HEALTH TIPS

ವೃದ್ಧೆ ಏಕಾಂಗಿಯಾಗಿರುವ ಮನೆ ಬೀಗ ಒಡೆದು ನುಗ್ಗಿ 2ಪವನು ಚಿನ್ನ, 50ಸಾವಿರ ರೂ.ನಗದು ಕಳವು

ಬದಿಯಡ್ಕ: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಏಳ್ಕಾನ ಸನಿಹದ ಬಾಳೆಗಳಿ ನಿವಾಸಿ ಪಾರ್ವತಿ (73) ಎಂಬವರ ಮನೆ ಬಾಗಿಲು ಒಡೆದು ನುಗ್ಗಿದ 2 ಪವನ್ ಚಿನ್ನಾಭರಣ ಹಾಗೂ 50 ಸಾವಿರ ರೂಪಾಯಿ ದೋಚಿದ್ದಾರೆ. ಪಾರ್ವತೀ ಅವರ ಪುತ್ರಿ ನೀಲೇಶ್ವರದಲ್ಲಿ ವೈದ್ಯರಾಗಿದ್ದು, ಇವರು ರಾತ್ರಿ ವೇಳೆ ಆಹಾರ ಸೇವಿಸಿ ಸನಿಹದ ತರವಾಡು ಮನೆಗೆ ವಾಸ್ತವ್ಯಕ್ಕಾಗಿ ತೆರಳುತ್ತಿದ್ದರು. ಎಂದಿನಂತೆ ತರವಾಡು ಮನೆಗೆ ತೆರಳಿ, ಮರುದಿನ ಬೆಳಗ್ಗೆ ಮನೆಗೆ ಆಗಮಿಸಿದಾಗ ಕಳವು ಬೆಳಕಿಗೆ ಬಂದಿದೆ. ಮನೆಯೊಳಗಿನ ಕಪಾಟಿನಲ್ಲಿರಿಸಿದ್ದ ಬಟ್ಟೆ ಚಲ್ಲಾಪಿಲ್ಲಿಗೊಳಿಸಿದ್ದು, ತಪಾಸಣೆ ನಡೆಸಿದಾಗ ಎರಡು ಪವನು ಚಿನ್ನ ಹಾಗೂ 50ಸಾವಿರ ರೂ. ನಗದು ಕಳವಾಗಿತ್ತು. ಈ ಬಗ್ಗೆ ಪೊಲೀಸರು ಕೇಸುದಾಖಲಿಸಿಕೊಂಡಿದ್ದು, ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries