HEALTH TIPS

ಉಕ್ಕಿನ ತ್ಯಾಜ್ಯದಿಂದ ವಿಶ್ವದ ಅತಿ ಉದ್ದದ ರಸ್ತೆ ನಿರ್ಮಿಸಿದ ಜಿಂದಾಲ್ ಉಕ್ಕು ಕಂಪೆನಿ: ಗಿನ್ನೆಸ್ ದಾಖಲೆಗೆ ಸೇರ್ಪಡೆ

ರಾಯಪುರ: ಜಿಂದಾಲ್ ಉಕ್ಕು ಕಂಪೆನಿ ಸಂಪೂರ್ಣವಾಗಿ ಸಂಸ್ಕರಿಸಿದ ಉಕ್ಕಿನ ತ್ಯಾಜ್ಯದಿಂದ ವಿಶ್ವದ ಅತ್ಯಂತ ಉದ್ದದ ರಸ್ತೆಯನ್ನು ನಿರ್ಮಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ.


ಚತ್ತೀಸ್‌ಗಢದ ರಾಯ್‌ಗಢ ಜಿಲ್ಲೆಯಲ್ಲಿ ಭಾರೀ ಸರಕು ವಾಹನಗಳ ಸಂಚಾರಕ್ಕೆ 1.85 ಕಿ.ಮೀ.ಉದ್ದದ ಈ ಚತಷ್ಪಥ ರಸ್ತೆ ನಿರ್ಮಿಸಲಾಗಿದ್ದು, ಇದು ನೇರವಾಗಿ ರಾಷ್ಟ್ರೀಯ ಹೆದ್ದಾರಿ-49ಕ್ಕೆ ಸಂಪರ್ಕ ಕಲ್ಪಿಸುತ್ತದೆ.

ನೈಸರ್ಗಿಕ ಜಲ್ಲಿ ಕಲ್ಲುಗಳನ್ನು ಬಳಸದೇ ಇರುವುದು ಈ ಯೋಜನೆಯ ವಿಶೇಷತೆ. ರಸ್ತೆಯ ಅಡಿಪಾಯದಿಂದ ಹಿಡಿದು ಮೇಲಿನ ಬಿಟುಮಿನ್ ಪದರದವರೆಗೆ ಪ್ರತಿಯೊಂದನ್ನೂ ಶೇ.100 ಸಂಸ್ಕರಿಸಿದ ಕೈಗಾರಿಕಾ ಉಕ್ಕು ತ್ಯಾಜ್ಯ ಬಳಸಿ ನಿರ್ಮಾಣ ಮಾಡಲಾಗಿದೆ.

ದೇಶದ ಸಿವಿಲ್ ಇಂಜಿನಿಯರಿಂಗ್ ವಿಜ್ಞಾನಿಗಳು ಮತ್ತು ಗಿನ್ನೆಸ್ ವಿಶ್ವ ದಾಖಲೆಯ ಅಧಿಕೃತ ತೀರ್ಪುಗಾರರ ನಿಯೋಗ ರಾಯಗಢಕ್ಕೆ ಭೇಟಿ ನೀಡಿದೆ. ಇಂಜಿನಿಯರಿಂಗ್ ದತ್ತಾಂಶವನ್ನು, ವಸ್ತುಗಳ ಗುಣಮಟ್ಟವನ್ನು ಪರಿಶೀಲಿಸಿದೆ. ಕ್ಷೇತ್ರಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವ ಜಿತೇಂದ್ರ ಸಿಂಗ್ ಹಾಗೂ ಜಿಂದಾಲ್ ಸ್ಟೀಲ್ ಲಿಮಿಟೆಡ್ ಅಧ್ಯಕ್ಷ ನವೀನ್ ಜಿಂದಾಲ್ ಹೊಸದಿಲ್ಲಿಯಲ್ಲಿ ಜಂಟಿಯಾಗಿ ವರ್ಚುವಲ್ ಸಮಾರಂಭದ ಮೂಲಕ ಈ ರಸ್ತೆಯನ್ನು ಅಧಿಕೃತವಾಗಿ ಉದ್ಘಾಟಿಸಿದರು.

ಭಾರತದ ''ವೇಸ್ಟ್ ಟು ವೆಲ್ತ್'' (ತ್ಯಾಜ್ಯದಿಂದ ಸಂಪತ್ತು) ಪರಿಕಲ್ಪನೆಗೆ ನೈಜ ರೂಪು ನೀಡಿರುವ ಈ ಯೋಜನೆಯಲ್ಲಿ ಉಕ್ಕು ಕಾರ್ಖಾನೆಯ ಸುಮಾರು 2 ಲಕ್ಷ ಟನ್ ತ್ಯಾಜ್ಯವನ್ನು ಮರು ಬಳಕೆ ಮಾಡಲಾಗಿದೆ. ಈ ರಸ್ತೆ ಕಲ್ಲು ಗಣಿಗಾರಿಕೆಯನ್ನು ತಡೆದು ನೈಸರ್ಗಿಕ ಕಲ್ಲಿನ ಸಂಪನ್ಮೂಲಗಳನ್ನು ಸಂರಕ್ಷಿಸಿರುವುದಲ್ಲದೆ, ಅಪಾರ ರಚನಾತ್ಮಕ ಮತ್ತು ಆರ್ಥಿಕ ಪ್ರಯೋಜನಗಳನ್ನು ನೀಡಿದೆ. ಈ ರಸ್ತೆ ನಿರಂತರವಾಗಿ ಸಂಚರಿಸುವ ಭಾರೀ ವಾಣಿಜ್ಯ ಮತ್ತು ಕೈಗಾರಿಕಾ ಟ್ರಕ್‌ಗಳ ಭಾರವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಇದು ಸಾಂಪ್ರದಾಯಿಕ ಬಿಟುಮಿನಸ್ ರಸ್ತೆಗಳಿಗಿಂತ ಸುಮಾರು ಶೆ. 35 ತೆಳುವಾಗಿದ್ದು, ನಿರ್ಮಾಣ ವೆಚ್ಚವನ್ನು ಶೇ. 40ರಷ್ಟು ಕಡಿಮೆ ಮಾಡಿದೆ.

ಐಂದಾಲ್ ಸ್ಟೀಲ್, ಕೌನ್ಸಿಲ್ ಆಫ್ ಸೈಂಟಿಫಿಕ್ ಆಯಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‌ಐಆರ್) ಮತ್ತು ಸೆಂಟ್ರಲ್ ರೋಡ್ ರಿಸರ್ಚ್ ಇನ್ಸ್ಟಿಟ್ಯೂಟ್ (ಸಿಆರ್‌ಆರ್‌ಐ) ನಡುವಿನ ಸಹಭಾಗಿತ್ವದ ಮೂಲಕ ಈ ಸಾಧನೆ ಮಾಡಲಾಗಿದೆ.

''ಭಾರತದ ಬೆಳವಣಿಗೆಯ ಹಾದಿಯು ಪರಿಸರವನ್ನು ರಕ್ಷಿಸುವ ಜೊತೆಗೆ ನೈಜ ಆರ್ಥಿಕ ಮೌಲ್ಯವನ್ನು ಸೃಷ್ಟಿಸುವ ನಾವಿನ್ಯತೆಗಳಿಂದ ಉತ್ತೇಜಿತಗೊಳ್ಳಬೇಕು. ಒಮ್ಮೆ ಕೈಗಾರಿಕಾ ತ್ಯಾಜ್ಯವೆಂದು ತಳ್ಳಿ ಹಾಕಲ್ಪಟ್ಟದ್ದನ್ನು ರಾಷ್ಟ್ರ ನಿರ್ಮಾಣದ ಪ್ರಮುಖ ಭಾಗವಾಗಿ ಪರಿವರ್ತಿಸಬಹುದು ಎಂಬುದನ್ನು ಈ ರಸ್ತೆ ನಿರೂಪಿಸುತ್ತದೆ'' ಎಂದು ನವೀನ್ ಜಿಂದಾಲ್ ಹೇಳಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries