HEALTH TIPS

ಉಗ್ರ ಮಸೂದ್‌ ಅಜರ್‌ ಸುಳಿವು ನೀಡಿದವರಿಗೆ ₹ 24 ಲಕ್ಷ ಬಹುಮಾನ ಘೋಷಿಸಿದ ಪಾಕ್‌

ಇಸ್ಲಾಮಾಬಾದ್‌: ಜೈಷ್-ಎ-ಮೊಹಮ್ಮದ್ (ಜೆಇಎಂ) ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ ಬಗ್ಗೆ ಸುಳಿವು ನೀಡಿದವರಿಗೆ ನೀಡಲಾಗುವ ಬಹುಮಾನದ ಮೊತ್ತವನ್ನು ಪಾಕಿಸ್ತಾನ ಸರ್ಕಾರವು 70 ಲಕ್ಷ ಪಾಕಿಸ್ತಾನಿ ರೂಪಾಯಿಗೆ (ಭಾರತೀಯ ಮೌಲ್ಯದಲ್ಲಿ ₹24.09 ಲಕ್ಷ) ಹೆಚ್ಚಿಸಿದೆ.  


ಪಾಕಿಸ್ತಾನದ ತನಿಖಾ ಸಂಸ್ಥೆ (ಎಫ್‌ಐಎ) ತನ್ನ ಅತ್ಯಂತ ಪ್ರಮುಖ ಅಪರಾಧಿಗಳ ಪಟ್ಟಿಯಲ್ಲಿ ಮಸೂದ್ ಹೆಸರನ್ನು ಮುಂದುವರಿಸಿದೆ.

ಮಸೂದ್ ಅಜರ್ ಪಾಕಿಸ್ತಾನದಲ್ಲಿ ನೆಲೆಸಿಲ್ಲ, ಆತ ಅಫ್ಗಾನಿಸ್ತಾನಕ್ಕೆ ಪರಾರಿಯಾಗಿದ್ದಾನೆ ಎಂದು ಪಾಕ್ ಸರ್ಕಾರ ಹಲವು ವರ್ಷಗಳಿಂದ ವಾದಿಸುತ್ತಿದೆ. ಹೀಗಿದ್ದರೂ, ಎಫ್‌ಐಎ ಬಿಡುಗಡೆ ಮಾಡಿರುವ 2026ರ ಪ್ರಮುಖ ಭಯೋತ್ಪಾದಕರ ಪಟ್ಟಿಯಲ್ಲಿ ಮಸೂದ್ ಅಜರ್ ಹೆಸರು ಇಂದಿಗೂ ಇದೆ.

58 ವರ್ಷದ ಮಸೂದ್ ಅಜರ್ ಪಾಕಿಸ್ತಾನ ಮೂಲದ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಹಾಗೂ ಮುಖ್ಯಸ್ಥನಾಗಿದ್ದಾನೆ. ಕಳೆದ ಎರಡು ದಶಕಗಳಲ್ಲಿ ಭಾರತದ ವಿರುದ್ಧ ನಡೆದ ಹಲವು ಉಗ್ರ ದಾಳಿಗಳಲ್ಲಿ ಈ ಸಂಘಟನೆಯು ಭಾಗಿಯಾಗಿದೆ. ಈ ಉಗ್ರ ಸಂಘಟನೆಯು ಪಾಕಿಸ್ತಾನದಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಭಾರತ ನಡೆಸಿದ 'ಆಪರೇಷನ್ ಸಿಂಧೂರ್' ದಾಳಿಯ ವೇಳೆ ಬಾಂಬ್ ದಾಳಿಗೆ ಮಸೂದ್ ಒಳಗಾಗಿದ್ದಾನೆ ಎಂದು ವರದಿಯಾಗಿತ್ತು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಮಸೂದ್ ಅಜರ್‌ನನ್ನು ಈಗಾಗಲೇ ಅಂತರರಾಷ್ಟ್ರೀಯ ಭಯೋತ್ಪಾದಕ ಎಂದು ಘೋಷಿಸಿದೆ.

ಮುಂಬರುವ ಅಕ್ಟೋಬರ್ ತಿಂಗಳಲ್ಲಿ ವಿಶ್ವ ಹಣಕಾಸು ಮಂಡಳಿ ( ಎಫ್‌ಎಟಿಎಫ್) ಸಭೆಯು ಪ್ಯಾರಿಸ್‌ನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ತೀವ್ರ ಕಣ್ಗಾವಲಿನಲ್ಲಿರುವ ದೇಶಗಳ ಪರಿಶೀಲನೆ ಹಾಗೂ ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮಸೂದ್ ಅಜರ್‌ನ ಸುಳಿವು ನೀಡುವವರಿಗೆ ಬಹುಮಾನದ ಮೊತ್ತವನ್ನು ಹೆಚ್ಚಳ ಮಾಡಿದೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries