ಮಂಜೇಶ್ವರ: ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಂಗಡಿಯ ಅಂಗಡಿಪದವಿನ ಹಳೇ ಹೆಂಚಿನ ಮನೆಯಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ವ್ಯಕ್ತಿಯನ್ನು ಹೊಸಪೇಟೆಯ ಲಿಂಗನಾಯಕನಹಳ್ಳಿಯ ದಿ. ಪೀರನಾಯ್ಕ ಎಂಬವರ ಪುತ್ರ ಸತೀಶ (38) ಎಂದು ಗುರುತಿಸಲಾಗಿದೆ.
ಶುಕ್ರವಾರ ರಾತ್ರಿ 8ರ ವೇಳೆಗೆ ಅಂಗಡಿಪದವು ನಿವಾಸಿ ನರಸಿಂಹಮೂರ್ತಿ ಎಂಬವರ ಎರಡಂತಸ್ತಿನ ಮನೆಯ ಕೆಳಭಾಗದ ಅಡುಗೆ ಕೊಠಡಿಯಲ್ಲಿ ತಲೆ ಛಿದ್ರಗೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಇದೇ ಕೋಣೆಯಲ್ಲಿ ಮದ್ಯಪಾನ ಮಾಡಿ, ಹೊಡೆದಾಟ ನಡೆಸಿದ ಕುರುಹುಗಳು ಪತ್ತೆಯಾಗಿದ್ದು, ತಂಡಗಳೊಳಗೆ ನಡೆದ ಕಲಹದಲ್ಲಿ ಕೊಲೆ ನಡೆದಿರಬೇಕೆಂದು ಪೊಲೀಸರು ಸಂಶಯ ವ್ಯಕತಪಡಿಸಿದ್ದರು. ಮಂಜೇಶ್ವರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಜತೆಗಿದ್ದವರ ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


