ಉಪ್ಪಳ: ಐಲ ಸಮುದ್ರ ದಡದಲ್ಲಿ ಪತ್ತೆಯಾಗಿದ್ದ ಮೃತದೇಹ ಮುಳಿಂಜ ಮಹಾನಗರ ನಿವಾಸಿ, ದೈವ ನರ್ತನ ಕಲಾವಿದ ತಿಮ್ಮಪ್ಪ(60) ಎಂಬವರದ್ದೆಂದುಗುರುತುಪತ್ತೆಹಚ್ಚಲಾಗಿದೆ. ಬುಧವಾರ ಐಲ ಸಮುದ್ರ ಕರಾವಳಿಯಲ್ಲಿ ಅಪರಿಚಿತ ಮೃತದೇಹ ಪತ್ತೆಯಾಘಿದ್ದು, ಕರಾವಳಿ ಠಾಣೆ ಪೊಲೀಸರ ಸಹಾಐದಿಂದ ಮೃತದೇಹ ಮಂಗಲ್ಪಾಡಿಯ ತಾಲೂಕು ಆಸ್ಪತ್ರೆ ಶವಾಗರಕ್ಕೆ ತಲುಪಿಸಲಾಗಿತ್ತು.
ಬುಧವಾರ ಬೆಳಗ್ಗೆ ಉಪ್ಪಳಕ್ಕೆಂದ ತಿಳಿಸಿ, ತಿಮ್ಮಪ್ಪ ಮನೆಯಿಂದ ತೆರಳಿದ್ದರು. ಅಂದು ಸಂಜೆಯವರೆಗೂ ಮನೆಗೆ ವಾಪಸಾಗದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಡಿದರೂ, ಪತ್ತೆಯಾಗದೆ ಹಿನ್ನೆಲೆಯಲ್ಲಿ ಮಂಜೇಶ್ವರ ಠಾಣೆ ಪೋಲೀಸರಿಗೆ ದೂರು ನಿಡಲು ಮುಂದಾಗುತ್ತಿದ್ದಂತೆ ಮೃತದೇಹದ ಗುರುತು ಪತ್ತೆಯಾಗಿದೆ.

