HEALTH TIPS

ಕಾಂಗೊದಲ್ಲಿ ಎಬೋಲಾ ಅಟ್ಟಹಾಸ: 10 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ದೃಢ

ಕಿನ್ಸಾಸ: ಕಾಂಗೋದಲ್ಲಿ ಮಾರಣಾಂತಿಕ ಎಬೋಲಾ ಸಾಂಕ್ರಾಮಿಕದ ಹಾವಳಿ ಉಲ್ಬಣಿಸಿದ್ದು,ಈತನಕ 10 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ. ಸೋಂಕು ದೃಢಪಟ್ಟಿರುವ 10,060ಕ್ಕೂ ಅಧಿಕ ಪ್ರಕರಣಗಳ ಪೈಕಿ ಸುಮಾರು ಅರ್ಧದಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ಮಂಗಳವಾರ ಪ್ರಕಟವಾದ ಸರಕಾರಿ ದತ್ತಾಂಶಗಳು ಬಹಿರಂಗಪಡಿಸಿವೆ. 


ಆಫ್ರಿಕ ಖಂಡದ ಹಲವು ರಾಷ್ಟ್ರಗಳಲ್ಲಿ ಹರಡುತ್ತಿರುವ ಈ ರೋಗವನ್ನು ತಡೆಯಲು ಆರೋಗ್ಯ ಇಲಾಖೆಗಳ ಅಧಿಕಾರಿಗಳು ಹರಸಾಹಸಪಡುತ್ತಿದ್ದಾರೆ.

ಅಪೂರ್ವ ಬುಂಡಿಬುಗ್ಯೊ ವೈರಸ್‌ನಿಂದ ಉಂಟಾಗುವ ಈ ಸಾಂಕ್ರಾಮಿಕ ರೋಗವು 2026ರ ಮೇ ತಿಂಗಳಲ್ಲಿ ಹೊಸದಾಗಿ ಸ್ಫೋಟಿಸಿತ್ತು.

2014-16ರಲ್ಲಿ ಪಶ್ಚಿಮ ಆಫ್ರಿಕದಲ್ಲಿ ಎಬೋಲಾ ಸಾಂಕ್ರಾಮಿಕ ಹರಡಿದ್ದಾಗ, 28 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿತ್ತು. ಅವುಗಳಲ್ಲಿ 11 ಸಾವಿರ ಪ್ರಾಣಹಾನಿ ಸಂಭವಿಸಿದ್ದವು. ಆದರೆ ಈ ಸಂಖ್ಯೆಯು, ಈ ವರ್ಷ ಕೇವಲ ಆರು ತಿಂಗಳಲ್ಲಿ ವರದಿಯಾದ ಸೋಂಕುಗಳು ಹಾಗೂ ಮೃತಪಟ್ಟ ಸಂಖ್ಯೆಯ ಮೂರು ಪಟ್ಟು ಅಧಿಕವಾಗಿರುವುದು ಪರಿಸ್ಥಿತಿಯ ಗಂಭೀರತೆಯನ್ನು ಸೂಚಿಸುತ್ತದೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries