರವಾಗಿರುವ ಹುದ್ದೆಗೆ ಹೊಸ ಆಶಾ ಕಾರ್ಯಕರ್ತೆಯರ ನೇಮಕಕ್ಕಾಗಿ ಸಂದರ್ಶನ ಸೆಪ್ಟೆಂಬರ್ 10 ರಂದು ಬೆಳಗ್ಗೆ 10.30ಕ್ಕೆ ಕಾಸರಗೋಡು ಜನರಲ್ ಆಸ್ಪತ್ರೆಯ ಕಾನ್ಫರೆನ್ಸ್ ಹಾಲ್‍ನಲ್ಲಿ ನಡೆಯಲಿದೆ. ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ಗರಿಷ್ಠ 45 ವರ್ಷ ವಯಸ್ಸಿನವರಾಗಿರಬೇಕು.
ಸಂಬಂಧಪಟ್ಟ ವಾರ್ಡ್‍ನಲ್ಲಿ ಖಾಯಂ ನಿವಾಸಿಗಳಾಗಿರುವ ವಿವಾಹಿತರು, ವಿವಾಹ ಸಂಬಂಧವನ್ನು ಬೇರ್ಪಡಿಸಿಕೊಂಡವರು, ವಿಧವೆಯರು ಅಥವಾ ಅವಿವಾಹಿತ ತಾಯಂದಿರಿಗೆಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಸಂಬಂಧಪಟ್ಟ ವಾರ್ಡ್‍ಗಳಲ್ಲಿ ಅರ್ಜಿದಾರರು ಇಲ್ಲದಿದ್ದಲ್ಲಿ ಮಾತ್ರ ಇತರ ವಾರ್ಡ್‍ಗಳ ಅರ್ಜಿದಾರರನ್ನು ಪರಿಗಣಿಸಲಾಗುವುದು. ಆಸಕ್ತರು ಬಿಳಿ ಹಾಳೆಯಲ್ಲಿ ಸ್ವಹಸ್ತಾಕ್ಷರದಿಂದ ತಯಾರಿಸಿದ ಅರ್ಜಿಯೊಂದಿಗೆ ವಯಸ್ಸು, ಶೈಕ್ಷಣಿಕ ಅರ್ಹತೆ, ಕಾಯಂ ನಿವಾಸಿಯಾಗಿರುವುದನ್ನು ಸಾಬೀತುಪಡಿಸುವ ದಾಖಲೆ, ಅನುಭವ ಪ್ರಮಾಣಪತ್ರ ಸೇರಿದಂತೆ ಇತರ ಅಗತ್ಯ ದಾಖಲೆಗಳೊಂದಿಗೆ ಕಾಸರಗೋಡ್ ಜನರಲ್ ಆಸ್ಪತ್ರೆಗೆ ನೇರವಾಗಿ ಹಾಜರಾಗಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ (04994 230080)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

