ಗುವಾಹಟಿ (PTI): ರಾಜ್ಯದಲ್ಲಿ ಮುಸ್ಲಿಂ ವಿವಾಹ ನೋಂದಣಿಯನ್ನು ಕಡ್ಡಾಯಗೊಳಿಸಿದ ನಿಯಮಗಳಿಗೆ ಅಸ್ಸಾಂ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಸಚಿವ ಸಂಪುಟ ಸಭೆಯ ನಂತರ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಅಸ್ಸಾಂನ ಕಡ್ಡಾಯ ಮುಸ್ಲಿಂ ವಿವಾಹಗಳ ನೋಂದಣಿ ಹಾಗೂ ವಿಚ್ಛೇದನ ಕಾಯ್ದೆ-2004ರ 25ನೇ ಕಲಂ ಅನ್ವಯ ಈ ಹೊಸ ನಿಯಮಗಳನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ರಿಜಿಸ್ಟ್ರಾರ್‌ಗಳಿಂದ ಮುಸ್ಲಿಂ ವಿವಾಹಗಳ ನೋಂದಣಿ ಮಾಡಿಸಬೇಕು. ಒಂದು ವೇಳೆ, ವಿವಾಹವಾದವರಿಂದ ಏಕಕಾಲಕ್ಕೆ ಹೆಚ್ಚು ಅರ್ಜಿಗಳು ಸಲ್ಲಿಕೆಯಾದಲ್ಲಿ ಪಂಚಾಯಿತಿ ಮಟ್ಟದ ಅಧಿಕಾರಿಗಳೂ ನೋಂದಣಿ ಮಾಡಬಹುದು ಎಂದು ಮಾಹಿತಿ ನೀಡಿದರು.

