ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಲಕ್ಷಾಂತರ ಜನರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದೆ. ಇದರಿಂದಾಗಿ ಸಾಮಾನ್ಯ ಜನರು, ವಿಶೇಷವಾಗಿ ಬಡವರು ಮತ್ತು ಕಾರ್ಮಿಕರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಈ ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳದ ಎಸ್‌ಐಆರ್ ಪ್ರಕ್ರಿಯೆ ಸಮಯದಲ್ಲಿ ನ್ಯಾಯಾಂಗ ಅಧಿಕಾರಿಗಳು ಮುರ್ಶಿದಾಬಾದ್‌ನ ಸಂಸರ್ ಗಂಜ್‌ನ ಕೃಷಿ ಕಾರ್ಮಿಕರಾದ ಅಬ್ದುಲ್ ರಝಾಕ್ ಎಂಬುವವರ ಮತದಾನದ ಹಕ್ಕನ್ನು ಪರಿಶೀಲನೆಗೆ ಒಳಪಡಿಸಿದ್ದರು.
ಏಪ್ರಿಲ್ ಆರಂಭದಲ್ಲಿ ಅವರ (ರಝಾಕ್) ಹೆಸರನ್ನು ಮತದಾರರ ಪಟ್ಟಿಗೆ ಮರುಸೇರ್ಪಡೆಗೊಳಿಸಿದಾಗ ನಿರಾಳರಾಗಿದ್ದರು. ಇದರಿಂದಾಗಿ ಅವರು ಕೆಲವು ವಾರಗಳ ನಂತರ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಆದರೆ, ಸುಪ್ರೀಂ ಕೋರ್ಟ್‌ನ ಆದೇಶದಂತೆ ಪಶ್ಚಿಮ ಬಂಗಾಳದಲ್ಲಿ ಟ್ರಿಬ್ಯೂನಲ್ (ನ್ಯಾಯಾಧಿಕರಣ) ಸ್ಥಾಪಿಸಲಾಗಿತ್ತು. ನ್ಯಾಯಾಂಗ ಅಧಿಕಾರಿಗಳು ಈ ಹಿಂದೆ ಪರಿಶೀಲನೆಗೆ ಒಳಪಡಿಸಿ ಅನುಮೋದಿಸಿದ್ದ ಮತದಾರರ ಸೇರ್ಪಡೆಯನ್ನು ಮತ್ತೆ ಪ್ರಶ್ನಿಸಲಾಗಿದೆ ಎಂದು ತಿಳಿದುಬಂದ ನಂತರ ರಝಾಕ್ ಅವರಂತೆಯೇ ಸಾಕಷ್ಟು ಮಂದಿ ಚಿಂತೆಗೀಡಾಗಿದ್ದಾರೆ.
'ನನ್ನ ಹೆಸರನ್ನು ಪರಿಶೀಲನೆಗೆ ಒಳಪಡಿಸಿದ ನಂತರ ನಾನು ನನ್ನ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ. ಹೀಗಾಗಿ ನಾನು ನನ್ನ ಮತದಾನದ ಹಕ್ಕನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು. ಏಪ್ರಿಲ್ 23ರಂದು ನಡೆದ ವಿಧಾನಸಭಾ ಚುನಾವಣೆಯಲ್ಲೂ ನಾನು ಮತ ಚಲಾಯಿಸಿದ್ದೇನೆ. ಈಗ ಮತ್ತೆ ನನ್ನ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದರೆ ಏನಾಗುತ್ತದೆ ಎಂದು ನನಗೆ ತಿಳಿದಿಲ್ಲ. ಇದು ಯಾವಾಗಲೂ ತಲೆಯ ಮೇಲೆ ಕತ್ತಿ ತೂಗಾಡುತ್ತಿರುವಂತೆ ಬದುಕುವಂತಾಗಿದೆ' ಎಂದು ರಝಾಕ್ ದೂರವಾಣಿ ಮೂಲಕ ಡೆಕ್ಕನ್ ಹೆರಾಲ್ಡ್ ಪ್ರತಿಕೆಗೆ ತಿಳಿಸಿದ್ದಾರೆ.
ಅಬ್ದುಲ್ ರಝಾಕ್ ಅವರಂತೆಯೇ ಮರುಸೇರ್ಪಡೆಯಾದ 16.10 ಲಕ್ಷ ಜನರ ಸೇರ್ಪಡೆಯನ್ನು ಪ್ರಶ್ನಿಸಿ ಟ್ರಿಬ್ಯೂನಲ್‌ಗಳಿಗೆ (ನ್ಯಾಯಾಧೀಕರಣ) ಮೇಲ್ಮನವಿ ಸಲ್ಲಿಸಲಾಗಿದೆ. ಇದರಿಂದಾಗಿ ಅವರಲ್ಲಿ ಮತ್ತೆ ಭೀತಿ ಶುರುವಾಗಿದೆ.
ಅಂಕಿ-ಅಂಶಗಳ ವಿವರ
ಸುಮಾರು 63.66 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು.
60.06 ಲಕ್ಷಕ್ಕೂ ಹೆಚ್ಚು ಜನರನ್ನು ಪರಿಶೀಲನೆಗೆ ಒಳಪಡಿಸಲಾಗಿತ್ತು.
ಪರಿಶೀಲನೆಯ ನಂತರ 27.16 ಲಕ್ಷ ಜನರ ಮತದಾನದ ಹಕ್ಕನ್ನು ರದ್ದುಗೊಳಿಸಲಾಯಿತು ಮತ್ತು 32.68 ಲಕ್ಷ ಜನರನ್ನು ಪಟ್ಟಿಗೆ ಸೇರಿಸಲಾಯಿತು.
ಟ್ರಿಬ್ಯೂನಲ್‌ನಲ್ಲಿ ಮೇಲ್ಮನವಿ ಮತ್ತು ವಿಳಂಬ
ಪ್ರಸ್ತುತ ನ್ಯಾಯಾಧೀಕರಣದ ಮುಂದೆ ಒಟ್ಟು 38.31 ಲಕ್ಷ ಮೇಲ್ಮನವಿಗಳು ಬಾಕಿ ಇವೆ.
ಇದರಲ್ಲಿ 22.21 ಲಕ್ಷ ಮೇಲ್ಮನವಿಗಳನ್ನು ಹಕ್ಕು ಕಳೆದುಕೊಂಡ ಜನರು ಸಲ್ಲಿಸಿದ್ದರೆ, 16.10 ಲಕ್ಷ ಮೇಲ್ಮನವಿಗಳನ್ನು ಅನುಮೋದನೆ ಪಡೆದವರ ವಿರುದ್ಧ ಸಲ್ಲಿಸಲಾಗಿದೆ.
ಕಳೆದ 5 ತಿಂಗಳಲ್ಲಿ ಕೇವಲ 1.26 ಲಕ್ಷ (ಸುಮಾರು 3%) ಮೇಲ್ಮನವಿಗಳು ಮಾತ್ರ ಇತ್ಯರ್ಥವಾಗಿವೆ. ವಿಶೇಷವೆಂದರೆ, ಇತ್ಯರ್ಥವಾದವುಗಳಲ್ಲಿ ಶೇ 93ರಷ್ಟು ಜನರು ನಿಜವಾದ ಮತದಾರರು ಎಂದು ತಿಳಿದುಬಂದು ಅವರಿಗೆ ಮತ್ತೆ ಮತದಾನದ ಹಕ್ಕು ನೀಡಲಾಗಿದೆ.
ಟಿಎಂಸಿ ಹಾಗೂ ಕಾಂಗ್ರೆಸ್ ಆರೋಪ
ಚುನಾವಣಾ ಆಯೋಗವು ಬಿಜೆಪಿಗೆ ಅನುಕೂಲ ಮಾಡಿಕೊಡಲು ಉದ್ದೇಶಪೂರ್ವಕವಾಗಿ ನಿಜವಾದ ನಾಗರಿಕರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಆಯೋಗದ ಒಳಗಡೆಯೇ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯಗಳಿವೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಹಳೆಯ ಪಟ್ಟಿಯನ್ನೇ ಬಳಸಿ ಮತ್ತೆ ಚುನಾವಣೆ ನಡೆಸಬೇಕೆಂದು ಆಗ್ರಹಿಸಿದ್ದಾರೆ.
ಈ ಆರೋಪಗಳನ್ನು ಬಿಜೆಪಿ ತಳ್ಳಿಹಾಕಿದೆ. ಚುನಾವಣಾ ಆಯೋಗವು ಸರಿಯಾದ ರೀತಿಯಲ್ಲಿ ಚುನಾವಣೆಯನ್ನು ನಡೆಸಿದೆ ಎಂದು ಹೇಳಿದೆ.
ಯಾರ ಹೆಸರು ತಪ್ಪಾಗಿ ವಿಲೇವಾರಿಯಾಗಿದೆಯೋ, ಅವರು ಸೂಕ್ತ ದಾಖಲೆಗಳನ್ನು ನೀಡಿ ತಮ್ಮ ಹೆಸರನ್ನು ಪಟ್ಟಿಯಲ್ಲಿ ಮರು ಸೇರ್ಪಡೆಗೊಳ್ಳಬಹುದು ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ.
ವಿಚಾರಣೆಯ ನಿಧಾನಗತಿಯಿಂದಾಗಿ (ಬಾಕಿ ಇರುವ ಪ್ರಕರಣಗಳು) ಸಾಮಾನ್ಯ ಜನರು ಮುಂಬರುವ ಚುನಾವಣೆಗಳಲ್ಲೂ ಮತ ಚಲಾಯಿಸಲು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಅನಿಶ್ಚಿತತೆಯಲ್ಲಿದ್ದಾರೆ.
-ಇಮ್ರಾನ್ ಹುಸೇನ್, ಮುರ್ಶಿದಾಬಾದ್‌ನ ಸಂಸರ್ ಗಂಜ್‌ನ ಶಾಲಾ ಶಿಕ್ಷಕ ನನ್ನ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಿದ್ದರಿಂದ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಸಾಧ್ಯವಾಗಲಿಲ್ಲ. ಮುಂದಿನ ಚುನಾವಣೆಯಲ್ಲಿ ಮತ್ತೆ ಮತ ಚಲಾಯಿಸುತ್ತೇನೆ ಎಂದು ಭಾವಿಸಿದ್ದೆ. ಆದರೆ ಈಗ ನಾನು ಹಲವು ಚುನಾವಣೆಗಳನ್ನು ತಪ್ಪಿಸಿಕೊಳ್ಳಬೇಕಾಗಬಹುದು ಎಂದೆನಿಸುತ್ತಿದೆ- ಅನಿರ್ಬನ್ ಬ್ಯಾನರ್ಜಿ, ಟಿಎಂಸಿಯ ಮಮತಾ ಬ್ಯಾನರ್ಜಿ ಬಣದ ವಕ್ತಾರ ಎಸ್‌ಐಆರ್ ಪ್ರಕ್ರಿಯೆ ಹೆಸರಿನಲ್ಲಿ ಚುನಾವಣಾ ಆಯೋಗವು ಪಶ್ಚಿಮ ಬಂಗಾಳದ ಜನರಿಗೆ ಹಲವು ತಿಂಗಳುಗಳ ಕಾಲ ಕಿರುಕುಳ ನೀಡಿದೆ.

