HEALTH TIPS

ಕಸ್ತೂರಿ ರಂಗನ್ ವರದಿ | ಜನವಸತಿ ಪ್ರದೇಶ ಹೊರತುಪಡಿಸಿ ಅಧಿಸೂಚನೆ ಪ್ರಕಟಿಸಿ: ಕೇರಳ

ತಿರುವನಂತಪುರ: ರಾಜ್ಯದ ಅರಣ್ಯ ಪ್ರದೇಶವನ್ನಷ್ಟೆ ಒಳಗೊಂಡಂತೆ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶ(ಇಎಸ್‌ಎ) ಕುರಿತ ಅಂತಿಮ ಅಧಿಸೂಚನೆ ಪ್ರಕಟಿಸುವಂತೆ ಕೇಂದ್ರಕ್ಕೆ ಕೇರಳ  ಸರ್ಕಾರ ಶುಕ್ರವಾರ ಮನವಿ ಮಾಡಿದೆ. 


'ಜನವಸತಿ ಪ್ರದೇಶಗಳು, ಕೃಷಿ ಭೂಮಿ ಹಾಗೂ ನೆಡುತೋಪುಗಳನ್ನು ಇಎಸ್‌ಎ ವ್ಯಾಪ್ತಿಯಿಂದ ಹೊರಗಿಡಬೇಕು ಎಂಬುದು ರಾಜ್ಯದ ಒತ್ತಾಯವಾಗಿದೆ. 

ರಾಜ್ಯದ ಈ ಸಲಹೆಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ' ಎಂದು ಪರಿಸರ ಸಚಿವ ಸನ್ನಿ ಜೋಸೆಫ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

'ಪರಿಸರ ಸೂಕ್ಷ್ಮ ಪ್ರದೇಶ ಕುರಿತಂತೆ ಜುಲೈ 27ರಂದು 7ನೇ ಕರಡು ಅಧಿಸೂಚನೆ ಪ್ರಕಟಿಸಿ, ಸಲಹೆಗಳು ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಇವುಗಳನ್ನು ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು. ಸಲಹೆ ಮತ್ತು ಆಕ್ಷೇಪಣೆಗಳನ್ನು ಒಳಗೊಂಡ ವರದಿಯನ್ನು ಪರಿಸರ ಇಲಾಖೆ ಕಾರ್ಯದರ್ಶಿ ಎಂ.ಜಿ.ರಾಜಮಾಣಿಕಂ ಗುರುವಾರ ಸಲ್ಲಿಸಿದ್ದಾರೆ' ಎಂದು ಹೇಳಿದರು.

ಕಸ್ತೂರಿರಂಗನ್‌ ವರದಿಯಲ್ಲಿ ಪ್ರಸ್ತಾವಿಸಿರುವಂತೆ ಪರಿಸರ ಸೂಕ್ಷ್ಮ ಪ್ರದೇಶವನ್ನು 13,108 ಚದರ ಕಿ.ಮೀ.ನಿಂದ 9,993.7 ಚದರ ಕಿ.ಮೀ.ಗೆ ಇಳಿಸುವಲ್ಲಿ ಕೇರಳಂ ಯಶಸ್ವಿಯಾಗಿದೆ. 9,993.7 ಚದರ ಕಿ.ಮೀ. ಪೈಕಿ 9,107 ಚದರ ಕಿ.ಮೀ. ಅರಣ್ಯ ಹಾಗೂ 886.7 ಚದರ ಕಿ.ಮೀ.ನಷ್ಟು ಅರಣ್ಯೇತರ ಪ್ರದೇಶ ಇದೆ ಎಂದು ಹೇಳಿದರು.

'ಒಂದು ವೇಳೆ, 886.7 ಚದರ ಕಿ.ಮೀ.ನಷ್ಟಿರುವ ಅರಣ್ಯೇತರ ಪ್ರದೇಶವನ್ನು ಇಎಸ್‌ಎ ವ್ಯಾಪ್ತಿಯಿಂದ ಹೊರಗಿಟ್ಟಲ್ಲಿ, ನಮ್ಮ ಕಾಳಜಿಗೆ ಸಂಪೂರ್ಣವಾಗಿ ಸ್ಪಂದಿಸದಂತೆ ಆಗಲಿದೆ' ಎಂದು ಸಚಿವ ಜೋಸೆಫ್ ಹೇಳಿದರು.

- ಸನ್ನಿ ಜೋಸೆಫ್‌ ಪರಿಸರ ಸಚಿವ ಕೇರಳಂಕೇರಳಂ ಸೀಮಿತ ಭೂಪ್ರದೇಶ ಹಾಗೂ ಅಧಿಕ ಜನಸಾಂದ್ರತೆ ಹೊಂದಿರುವ ರಾಜ್ಯ. ಅರಣ್ಯ ಕಾಯ್ದೆ ಕೇರಳಂ ಭತ್ತ ಬೆಳೆಯುವ ಮತ್ತು ಜೌಗುಪ್ರದೇಶಗಳ ಸಂರಕ್ಷಣಾ ಕಾಯ್ದೆಗಳಂತಹ ಕಠಿಣ ಕಾನೂನುಗಳನ್ನು ಹೊಂದಿದೆ. ಈಗ ಮತ್ತೊಂದು ಕಾಯ್ದೆಯನ್ನು ಜಾರಿಗೊಳಿಸಿದಲ್ಲಿ ಅದು ರಾಜ್ಯದ ಅಭಿವೃದ್ಧಿ ಕೃಷಿ ಚಟುವಟಿಕೆಗಳು ಹಾಗೂ ಜನರ ಬದುಕಿನ ಮೇಲೆ ಪರಿಣಾಮ ಬೀರಲಿದೆ.  








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries