HEALTH TIPS

ಮಂಚೇಶ್ವರ ಬಿ.ಆರ್.ಸಿ.ಯಿಂದ ವಿಶೇಷಚೇತನ ಮಕ್ಕಳಿಗೆ ಡೈಪರ್ ವಿತರಣೆ

ಉಪ್ಪಳ: ಸಮಗ್ರ ಶಿಕ್ಷಾ ಕೇರಳ, ಕಾಸರಗೋಡು, ಮಂಚೇಶ್ವರ ಬಿ.ಆರ್.ಸಿ ನೇತೃತ್ವದಲ್ಲಿ ಹಾಸಿಗೆ ಹಿಡಿದಿರುವ ವಿಶೇಷಚೇತನ ಮಕ್ಕಳಿಗೆ ಡೈಪರ್ ವಿತರಣೆ ಮಾಡಲಾಯಿತು.


ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಅವರು ಡೈಪರ್ ಗಳನ್ನು ಪ್ರಾಯೋಜಿಸಿ, ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಚೇಶ್ವರ ಬಿ.ಆರ್.ಸಿ ವ್ಯಾಪ್ತಿಯ 15 ಮಕ್ಕಳಿಗೆ ಡೈಪರ್ ವಿತರಿಸಲಾಯಿತು.

ಮುಳಿಂಜಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಚಿತ್ರಾವತಿ ಚಿಗುರುಪಾದೆ ಅಧ್ಯಕ್ಷತೆ ವಹಿಸಿದ್ದರು. ನಾರಾಯಣರಾಜ್ ಟಿ.ಎಸ್., ಶಾರದಾ ಪಿ., ವಿಶೇಷ ಶಿಕ್ಷಕರಾದ ರೀಮಾ ಜಸಿಂತಾ ಮೊಂತೆರೋ, ಬಿಂದ್ಯಾ ಎನ್., ಭವ್ಯಾ ಬಿ.ಎಸ್. ಶುಭಾಶಂಸನೆರಗೈದರು. ಮಂಚೇಶ್ವರ ಬಿ.ಆರ್.ಸಿ ಬ್ಲಾಕ್ ಯೋಜನಾ ಸಂಯೋಜಕ ರಾಜಗೋಪಾಲನ್ ಪಿ. ಸ್ವಾಗತಿಸಿ, ತರಬೇತುದಾರೆ ಸುಮಯ್ಯಾ ಎಂ.ಎ. ವಂದಿಸಿದರು. 

ಹಾಸಿಗೆ ಹಿಡಿದ ಮಕ್ಕಳ ಕುಟುಂಬಗಳಿಗೆ ಅಗತ್ಯವಿರುವ ಸಹಾಯವನ್ನು ಸಮಯಕ್ಕೆ ಸರಿಯಾಗಿ ಒದಗಿಸಲು ಮತ್ತು ಅವರ ಜೀವನ ಮಟ್ಟವನ್ನು ಸುಧಾರಿಸಲು ಇಂತಹ ಕಾರ್ಯಕ್ರಮಗಳನ್ನು ಮುಂದೆಯೂ ಬಲಪಡಿಸಲಾಗುವುದು ಎಂದು ಬಿ.ಆರ್.ಸಿ ಅಧಿಕಾರಿಗಳು ತಿಳಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries