ಕಾಸರಗೋಡು: ಕಾಸರಗೋಡು ಜಿಲ್ಲಾ ರಸಪ್ರಶ್ನೆ ಸಂಘವು ಕಂಬಳ್ಳೂರು ಸಿ.ಆರ್.ಸಿ ಮತ್ತು ಗ್ರಂಥಾಲಯದ ಸಹಯೋಗದೊಂದಿಗೆ "ಮೂಲ ವಿಜ್ಞಾನ-ಸಮಾಜ ವಿಜ್ಞಾನ' ವಿಷಯದ ಕುರಿತು ಮಾಸಿಕ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತು. ಈಸ್ಟ್ ಎಳೇರಿ ಗ್ರಾಮ ಪಂಚಾಯತಿ ಸದಸ್ಯೆ ಪಿ.ವಿ.ಸತೀದೇವಿ ಸ್ಪರ್ಧೆಯನ್ನು ಉದ್ಘಾಟಿಸಿದರು. ಗ್ರಂಥಾಲಯ ಉಪಾಧ್ಯಕ್ಷ ಕೆ.ಪಿ. ರಮೇಶನ್ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮ ಪಂಚಾಯತಿ ಸದಸ್ಯ ಎನ್.ವಿ.ಶಿವದಾಸನ್ ಬಹುಮಾನಗಳನ್ನು ವಿತರಿಸಿದರು. ವೆಳ್ಳರಿಕುಂಡು ತಾಲೂಕು ಗ್ರಂಥಾಲಯ ಮಂಡಳಿ ಅಧ್ಯಕ್ಷ ಕೆ. ಸಿ ಅನಿಲ್‍ಕುಮಾರ್, ರಸಪ್ರಶ್ನೆ ಸ್ಪರ್ಧೆ ಸಮಿತಿ ಕಾರ್ಯದರ್ಶಿ ವಿ. ತಂಬಾನ್ ಮಾಸ್ತರ್, ತಾಲೂಕು ಗ್ರಂಥಾಲಯ ಮಂಡಳಿಯ ಸದಸ್ಯ ವಿನೋದ್ ಪಿ. ಡಿ., ರಸಪ್ರಶ್ನೆ ಸಂಘದ ಅಧ್ಯಕ್ಷ ಟಿ. ವಿ ವಿಜಯನ್ ಮಾಸ್ತರ್, ಜೊತೆ ಕಾರ್ಯದರ್ಶಿಗಳಾದ ಪಿ.ಕೆ ಮೋಹನನ್, ಕೆ. ಕೆ. ಮೋಹನನ್ ಮತ್ತು ಇತರರು ಮಾತನಾಡಿ ಶುಭ ಹಾರೈಸಿದರು. ಜಿತೇಶ್ ಪಿ ಸ್ವಾಗತಿಸಿ, ಕೆ. ವಿಜಿತ್ ವಂದಿಸಿದರು.
109 ನೇ ಮಾಸಿಕ ರಸಪ್ರಶ್ನೆಯನ್ನು ಸುಜಿತ್ ಮಣಿಯಾಟ್ ನಡೆಸಿಕೊಟ್ಟರು. ಸ್ಪರ್ಧೆಯ ಎಲ್‍ಪಿ ವಿಭಾಗದಲ್ಲಿ ಸ್ವಾತಿಕ್ ನಾಥ್ ಕೊಟ್ಟಚ್ಚೇರಿ(ಪ್ರಥಮ), ಆದವ್ ಮುರಿಯನವಿ(ದ್ವಿತೀಯ), ಅಭಿಜಿತ್.ಎಸ್ ನೀಲೇಶ್ವರ(ತೃತೀಯ), ಯುಪಿ ವಿಭಾಗದಲ್ಲಿ ಆರನ್ ಜಾನ್ ನೀಲೇಶ್ವರ(ಪ್ರಥಮ), ಇಶಾನ ಚೆರಿಯಕರ(ದ್ವಿತೀಯ), ಆತ್ಮಿಕ. ಎಸ್ ಇರಿಯಾ(ತೃತೀಯ), ಪ್ರೌಢಶಾಲಾ ವಿಭಾಗದಲ್ಲಿ ಶ್ರೀಲಕ್ಷ್ಮಿ ನೀಲೇಶ್ವರ(ಪ್ರಥಮ), ದೇವದರ್ಶ ನಿಡುಂಬ(ದ್ವಿತೀಯ), ಅಲನ್ ಕೆ. ರಾಜ್ ಬಂಗಳಂ(ತೃತೀಯ) ಸ್ಥಾನ ಗಳಿಸಿದರು.

.jpg)
.jpg)
