ಕಾಸರಗೋಡು: ಚೆರ್ಕಳ ಪಾಡಿ ಶ್ರೀನಿಲಯಂನ ಟಿ.ಕೆ. ಕೋರನ್ ಬೆಳ್ಳಪ್ಪಾಡ (73)ಅವರ ಮೃದೇಹ ಮನೆ ಸನಿಹದ ಮರದಲ್ಲಿ ನೇಣು ಬಿಗಿದ ಸಥಿತಿಯಲ್ಲಿ ಪತ್ತೆಯಾಗಿದೆ. ಶುಕ್ರವಾರ ರಾತ್ರಿ ನಾಪತ್ತೆಯಾಗಿದ್ದ ಹಿನ್ನೆಲೆಯಲ್ಲಿಹುಡುಕಾಡುವ ಮಧ್ಯೆ ಮನೆ ಸನಿಹದ ಮರದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ. ತಕ್ಷಣ ಮನೆಯವರು ಇವರನ್ನು ನೇಣಿನಿಮದ ಕೆಳಗಿಳಿಸಿ ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ವಿದ್ಯಾನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

