HEALTH TIPS

ಚೀನಾ, US ಎದುರಾಳಿಗಳಲ್ಲ ಎಂದ ಜಿನ್‌ಪಿಂಗ್: ಐತಿಹಾಸಿಕ ಕ್ಷಣಕ್ಕೆ ಟ್ರಂಪ್ ಸಾಕ್ಷಿ

 ವಾಷಿಂಗ್ಟನ್‌: ಚೀನಾ ಹಾಗೂ ಅಮೆರಿಕ ಎದುರಾಳಿಗಳಾಗಿ ಇರುವ ಬದಲು ಪಾಲುದಾರರಾಗಿರಬೇಕು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಹೇಳಿದ್ದಾರೆ. 

ಬುಧವಾರ ವಾಷಿಂಗ್ಟನ್‌ಗೆ ಬಂದಿಳಿದ ನಂತರ ಮಾತನಾಡಿರುವ ಅವರು, ಹೊಸ ಕಾಲಘಟ್ಟದಲ್ಲಿ ಎರಡೂ ರಾಷ್ಟ್ರಗಳು ಜೊತೆಯಾಗಿ ಸಾಗುವ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 


ಎರಡೂ ದೇಶಗಳು ದೊಡ್ಡ ರಾಷ್ಟ್ರಗಳು. ಉಭಯ ರಾಷ್ಟ್ರಗಳ ಜನರು ಶ್ರೇಷ್ಠರು ಎಂದು ಲಿಖಿತ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೇ ವರ್ಷ ಮೇ ತಿಂಗಳಲ್ಲಿ ಚೀನಾ ಪ್ರವಾಸ ಕೈಗೊಂಡಿದ್ದರು. ಆಗ, ಉಭಯ ರಾಷ್ಟ್ರಗಳ ನಡುವಣ ಸ್ಥಿರ ಸಂಬಂಧ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಬ್ಬರೂ ಒಪ್ಪಿಕೊಂಡಿದ್ದೆವು ಎಂದು ಸ್ಮರಿಸಿದ ಷಿ, ಅದು ಭವಿಷ್ಯದಲ್ಲಿ ದ್ವಿಪಕ್ಷೀಯ ಸಂಬಂಧಕ್ಕೆ ದಿಕ್ಸೂಚಿಯಾಗಿದೆ ಎಂದಿದ್ದಾರೆ.

ಎರಡೂ ರಾಷ್ಟ್ರಗಳು ಒಂದೇ ದಿಕ್ಕಿನಲ್ಲಿ ಕೆಲಸ ಮಾಡಬೇಕು. ಸಹಕಾರ ಕೇಂದ್ರಿತ ಸ್ಥಿರ ಸಂಬಂಧವನ್ನು ಬೆಳೆಸಬೇಕು. ಆರೋಗ್ಯಕರವಾದ ಸ್ಪರ್ಧೆ ಕಾಪಾಡಿಕೊಳ್ಳಬೇಕು. ಭಿನ್ನಾಭಿಪ್ರಾಯಗಳನ್ನು ಸೌಹಾರ್ದವಾಗಿ ನಿಭಾಯಿಸಬೇಕು. ಶಾಂತಿ ಕಾಪಾಡಿಕೊಳ್ಳುವ ಭರವಸೆ ಇರಬೇಕು ಎಂದು ಪ್ರತಿಪಾದಿಸಿದ್ದಾರೆ.

ಉಭಯ ರಾಷ್ಟ್ರಗಳ ಜನರ ನಡುವೆ ಬಹಳ ಕಾಲದಿಂದ ಸ್ನೇಹ ಸಂಬಂಧವಿದೆ. ಎರಡೂ ದೇಶಗಳ ಹಿತಾಸಕ್ತಿಗಳು ಒಂದಕ್ಕೊಂದು ಬೆಸೆದುಕೊಂಡಿವೆ ಎಂದಿರುವ ಅವರು, ದ್ವಿಪಕ್ಷೀಯ ಸಂಬಂಧ ಮತ್ತು ಜಾಗತಿಕ ವಿಚಾರಗಳ ಕುರಿತು ಟ್ರಂಪ್ ಜೊತೆ ಮುಕ್ತವಾಗಿ ಚರ್ಚಿಸಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಟ್ರಂಪ್
ಷಿ ಅವರು ಸೆಪ್ಟೆಂಬರ್ 23 ರಿಂದ 25ರವರೆಗೆ ಅಮೆರಿಕದಲ್ಲಿರಲಿದ್ದಾರೆ.

ಮೇರಿಲ್ಯಾಂಡ್‌ನ ಜಾಯಿಂಟ್‌ ಬೇಸ್‌ ಆಂಡ್ರ್ಯೂಸ್ ವಿಮಾನ ನಿಲ್ದಾಣಕ್ಕೆ ಬಂದ ಷಿ ಮತ್ತು ಅವರ ಪತ್ನಿ ಪೆಂಗ್ ಲಿಯುವಾನ್ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಟ್ರಂಪ್ ಆತ್ಮೀಯವಾಗಿ ಬರಮಾಡಿಕೊಂಡರು.

ಅಮೆರಿಕ ಅಧ್ಯಕ್ಷರು ಆಂಡ್ರ್ಯೂಸ್ ವಿಮಾನ ನಿಲ್ದಾಣದಲ್ಲಿ ವಿದೇಶಿ ನಾಯಕರನ್ನು ಖುದ್ದಾಗಿ ಸ್ವಾಗತಿಸಿರುವುದು 1962ರ ನಂತರ ಇದೇ ಮೊದಲು. ಆಗ ಅಧ್ಯಕ್ಷರಾಗಿದ್ದ ಜಾನ್‌ ಎಫ್‌. ಕೆನಡಿ ಅವರು ಇಂಗ್ಲೆಂಡ್‌ ಪ್ರಧಾನಿ ಹೆರಾಲ್ಡ್ ಮ್ಯಾಕ್‌ಮಿಲನ್ ಅವರನ್ನು ಸ್ವಾಗತಿಸಿದ್ದರು.

ಈ ಹಿನ್ನೆಲೆಯಲ್ಲಿ ಷಿ ಭೇಟಿಯು ಮಹತ್ವ ಪಡೆದುಕೊಂಡಿದೆ.

ಷಿ ಅವರನ್ನು ಸ್ವಾಗತಿಸಿದ ನಂತರ ಶ್ವೇತಭವನದಲ್ಲಿ ಮಾತನಾಡಿರುವ ಟ್ರಂಪ್‌, 'ಅದೊಂದು ಚಿಕ್ಕ, ಅತ್ಯುತ್ತಮವಾದ ಭೇಟಿಯಾಗಿತ್ತು. ಆತ್ಮೀಯವಾಗಿ ಸ್ವಾಗತಿಸಿದ್ದೇವೆ ಎನಿಸಿತು. ಅವರನ್ನು ಮೆಚ್ಚಿದ್ದಾರೆ ಎಂದೂ ಭಾವಿಸಿದ್ದೇನೆ' ಎಂದಿದ್ದಾರೆ.

ಉಭಯ ನಾಯಕರ ಭೇಟಿ ವೇಳೆ, ಇರಾನ್-ಅಮೆರಿಕ ಸಂಘರ್ಷ, ಕೃತಕ ಬುದ್ಧಿಮತ್ತೆ, ಜಾಗತಿಕ ವಿದ್ಯಮಾನ ಮತ್ತು ವಾಣಿಜ್ಯ ವ್ಯವಹಾರ ವಿಚಾರಗಳು ಚರ್ಚೆಯಾಗುವ ಸಾಧ್ಯತೆ ಇದೆ.


NOW: President Trump has greeted Chinese President Xi Jinping in Washington, DC with the following: - 100-foot-long red carpet - Salute Battery - 21-Person Honor Cordon - 2 three-person color teams to include the U.S. and Chinese flag - USAF band playing fanfare and Show more









JUST IN: 🇨🇳🇺🇸 Chinese President Xi Jinping arrives in US, greeted by President Trump.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries