HEALTH TIPS

SIR: ವಿವಾದಗಳ ನಡುವೆಯೇ 3.27 ಕೋಟಿ ಹೊಸ ಮತದಾರರ ಸೇರ್ಪಡೆ! ಚುನಾವಣಾ ಆಯೋಗ ಹೇಳಿದ್ದೇನು?

ನವದೆಹಲಿ: ವಿವಿಧ ವಿವಾದಗಳ ನಡುವೆಯೇ ಕೇಂದ್ರ ಚುನಾವಣಾ ಆಯೋಗ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ (SIR) ಮೂಲಕ 3.27 ಕೋಟಿ ಹೊಸ ಮತದಾರರ ಸೇರ್ಪಡೆ ಮಾಡಿದೆ ಎನ್ನಲಾಗಿದೆ. 


ಮತದಾರರ ಪಟ್ಟಿಗೆ ಹೊಸ ಮತದಾರರನ್ನು ಸೇರ್ಪಡೆಗೊಳಿಸುವ Form 6ರಲ್ಲಿ ಹೆಚ್ಚುವರಿ ಘೋಷಣೆಯನ್ನು ಸೇರಿಸಿರುವ ಕುರಿತು ವಿವಾದ ನಡೆಯುತ್ತಿರುವ ನಡುವೆಯೇ, 2025ರ ಜೂನ್ 24ರಿಂದ ದೇಶಾದ್ಯಂತ 18ರಿಂದ 28 ವರ್ಷ ವಯೋಮಾನದ 3.26 ಕೋಟಿ ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ಪ್ರಸ್ತುತ ದೇಶದಲ್ಲಿ 18ರಿಂದ 28 ವರ್ಷದೊಳಗಿನ ಒಟ್ಟು 17.38 ಕೋಟಿ ಮತದಾರರು ಇದ್ದಾರೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ಜೂನ್‌ನಲ್ಲಿ ಬಿಹಾರದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಆರಂಭಿಸಿದ ಬಳಿಕ ಹೊಸ ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಹೆಚ್ಚುವರಿ ಘೋಷಣೆಯನ್ನು ಪರಿಚಯಿಸಲಾಗಿತ್ತು.

ಹೊಸ ಮತದಾರರಿಗೂ ಪೋಷಕರ SIR ವಿವರ

ಆನ್‌ಲೈನ್ ಫಾರ್ಮ್‌ನಲ್ಲಿ ಮಾಡಲಾದ ಬದಲಾವಣೆಯ ಬಳಿಕ, ಈಗಾಗಲೇ ಮತದಾರರ ಪಟ್ಟಿಯಲ್ಲಿರುವವರು SIR ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು ಮುಂದುವರಿಸಿಕೊಳ್ಳಲು ಪೋಷಕರ ವಿವರಗಳನ್ನು ನೀಡಬೇಕಿರುವುದರ ಜೊತೆಗೆ, ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಬಯಸುವವರೂ ತಮ್ಮ ಪೋಷಕರ SIR ವಿವರಗಳನ್ನು ಉಲ್ಲೇಖಿಸಬೇಕಾಗಿದೆ.

Form 6 ಮೂಲಕ ಹೊಸ ಮತದಾರರಾಗಿ ನೋಂದಾಯಿಸಿಕೊಳ್ಳುವವರು, ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಅರ್ಜಿಯೊಂದಿಗೆ ಈ ಘೋಷಣೆಯನ್ನು ಸಲ್ಲಿಸುವಂತೆ ಚುನಾವಣಾ ಆಯೋಗ ಸೂಚಿಸಿದೆ. ಆದರೆ Form 6 ಅನ್ನು ತಿದ್ದುಪಡಿ ಮಾಡಲಾಗಿಲ್ಲ, ಕೇವಲ ಸೂಚನೆಗಳ ಮೂಲಕ ಹೆಚ್ಚುವರಿ ಘೋಷಣೆಯನ್ನು ಸೇರಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಘೋಷಣೆ ತುಂಬದೆ ಆನ್‌ಲೈನ್ ಅರ್ಜಿ ಮುಂದುವರಿಸಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ಅಧಿಕಾರಿಗಳ ಪ್ರಕಾರ, ಬಿಹಾರದಲ್ಲಿ ಕಳೆದ ವರ್ಷ ಜೂನ್‌ನಲ್ಲಿ SIR ಆರಂಭಿಸಿದಾಗಿನಿಂದ ಹೊಸ ಮತದಾರರು Form 6 ಜೊತೆಗೆ ಈ ಘೋಷಣೆಯನ್ನೂ ಸಲ್ಲಿಸುತ್ತಿದ್ದಾರೆ.

ಮತದಾರರ ಮ್ಯಾಪಿಂಗ್

SIRಗೆ ಸಂಬಂಧಿಸಿದ ದೈನಂದಿನ ಬುಲೆಟಿನ್‌ಗಳಲ್ಲಿ ಘೋಷಣೆಯೊಂದಿಗೆ ಸಲ್ಲಿಸಲಾದ ಅರ್ಜಿಗಳ ವಿವರಗಳನ್ನೂ ಪ್ರಕಟಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ವ್ಯವಸ್ಥೆಯಿಂದ ಮತದಾರರನ್ನು ಮ್ಯಾಪಿಂಗ್ ಮಾಡಲು ನೆರವಾಗುವುದರ ಜೊತೆಗೆ, ಹೊಸ ಮತದಾರರು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳ ಸಂಖ್ಯೆಯನ್ನೂ ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ಆನ್‌ಲೈನ್‌ನಲ್ಲಿ Form 6 ಭರ್ತಿ ಮಾಡುವವರು ಮೊದಲು ಈ ಘೋಷಣೆಯನ್ನು ಪೂರ್ಣಗೊಳಿಸದಿದ್ದರೆ ಅರ್ಜಿಯ ಮುಂದಿನ ಹಂತಕ್ಕೆ ತೆರಳಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.

ಇದೇ ವೇಳೆ, ಈ ಬದಲಾವಣೆಗಳ ಬಗ್ಗೆ ಚುನಾವಣಾ ಆಯೋಗದ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಆಕ್ಷೇಪ ವ್ಯಕ್ತಪಡಿಸಿದ್ದು, ಅವು “ಅಕ್ರಮ ಮತ್ತು ಅನಧಿಕೃತ” ಎಂದು ಹೇಳಿರುವುದಾಗಿ The Indian Express ವರದಿ ಮಾಡಿದೆ. ಈ ಬದಲಾವಣೆಗಳು ಹೊಸ ಮತದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬುದು ಅವರ ವಾದವಾಗಿದೆ. 






 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries