ನವದೆಹಲಿ: ಪಟ್ನಾ ಹೈಕೋರ್ಟ್ ಅತ್ಯಾಚಾರ ಪ್ರಕರಣದಲ್ಲಿ ನೀಡಿದ ವಿವಾದಿತ ತೀರ್ಪಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಬುಧವಾರ ಕ್ರಮ ಕೈಗೊಂಡಿದೆ.
ಪಟ್ನಾ ಹೈಕೋರ್ಟ್ ತೀರ್ಪಿನಲ್ಲಿ ಆಕ್ಷೇಪಾರ್ಹ ಅಂಶಗಳಿವೆ ಎಂದು ತಿಳಿಸಿ, ರಿಜಿಸ್ಟ್ರಿಗೆ ನೋಟಿಸ್ ರವಾನಿಸಿದೆ.
ಪಟ್ನಾ ಹೈಕೋರ್ಟ್ ಜುಲೈ 9ರಂದು ಅತ್ಯಾಚಾರ ಪ್ರಕರಣದ ಆರೋಪಿಯನ್ನು ಖುಲಾಸೆಗೊಳಿಸಿತ್ತು. 'ಮಹಿಳೆಯ ದುಪಟ್ಟಾ ಎಳೆಯುವುದು ಮತ್ತು ಆಕೆಯ ಸ್ತನಗಳನ್ನು ಒತ್ತುವುದು ಅತ್ಯಾಚಾರಕ್ಕೆ ಸಮನಾದ ಕೃತ್ಯವಲ್ಲ' ಎಂದು ಅಭಿಪ್ರಾಯಪಟ್ಟಿತ್ತು.

