HEALTH TIPS

ನಾಲ್ಕು ದಶಕದ ಹಳೆಯ ತೀರ್ಪು ಈಗಲೂ ಪ್ರಸ್ತುತ: ಬಿಜೋಯ್

ತಿರುವನಂತಪುರ: ಧಾರ್ಮಿಕ ಆಕ್ಷೇಪಗಳನ್ನು ಹೊಂದಿರುವವರು 'ವಂದೇ ಮಾತರಂ' ಗೀತೆಯ ಎಲ್ಲ ಚರಣಗಳನ್ನು ಹಾಡುವುದು ಕಡ್ಡಾಯವಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್, 1986ರಲ್ಲಿ ತಾನು ನೀಡಿದ ತೀರ್ಪೊಂದನ್ನು ನೆನಪಿಸಿದೆ. ಆ ಮೂಲಕ, 'ಬಿಜೋ‌ಯ್ ಇಮ್ಯಾನುವೆಲ್ ಮತ್ತು ಕೇರಳಂ ರಾಜ್ಯ'ದ ನಡುವಣ ನಾಲ್ಕು ದಶಕಗಳ ಹಳೆಯ ಪ್ರಕರಣವೊಂದು ಗಮನ ಸೆಳೆಯುತ್ತಿದೆ. 


ತಮ್ಮ ತಂದೆ ನಡೆಸಿದ್ದ ಕಾನೂನು ಹೋರಾಟವು ಈಗಲೂ ಪ್ರಸ್ತುತ ಆಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಬಿಜೋ‌ಯ್, 'ಈಗಿನ ಸಂದರ್ಭ ಯಾವುದು ಎಂಬ ಅರಿವು ನನಗಿಲ್ಲ. ಆದರೆ ನನ್ನ ತಂದೆ ನಡೆಸಿದ ಕಾನೂನು ಹೋರಾಟ ಈಗಲೂ ಹಲವರಿಗೆ ನೆರವಾಗುತ್ತಿದೆ ಎಂಬುದೇ ಖುಷಿ. ನಾವು ಎದುರಿಸಿದಂಥದ್ದೇ ಪರಿಸ್ಥಿತಿಯಲ್ಲಿ ತಮ್ಮ ಹಕ್ಕು ರಕ್ಷಣೆಗಾಗಿ ಹಲವರು ಈ ತೀರ್ಪನ್ನು ಅವಲಂಬಿಸುತ್ತಿದ್ದಾರೆ ಮತ್ತು ಆ ತೀರ್ಪನ್ನು ಹಲವು ಪ್ರಕರಣಗಳಲ್ಲಿ ಉಲ್ಲೇಖಿಸಲಾಗಿದೆ' ಎಂದು ಹೇಳಿದರು.

15 ವರ್ಷದ ಬಾಲಕ ಬಿಜೋ‌ಯ್ ಅವರು 10ನೇ ತರಗತಿಯಲ್ಲಿ, ಅವರ ಇಬ್ಬರು ಸಹೋದರಿಯರು ಕ್ರಮವಾಗಿ 8 ಹಾಗೂ 5ನೇ ತರಗತಿಯಲ್ಲಿ ಓದುತ್ತಿದ್ದರು. ತಮ್ಮ ಧಾರ್ಮಿಕ ನಂಬಿಕೆಯ ಕಾರಣಕ್ಕೆ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡಲು ನಿರಾಕರಿಸಿದ್ದ ಕೆಲವು ವಿದ್ಯಾರ್ಥಿಗಳಲ್ಲಿ ಇವರೂ ಸೇರಿದ್ದರು. ಎಲ್ಲರ ಮೇಲೆಯೂ ಶಾಲೆ ಕ್ರಮ ಕೈಗೊಂಡಿತು. ಇವರೆಲ್ಲರೂ 'ಯೊಹೋವನ ಸಾಕ್ಷ್ಯಗಳು' ಪಂಗಡದವರೇ ಆಗಿದ್ದರು.

'ಶಾಲೆಗೆ ಮರು ಸೇರ್ಪಡೆ ಮಾಡಿಕೊಳ್ಳುವಂತೆ ನಮ್ಮ ತಂದೆಯವರು ಮಾಡಿದ ಮನವಿಯನ್ನು ಅಧಿಕಾರಿಗಳು ನಿರಾಕರಿಸಿದ ಬಳಿಕ ಕಾನೂನು ಹೋರಾಟ ಆರಂಭಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಸಿಗುವವರೆಗೂ ಅವಿರತವಾಗಿ ಹೋರಾಟ ಮಾಡಿದ ಫಲವಾಗಿ ನಮ್ಮನ್ನು ಶಾಲೆಗೆ ಮರಳಿ ಸೇರಿಸಿ ಕೊಳ್ಳುವಂತಾಯಿತು. ಈಗಲೂ ಎಷ್ಟೋ ಶಿಕ್ಷಕರಿಗೆ ಈ ತೀರ್ಪಿನ ಬಗ್ಗೆ ಅರಿವಿಲ್ಲ' ಎಂದು ಬಿಜೋ‌ಯ್ ಹೇಳಿದರು.

'ರಾಷ್ಟ್ರಗೀತೆ ಹಾಡದಂತೆ ಕಾನೂನು ಯಾರನ್ನೂ ನಿರ್ಬಂಧಿಸುವುದಿಲ್ಲ ಮತ್ತು ಗೀತೆಯನ್ನು ಹಾಡದೇ ಮೌನವಾಗಿ ನಿಲ್ಲುವುದು ಕೂಡ ಅಗೌರವ ಆಗುವುದಿಲ್ಲ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಮೌನವಾಗಿರುವ ಹಕ್ಕನ್ನೂ ನೀಡುತ್ತದೆ' ಎಂದು ಈ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಉಲ್ಲೇಖಿಸಿತ್ತು.

ಕೊಟ್ಟಾಯಂ ಜಿಲ್ಲೆಯ ಕೂಡಲ್ಲೂರ್ ನಿವಾಸಿಯಾದ ಬಿಜೋ‌ಯ್ ಅವರು ಈಗ 'ಯೊಹೋವನ ಸಾಕ್ಷ್ಯಗಳು ಚರ್ಚ್‌'ನ ಕಾರ್ಯಚಟುವಟಿಕೆಗಳಲ್ಲಿತೊಡಗಿಸಿಕೊಂಡಿದ್ದಾರೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರ ತಂದೆ ವಿ.ಜೆ. ಇಮ್ಯಾನುವೆಲ್ ಅವರು 2020ರಲ್ಲಿ ತಮ್ಮ 78ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.

ಈ ಪ್ರಕರಣದಲ್ಲಿ ಹೋರಾಡಿದ್ದ ಕಾರಣಕ್ಕೆ ನಮಗೆ ಯಾವುದೇ ತೊಂದರೆ ಆಗಿಲ್ಲ. ರಾಜ್ಯದಲ್ಲಿ ನಾವು ಸಾಮರಸ್ಯ ಮತ್ತು ಪರಸ್ಪರ ಗೌರವದಿಂದ ಬದುಕುತ್ತಿದ್ದೇವೆ ಬಿಜೋಯ್‌ ಇಮ್ಯಾನುವೆಲ್







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries