HEALTH TIPS

ಕಾರ್ಮಿಕರ ದಿನಾಚರಣೆ: ಬಿಎಂಎಸ್ ವತಿಯಿಂದ ಕಾಸರಗೋಡಿನಲ್ಲಿ ವಿಶ್ವಕರ್ಮ ಜಯಂತಿ

ಕಾಸರಗೋಡು: ಭಾರತೀಯ ಮಜ್ದೂರ್ ಸಂಘ(ಬಿಎಂಎಸ್) ವತಿಯಿಂದ ವಿಶ್ವಕರ್ಮ ಜಯಂತಿಯನ್ನು 'ಕಾರ್ಮಿಕರ ದಿನ'ವನ್ನಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ, ಕಾಸರಗೋಡು ಮತ್ತು ಮಧೂರು ವಲಯಗಳ ವತಿಯಿಂದ ಜಂಟಿಯಾಗಿ ಮೆರವಣಿಗೆ ಹಾಗೂ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಯಿತು. 


ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ಜತೆ ಕಾರ್ಯದರ್ಶಿ ಗುರುದಾಸ್ ಮಧೂರು ಅಧ್ಯಕ್ಷತೆ ವಹಿಸಿದ್ದರು.  ಬಿಎಂಎಸ್  ಜಿಲ್ಲಾ ಅಧ್ಯಕ್ಷ ಉಪೇಂದ್ರನ್ ಕೋಟೆಕಣಿ ಸಮಾರಂಭ ಉದ್ಘಾಟಿಸಿದರು. ವಿಶ್ವಕರ್ಮ ಜಯಂತಿಯ ವಿಶೇಷ ಕೊಡುಗೆಯಾಗಿ ಕಾರ್ಮಿಕರ ಇಪಿಎಫ್ ವೇತನ ಮಿತಿಯನ್ನು 15,000 ರಿಂದ 25,000 ಕ್ಕೆ ಏರಿಸಿದ ಕೇಂದ್ರ ಸರ್ಕಾರದ ಕ್ರಮವನ್ನು ಬಿಎಂಎಸ್ ಶ್ಲಾಘಿಸಿತು. ಸಮಾರಂಭದಲ್ಲಿ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಅವರು ಮುಖ್ಯ ಭಾಷಣ ಮಾಡಿದರು.

ಬಿಎಂಎಸ್ ವಲಯ ಸಮಿತಿ  ಅಧ್ಯಕ್ಷ ವಸಂತ ನಾಯಕ್ ಕೊರುವೈಲ್, ಬಿಎಂಎಸ್ ಜಿಲ್ಲಾ ಖಜಾನಚಿ ಮನೀಶ್, ಜಿಲ್ಲಾ ಜಂಟಿ ಕಾರ್ಯದರ್ಶಿಗಳಾದ ಭಾಸ್ಕರನ್ ಪೆÇಯಿನಾಚಿ ಮತ್ತು ಹರೀಶ್ ಕುದ್ರೆಪ್ಪಾಡಿ, ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್, ವಲಯ ಉಪಾಧ್ಯಕ್ಷ ಎ. ಕೇಶವ ಹಾಗೂ ಎಸ್.ಕೆ. ಉಮೇಶ್ ಉಪಸ್ಥಿತರಿದ್ದರು.

ಬಿಎಂಎಸ್ ಕಾಸರಗೋಡು ವಲಯ ಕಾರ್ಯದರ್ಶಿ ಬಾಬುಮೋನ್ ಚೆಂಗಳ ಸ್ವಾಗತಿಸಿದರು. ಬಿಎಂಎಸ್ ಮಧೂರು ವಲಯ ಕಾರ್ಯದರ್ಶಿ ಶ್ರೀಧರನ್ ಸಿ.ಎಚ್ ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries