HEALTH TIPS

ಎನ್‌ಸಿಟಿಇ ನಡೆ ಕ್ರಮಬದ್ಧ: ಸುಪ್ರೀಂ ಕೋರ್ಟ್

ನವದೆಹಲಿ: ಶಿಕ್ಷಕರ ಶಿಕ್ಷಣ ಸಂಸ್ಥೆಗಳು(ಟಿಇಐ) ವಾರ್ಷಿಕ 'ಕಾರ್ಯಕ್ಷಮತೆ ಮೌಲ್ಯಮಾಪನ ವರದಿ'ಗಳನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಸೂಚಿಸಿ ಸಾರ್ವಜನಿಕ ಪ್ರಕಟಣೆ ನೀಡಿರುವ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯ (ಎನ್‌ಸಿಟಿಇ) ಕ್ರಮವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿದಿದೆ. 


'ಕಾರ್ಯಕ್ಷಮತೆ ಮೌಲ್ಯಮಾಪನ ವರದಿ' ಸಲ್ಲಿಸುವಂತೆ ನಿರ್ದೇಶನ ನೀಡುವುದಕ್ಕೆ ಎನ್‌ಸಿಟಿಇ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಯದರ್ಶಿಗೆ ಸಂಪೂರ್ಣ ಅಧಿಕಾರ ಇದೆ ಎಂದು ನ್ಯಾಯಮೂರ್ತಿಗಳಾದ ಪಿ.ಎಸ್‌. ನರಸಿಂಹ ಹಾಗೂ ಅಲೋಕ್‌ ಆರಾಧೆ ಅವರು ಇದ್ದ ನ್ಯಾಯಪೀಠವು ಬುಧವಾರ ನೀಡಿರುವ ತೀರ್ಪಿನಲ್ಲಿ ಹೇಳಿದೆ.

'ಮಂಡಳಿ ಮಾತ್ರ ಇಂತಹ ನಿರ್ದೇಶನ ನೀಡಬಹುದು. ಮಂಡಳಿಯ ಕಾರ್ಯಕಾರಿ ಸಮಿತಿಗೆ ಇಂತಹ ಅಧಿಕಾರ ಇಲ್ಲ' ಎಂಬ ವಾದವನ್ನು ತಳ್ಳಿ ಹಾಕಿರುವ ಪೀಠವು, ಈ ಕುರಿತು ದೆಹಲಿ ಹೈಕೋರ್ಟ್‌ 2023ರ ಮಾರ್ಚ್‌ನಲ್ಲಿ ನೀಡಿದ್ದ ಆದೇಶವನ್ನು ರದ್ದುಗೊಳಿಸಿದೆ.

'ಉಚಿತ ಮತ್ತು ಕಡ್ಡಾಯ ಶಿಕ್ಷಣ ಮೂಲಭೂತ ಹಕ್ಕು ಆಗಿರುವಂತೆಯೇ ಶಿಕ್ಷಕರಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ಕೂಡ ಈ ಮೂಲಭೂತ ಹಕ್ಕಿನ ಭಾಗವಾಗಿದೆ. ಶಿಕ್ಷಕರ ಶಿಕ್ಷಣ ಸಂಸ್ಥೆಗಳು ಉತ್ತರದಾಯಿತ್ವ ಹೊಂದುವಂತೆ ಮಾಡಲು ಹಾಗೂ ಸಮಗ್ರತೆ ಕಾಪಾಡಿಕೊಳ್ಳು ವುದಕ್ಕಾಗಿ ಮೌಲ್ಯಮಾಪನ ವರದಿ ಸಲ್ಲಿಕೆಯಂತಹ ಕ್ರಮಗಳು ಅಗತ್ಯ' ಎಂದು ಪೀಠ ಹೇಳಿದೆ.

50ರ ವಯೋಮಾನದ ದಂಪತಿಗೆ ಹೈಕೋರ್ಟ್ ಅನುಮತಿ

ಅಹಮದಾಬಾದ್: 50 ವರ್ಷ ಪೂರೈಸಿರುವ ದಂಪತಿ ಐವಿಎಫ್ ಮೂಲಕ ಮಗುವನ್ನು ಪಡೆಯುವುದಕ್ಕೆ ಗುಜರಾತ್‌ ಹೈಕೋರ್ಟ್‌ ಅನುಮತಿ ನೀಡಿದೆ.

ನ್ಯಾಯಮೂರ್ತಿ ನಿರ್ಜರ ದೇಸಾಯಿ ಅವರು ಈ ಸಂಬಂಧ ಇದೇ 2ರಂದು ಆದೇಶ ಹೊರಡಿಸಿದ್ದು, ಐವಿಎಫ್‌ ನೆರವಿನಿಂದ ಮಗುವನ್ನು ಪಡೆಯಲು ಅನುಮತಿ ನೀಡಿದ್ದಾರೆ.

ವಿವರ: ದಂಪತಿಯ ಏಕೈಕ ಮಗ ಎಂಬಿಬಿಎಸ್‌ ಓದುತ್ತಿದ್ದರು. 25 ವರ್ಷ ವಯಸ್ಸಿನ ಮಗ 2022ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕಾರಣಕ್ಕೆ ಮತ್ತೊಂದು ಮಗುವನ್ನು ಹೊಂದಲು ದಂಪತಿ ನಿರ್ಧರಿಸಿದ್ದರು.

ಪತಿಗೆ 54 ವರ್ಷವಾಗಿದ್ದರೆ, ಪತ್ನಿಗೆ ಋತುಬಂಧವಾಗಿತ್ತು. ಸ್ವಾಭಾವಿಕವಾಗಿ ಗರ್ಭ ಧರಿಸುವುದು ಸಾಧ್ಯವಿಲ್ಲದ ಕಾರಣ ಈ ದಂಪತಿ 'ಇನ್‌ವಿಟ್ರೊ ಫರ್ಟಿಲೈಜೇಷನ್(ಐವಿಎಫ್‌) ವಿಧಾನದ ಮೂಲಕ ಮಗು ಪಡೆಯಲು ನಿರ್ಧರಿಸಿದ್ದರು.

ಐವಿಎಫ್‌ಗೆ ಒಳಗಾಗಲು ನಿಗದಿಪಡಿಸಲಾಗಿರುವ ಗರಿಷ್ಠ ವಯೋಮಿತಿ ದಾಟಲಾಗಿದೆ ಎಂಬ ಕಾರಣ, ಅವರ ಕೋರಿಕೆಯನ್ನು ಮೆಹ್ಸಾನಾ ನಗರದ ಆಸ್ಪತ್ರೆಯೊಂದು ತಿರಸ್ಕರಿಸಿತ್ತು.

'ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ' (ಎಆರ್‌ಟಿ) ಕಾಯ್ದೆ-2021ರ ಪ್ರಕಾರ ಐವಿಎಫ್‌ ಚಿಕಿತ್ಸೆ ಪಡೆಯಲು ಗರಿಷ್ಠ ವಯೋಮಿತಿ 55 ವರ್ಷ ಇದೆ ಎಂದು ವಾದಿಸಿದ್ದ ದಂಪತಿ, ತಮಗೆ ಈ ವಿಧಾನದ ಮೂಲಕ ಮಗು ಪಡೆಯಲು ಅವಕಾಶ ನೀಡುವಂತೆ ಕೋರಿ ಕೋರ್ಟ್‌ ಮೆಟ್ಟಿಲೇರಿದ್ದರು.

ವಿವಿಧ ಕಾರಣಗಳಿಂದಾಗಿ ಕೆಲವು ದಂಪತಿಗಳಿಗೆ ಮಕ್ಕಳಾಗುವುದಿಲ್ಲ. ಅಂತಹ ದಂಪತಿಗಳಿಗೆಎಆರ್‌ಟಿ ಮೂಲಕ ಸಂತಾನೋತ್ಪತ್ತಿ ಚಿಕಿತ್ಸೆ ನೀಡಲಾಗುತ್ತಿದೆ. ಐವಿಎಫ್‌ ಕೂಡ ಎಆರ್‌ಟಿಯ ಒಂದು ವಿಧಾನ.

ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ವಹಿಸುವ ಪಾತ್ರ ಹಾಗೂ ಮಗುವಿನ ಬೆಳವಣಿಗೆಗೆ ನೇರ ಸಂಬಂಧ ಇದೆ. ಈ ದೃಷ್ಟಿಯಿಂದ ಎನ್‌ಸಿಟಿಇಗಳ ಜವಾಬ್ದಾರಿ ಬೇರೆ ಯಾವುದೇ ಸಂಸ್ಥೆಗಳಿಗಿಂತ ಅಧಿಕ ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಸುಪ್ರೀಂ ಕೋರ್ಟ್







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries