HEALTH TIPS

ಮುಖ್ಯವಾಹಿನಿಯ ವಿರೋಧ ಪಕ್ಷಗಳತ್ತ ಕಾಕ್ರೋಚ್‌ ಜನತಾ ಪಾರ್ಟಿ?

ನವದೆಹಲಿ: ಸಾಮಾಜಿಕ ಚಳವಳಿಗಳಲ್ಲಿ ತೊಡಗಿರುವ ಕಾಕ್ರೋಚ್‌ ಜನತಾ ಪಾರ್ಟಿ (ಸಿಜೆಪಿ) ನಿಧಾನವಾಗಿ ಮುಖ್ಯವಾಹಿನಿಯ ವಿರೋಧ ಪಕ್ಷಗಳ ರಾಜಕೀಯ ವಲಯದ ಭಾಗವಾಗುವತ್ತ ಸಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 


ಚುನಾವಣಾ ಆಯೋಗದಲ್ಲಿನ ಬೆಳವಣಿಗೆಗಳ ನಂತರ ಹೋರಾಟದ ಕಾರ್ಯತಂತ್ರ ಕುರಿತು ಚರ್ಚಿಸಲು ಸಭೆಯೊಂದನ್ನು ಆಯೋಜಿಸುವ ಕುರಿತು ವಿಪಕ್ಷಗಳ ನಾಯಕರಿಗೆ ಪತ್ರ ಬರೆದಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ.ಬೇಬಿ ಅವರು, ಸಿಜೆಪಿಯನ್ನೂ ಆಹ್ವಾನಿಸಿ ಪತ್ರ ಬರೆದಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. 

ಈ ಮೂಲಕ ಎಡಪಕ್ಷವು ಇತರ ರಾಜಕೀಯ ಪಕ್ಷಗಳ ಸಾಲಿನಲ್ಲಿಯೇ ಸಿಜೆಪಿಯನ್ನು ಗುರುತಿಸಿದಂತಾಗಿದೆ.

ಇಲ್ಲಿಯವರೆಗೆ ತೃಣಮೂಲ ಕಾಂಗ್ರೆಸ್‌ (ಟಿಎಂಸಿ), ಆಮ್‌ ಆದ್ಮಿ ಪಕ್ಷ (ಎಎಪಿ), ಸಿಪಿಎಂ, ಸಿಪಿಐ, ಸಿಪಿಐ(ಎಂಎಲ್‌) ಮತ್ತು ಇತರ ಕೆಲ ಪಕ್ಷಗಳು ಸಿಜೆಪಿ ಜತೆ ಅನೌಪಚಾರಿಕ ಸಂಪರ್ಕ ಮತ್ತು ಸಹಕಾರ ಹೊಂದಿದ್ದವು. ಇದೇ ವೇಳೆ ಸಿಜೆಪಿ ತಾನು ರಾಜಕೀಯ ಪಕ್ಷವಲ್ಲ, ಬದಲಿಗೆ 'ಒತ್ತಡ ಹೇರುವ ಗುಂಪು' ಎಂದು ಪ್ರತಿಪಾದಿಸಿಕೊಂಡು ಬಂದಿದೆ. ಇದೀಗ ವಿಪಕ್ಷಗಳ ಜಂಟಿ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಬೇಬಿ ಅವರು ಯುವ ಸಂಘಟನೆಗೆ ಪತ್ರ ಬರೆದಿರುವುದು ಸಿಜೆಪಿಯ ಸಾಮರ್ಥ್ಯಕ್ಕೆ ಸಿಕ್ಕ ಮನ್ನಣೆ ಎಂದೇ ವಿವರಿಸಲಾಗುತ್ತಿದೆ.

ಬೇಬಿ ಪತ್ರದಲ್ಲೇನಿದೆ:

'ಸಾಂವಿಧಾನಿಕ ಮೌಲ್ಯಗಳು ಮತ್ತು ನಾಗರಿಕರ ಮತದಾನದ ಹಕ್ಕನ್ನು ರಕ್ಷಿಸುವಲ್ಲಿ ಬದ್ಧತೆ ಹೊಂದಿರುವ ಪಕ್ಷಗಳಾಗಿ ಈಗಿನ ಪರಿಸ್ಥಿತಿ ಬಗ್ಗೆ ನಾವು ತುರ್ತಾಗಿ ಸಭೆ ಸೇರಿ ಚರ್ಚಿಸುವ ಅಗತ್ಯವಿದೆ. ಪ್ರಜಾಪ್ರಭುತ್ವ, ಜಾತ್ಯತೀತ ಮತ್ತು ಮತದಾನದ ಹಕ್ಕಿನ ರಕ್ಷಣೆಗಾಗಿ ನಾವೆಲ್ಲೂ ಒಗ್ಗೂಡಬೇಕು ಎಂಬುದು ದೇಶದ ಜನರ ನಿರೀಕ್ಷೆಯಾಗಿದೆ' ಎಂದು ಬೇಬಿ ಅವರು ಸಿಜೆಪಿಗೆ ಸೆ. 23ರಂದು ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಅದರ ಬೆನ್ನಲ್ಲೇ ಸಿಜೆಪಿ ಸ್ಥಾಪಕ ಅಭಿಜಿತ್‌ ದೀಪ್ಕೆ ಅವರು, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ಅವರು 48 ಗಂಟೆಗಳಲ್ಲಿ ರಾಜೀನಾಮೆ ನೀಡದಿದ್ದರೆ, 'ಜಂತರ್‌ ಮಂತರ್‌ 2.0' ನಡೆಸಲಾಗುವುದು ಎಂದು ಎಚ್ಚರಿಸುವ ಮೂಲಕ ಈ ವಿಚಾರದಲ್ಲಿ ತಮ್ಮ ಮುಂದಿನ ನಡೆಯನ್ನು ಸ್ಪಷ್ಟಪಡಿಸಿದ್ದರು.

ಇದೇ 30ರಂದು 'ಇಂಡಿಯಾ' ಸಭೆ:

'ಇಂಡಿಯಾ' ಮೈತ್ರಿಕೂಟದ ಸಭೆ ಇದೇ 30ರಂದು ನಡೆಯಲಿದೆ. ಸಭೆಯಲ್ಲಿ ಎಡಪಕ್ಷಗಳು, ಮೋದಿ ಸರ್ಕಾರದ ವಿರುದ್ಧದ ಹೋರಾಟ ಮತ್ತು ಸಿಇಸಿ ವಿರುದ್ಧ ನಡೆಸುವ ಪ್ರತಿಭಟನೆಗಳಲ್ಲಿ ನಾಗರಿಕ ಸಮಾಜ ಮತ್ತು ರಾಜಕೀಯ ವಲಯದ ಹೊರಗಿನ ಇತರ ಸಂಘಟನೆಗಳನ್ನು ಒಳಗೊಳ್ಳುವಂತೆ ಕೋರುವ ಸಾಧ್ಯತೆಯಿದೆ ಎಂದು ಗೊತ್ತಾಗಿದೆ.

ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಕಾರಣವಾದ 'ಜಂತರ್‌ ಮಂತರ್‌' ಪ್ರತಿಭಟನೆ ನಂತರ ಸಿಜೆಪಿ ಜತೆಗೆ ಕಾಂಗ್ರೆಸ್‌ ಅಂತರ ಕಾಯ್ದುಕೊಂಡಿದೆ. ಆದರೆ 'ಇಂಡಿಯಾ' ಮೈತ್ರಿಕೂಟದ ಕೆಲ ಪಕ್ಷಗಳು ಸಿಜೆಪಿ ಜತೆಗೆ ಮಾತುಕತೆ ಆರಂಭಿಸುವ ಉತ್ಸುಕತೆಯಲ್ಲಿವೆ ಎಂದು ಮೂಲಗಳು ಹೇಳಿವೆ.

ಬಿಜೆಪಿ ಸರ್ಕಾರಗಳ ವಿರುದ್ಧ 'ಶಾಲೆಗಳನ್ನು ಸರಿಪಡಿಸಿ' ಅಭಿಯಾನ ನಡೆಸಿದ ಬಳಿಕ ಈ ಯುವ ಸಂಘಟನೆಯು ಸ್ವತಂತ್ರವಾಗಿ ಆಲೋಚಿಸುತ್ತಿದೆ. ಯುವ ಜನರಿಗೆ ಈಗ ಪರಿಸರ ಹೋರಾಟಗಾರ ಸೋನಂ ವಾಂಗ್ಚೂಕ್ ಅವರಂತಹ ದಿಗ್ಗಜರ ಅಗತ್ಯವಿಲ್ಲ ಎಂದು ಕೆಲ ಪಕ್ಷಗಳು ಅಭಿಪ್ರಾಯ ಹೊಂದಿವೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಸಾಮಾಜಿಕ ಚಳವಳಿಗಳ ಜತೆ ನಂಟು ಹೊಂದಿರುವ ಕಾಂಗ್ರೆಸ್‌ನ ಕೆಲ ನಾಯಕರು ಸಿಜೆಪಿಯನ್ನು ನಿರ್ಲಕ್ಷಿಸಬಾರದು ಎಂಬ ಸಂದೇಶ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

 ಸಿಜೆಪಿ

ನಿಲುವು ಭಿನ್ನ

'ನಾವು ಸಿಜೆಪಿಯನ್ನು ರಾಜಕೀಯಕ್ಕೆ ಎಳೆದು ತರುವ ಉದ್ದೇಶ ಹೊಂದಿಲ್ಲ. ಅವರು ವಿಪಕ್ಷಗಳ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ವಿವಿಧ ವಿಷಯಗಳಲ್ಲಿ ನಮ್ಮ ನಿಲುವುಗಳು ಭಿನ್ನವಾಗಿವೆ' ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. 'ಚುನಾವಣಾ ಅಕ್ರಮಗಳನ್ನು ವಿರೋಧಿಸಿ ವಿಪಕ್ಷಗಳು ಚುನಾವಣೆಗಳನ್ನು ಬಹಿಷ್ಕರಿಸಬೇಕು ಎಂದು ಸಿಜೆಪಿ ಬಯಸುತ್ತದೆ. ಆದರೆ ಅದಕ್ಕೆ ನಮ್ಮ ವಿರೋಧವಿದೆ' ಎಂದು ಅವರು ಹೇಳಿದ್ದಾರೆ.

ಸಿಜೆಪಿ ಜತೆ ವಿಪಕ್ಷಗಳ ಸಂಪರ್ಕ ಸಿಜೆಪಿಯು ಜಂತರ್‌ ಮಂತರ್‌ನಲ್ಲಿ ಜೂನ್‌- ಜುಲೈನಲ್ಲಿ ನಡೆಸಿದ ಪ್ರತಿಭಟನೆಗಳಲ್ಲಿ ಎಡಪಕ್ಷಗಳು ಪಾಲ್ಗೊಂಡಿದ್ದವು. ಟಿಎಂಸಿ ಎಎಪಿ ನಾಯಕರೂ ಸಿಜೆಪಿ ನಾಯಕರ ಜತೆ ನಿರಂತರ ಸಂಪರ್ಕದಲ್ಲಿದ್ದರು. ಜುಲೈ 20ರಂದು ನಡೆಯಬೇಕಿದ್ದ 'ಸಂಸದ್‌ ಚಲೊ' ಪ್ರತಿಭಟನೆಯಲ್ಲಿ ವಿಪಕ್ಷಗಳ ಕನಿಷ್ಠ ಎರಡು ಡಜನ್‌ನಷ್ಟು ಸಂಸದರು ಭಾಗವಹಿಸಿ ಮೆರವಣಿಗೆಯಲ್ಲಿ ಸಾಗಲು ಯೋಜಿಸಲಾಗಿತ್ತು. ಆದರೆ ಅದಕ್ಕೂ ಎರಡು ದಿನ ಮುನ್ನ ಸಿಜೆಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರಿಂದ ಈ ಯೋಜನೆ ಬದಲಾಯಿತು. ಮಾಜಿ ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ (ಟಿಎಂಸಿ) ಅಖಿಲೇಶ್‌ ಯಾದವ್‌ (ಎಸ್‌ಪಿ) ಅರವಿಂದ ಕೇಜ್ರಿವಾಲ್‌ (ಎಎಪಿ) ಅವರು ಸಿಜೆಪಿ ವೇದಿಕೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವ ಮತ್ತೊಂದು ಯೋಜನೆಯಿತ್ತು. ಆದರೆ ಅದಕ್ಕೂ ಕೆಲವೇ ಗಂಟೆಗಳ ಮುನ್ನ ಧರ್ಮೇಂದ್ರ ಪ್ರಧಾನ್‌ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಈ ಯೋಜನೆಯೂ ಕಾರ್ಯರೂಪಕ್ಕೆ ಬರಲಿಲ್ಲ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries