HEALTH TIPS

ದ್ವಿಪಕ್ಷೀಯ ಪಾಲುದಾರಿಕೆ ವಿಚಾರದಲ್ಲಿ ಒಮ್ಮತಕ್ಕೆ ಬಂದ ಮೋದಿ, ಷಿ: ಚೀನಾ

ಬೀಜಿಂಗ್‌: ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್‌ ಶೃಂಗಸಭೆ ಸಂದರ್ಭದಲ್ಲಿ ನಡೆಸಿದ ದ್ವಿಪಕ್ಷೀಯ ಸಭೆ ವೇಳೆ, ಉಭಯ ರಾಷ್ಟ್ರಗಳ ಪರಸ್ಪರ ಪಾಲುದಾರಿಕೆಗೆ ಸಂಬಂಧಿಸಿದಂತೆ ʼಅತಿ ಮುಖ್ಯ ಒಮ್ಮತಕ್ಕೆʼ ಬಂದಿದ್ದಾರೆ ಎಂದು ವಿದೇಶಾಂಗ ಸಚಿವ ವಾಂಗ್‌ ಯಿ ಸೋಮವಾರ ಹೇಳಿದ್ದಾರೆ.  


ನವದೆಹಲಿಯಲ್ಲಿ ಸೆಪ್ಟೆಂಬರ್ 12-13 ರಂದು ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಷಿ ಅವರು ಭಾರತ ಪ್ರವಾಸ ಕೈಗೊಂಡಿದ್ದರು. ಅದೇ ವೇಳೆ ಮೋದಿ ಜೊತೆ ಸಭೆ ನಡೆಸಿದ್ದರು. ಈ ಬಗ್ಗೆ ಸಂಕ್ಷಿಪ್ತ ಮಾಹಿತಿ ಹಂಚಿಕೊಂಡಿರುವ ವಿದೇಶಾಂಗ ಸಚಿವ ವಾಂಗ್‌, ಚೀನಾ-ಭಾರತ ಸಂಬಂಧ ಕುರಿತ ಕಾರ್ಯತಂತ್ರ, ದೀರ್ಘಕಾಲೀನ ವಿಷಯಗಳ ಕುರಿತು ಉಭಯ ನಾಯಕರ ನಡುವೆ ವಿಚಾರ ವಿನಿಮಯವಾಗಿದೆ ಎಂದಿದ್ದಾರೆ.

ʼಚೀನಾ ಕಮ್ಯುನಿಸ್ಟ್ ಪಾರ್ಟಿʼಯ ಕೇಂದ್ರ ಸಮಿತಿಯ ರಾಜಕೀಯ ಬ್ಯೂರೋದ ಸದಸ್ಯರೂ ಆಗಿರುವ ವಾಂಗ್, ಚೀನಾ ಮತ್ತು ಭಾರತ ಪರಸ್ಪರರ ಸಾಮರ್ಥ್ಯಗಳನ್ನು ಬಳಸಿಕೊಳ್ಳಬಹುದು, ಪರಸ್ಪರ ಬೆಂಬಲಿಸಬಹುದು, ಯಶಸ್ಸು ಸಾಧಿಸಲು ಪರಸ್ಪರ ನೆರವಾಗಬಹುದು ಎಂದು ಸಭೆ ವೇಳೆ ಷಿ ಹೇಳಿದ್ದಾರೆʼ ಎಂಬುದಾಗಿ ತಿಳಿಸಿದ್ದಾರೆ.

ಗಡಿ ಪ್ರದೇಶಗಳಲ್ಲಿ ಜಂಟಿಯಾಗಿ ಶಾಂತಿ ಮತ್ತು ಸಹಬಾಳ್ವೆ ಕಾಪಾಡಿಕೊಳ್ಳಲು ಷಿ-ಮೋದಿ ಒಪ್ಪಿದ್ದಾರೆ. ಭಿನ್ನಾಭಿಪ್ರಾಯಗಳು, ವಿರೋಧಾಭಾಸಗಳನ್ನು ಸೂಕ್ತರೀತಿಯಲ್ಲಿ ನಿರ್ವಹಿಸಲು ಸಹಮತ ಸೂಚಿಸಿದ್ದಾರೆ. ಉಭಯ ನಾಯಕರ ಭೇಟಿ, ಸಭೆಯು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ದ್ವಿಪಕ್ಷೀಯ ಸಂಬಂಧ ಸುಧಾರಣೆ ಮತ್ತು ಅಭಿವೃದ್ಧಿಯನ್ನು ಎರಡೂ ರಾಷ್ಟ್ರಗಳ 280 ಕೋಟಿ ಜನರು ಸ್ವಾಗತಿಸಿದ್ದಾರೆ ಎಂದು ವಾಂಗ್ ಹೇಳಿದ್ದಾರೆ.

ನವದೆಹಲಿಯಲ್ಲಿರುವ ʼಭಾರತ ಮಂಟಪಂʼನಲ್ಲಿ ನಡೆದ ಶೃಂಗಸಭೆಯಲ್ಲಿ ಬ್ರಿಕ್ಸ್‌ನ 11 ಸದಸ್ಯ ರಾಷ್ಟ್ರಗಳ ನಾಯಕರು, 10 ಪಾಲುದಾರ ದೇಶಗಳು ಮತ್ತು ಹಲವು ಅಂತರರಾಷ್ಟ್ರೀಯ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. 2027ರ ಬ್ರಿಕ್ಸ್ ಅಧ್ಯಕ್ಷ ಸ್ಥಾನವನ್ನು ಚೀನಾ ವಹಿಸಿಕೊಂಡಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries