HEALTH TIPS

ಅಂಡಮಾನ್-ನಿಕೋಬಾರ್ ದ್ವೀಪ: ನೂತನ ಲೆ. ಗವರ್ನರ್ ಆಗಿ ದಿನೇಶ್ ಶರ್ಮಾ ನೇಮಕ

ನವದೆಹಲಿ: ಬಿಜೆಪಿ ರಾಜ್ಯಸಭಾ ಸಂಸದ ದಿನೇಶ್ ಶರ್ಮಾ ಅವರನ್ನು ಅಂಡಮಾನ್- ನಿಕೋಬಾರ್ ದ್ವೀಪದ ನೂತನ ಲೆಫ್ಟಿನೆಂಟ್‌ ಗವರ್ನರ್ (ಎಲ್‌ಜಿ) ಆಗಿ ನೇಮಕ ಮಾಡಲಾಗಿದೆ ಎಂದು ರಾಷ್ಟ್ರಪತಿ ಭವನ ಶನಿವಾರ ತಿಳಿಸಿದೆ.


2017ರ ಅಕ್ಟೋಬರ್ 8ರಿಂದ ಅಂಡಮಾನ್-ನಿಕೋಬಾರ್‌ ದ್ವೀಪದ ಲೆಫ್ಟಿನೆಂಟ್‌ ಗವರ್ನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನಿವೃತ್ತ ಅಡ್ಮಿರಲ್ ಡಿ.ಕೆ.ಜೋಶಿ ಅವರ ಉತ್ತರಾಧಿಕಾರಿಯಾಗಿ ದಿನೇಶ್ ಶರ್ಮಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ದಿನೇಶ್ ಶರ್ಮಾ ಅವರು ತಮ್ಮ ಅಧಿಕಾರ ವಹಿಸಿಕೊಂಡ ದಿನದಿಂದ ಜಾರಿಗೆ ಬರುವಂತೆ ಅಂಡಮಾನ್-ನಿಕೋಬಾರ್ ದ್ವೀಪದ ಲೆಫ್ಟಿನೆಂಟ್‌ ಗವರ್ನರ್ ಆಗಿ ನೇಮಿಸಲು ಭಾರತದ ರಾಷ್ಟ್ರಪತಿ ಹರ್ಷ ವ್ಯಕ್ತಪಡಿಸಿದ್ದಾರೆ ಎಂದು ಶನಿವಾರ ತಡರಾತ್ರಿ ರಾಷ್ಟ್ರಪತಿ ಭವನ ಹೊರಡಿಸಿದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

62 ವರ್ಷದ ದಿನೇಶ್ ಶರ್ಮಾ ಅವರು ಹಿಂದೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು. ಅವರ ರಾಜ್ಯಸಭಾ ಸದಸ್ಯತ್ವದ ಅವಧಿಯು ನವೆಂಬರ್ 25ಕ್ಕೆ ಕೊನೆಗೊಳ್ಳಲಿತ್ತು. ಪ್ರಸ್ತುತ ಅವರು ರಾಜ್ಯಸಭೆಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

Uploading: 18238 of 18238 bytes uploaded.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries