HEALTH TIPS

ಸೂಡಾನ್ ನಲ್ಲಿ ಸಂಘರ್ಷ ತೀವ್ರ: ಡ್ರೋನ್ ದಾಳಿಗೆ 21 ಮಂದಿ ಮೃತ್ಯು

ಖಾರ್ತೊಮ್: ಸೂಡಾನ್‌ನ ಪಶ್ಚಿಮ ದಾರ್ಫರ್ ಪ್ರಾಂತದಲ್ಲಿ ಸೇನಾ ಪಡೆಗಳು ಹಾಗೂ ಅರೆಸೈನಿಕ ಪಡೆಗಳ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಉಭಯ ಸೇನೆಗಳು ಪರಸ್ಪರರ ನಿಯಂತ್ರಣದ ಪ್ರದೇಶಗಳ ಡ್ರೋನ್ ದಾಳಿಗಳನ್ನು ನಡೆಸಿದ್ದು, ಕನಿಷ್ಠ 21 ಮಂದಿ ಮೃತಪಟ್ಟಿದ್ದಾರೆ.


ನ್ಯಾಲಾದಲ್ಲಿರುವ ಮಾರುಕಟ್ಟೆಯ ಮೇಲೆ ಸೋಮವಾರ ರಾತ್ರಿ ನಡೆದ ಡ್ರೋನ್ ದಾಳಿಯಲ್ಲಿ 21 ಮಂದಿ ಮೃತಪಟ್ಟಿದ್ದಾರೆ ಹಾಗೂ ಇತರ 40 ಮಂದಿ ಗಾಯಗೊಂಡಿದ್ದಾರೆ. 

ದಾಳಿ ನಡೆದ ಸಂದರ್ಭ ಸ್ಥಳದಲ್ಲಿ ಆರ್‌ಎಸ್‌ಎಫ್‌ನ ಹೋರಾಟಗಾರರು ಅಧಿಕ ಸಂಖ್ಯೆಯಲ್ಲಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದಕ್ಕೆ ಪ್ರತೀಕಾರವಾಗಿ ಆರ್‌ಎಸ್‌ಎಫ್, ಸೂಡಾನ್ ಸೇನೆ ನಿಯಂತ್ರಣದ ಖಾರ್ತೊಮ್ ವಿಮಾನನಿಲ್ದಾಣ, ಅಣೆಕಟ್ಟುಗಳು ಹಾಗೂ ವಿದ್ಯುತ್ ಸ್ಥಾವರಗಳನ್ನು ಗುರಿಯಿರಿಸಿ ಡ್ರೋನ್ ದಾಳಿ ನಡೆಸಿದೆ.

ರವಿವಾರ ಆರ್‌ಎಸ್‌ಎಫ್ ಪಡೆಗಳು, ವೈಟ್ ನೈಲ್, ಸೆನ್ನಾರ್ ಹಾಗೂ ಗೆಡಾರೆಫ್ ರಾಜ್ಯಗಳ ಆರು ವಿದ್ಯುತ್ ಸರಬರಾಜು ಘಟಕಗಳ ಮೇಲೆ ಸರಣಿ ಡ್ರೋನ್ ದಾಳಿಗಳನ್ನು ನಡೆಸಿದ್ದು, ಲಕ್ಷಾಂತರ ಮಂದಿ ವಿದ್ಯುತ್ ಸಂಪರ್ಕವಿಲ್ಲದೆ ಸಂಕಷ್ಟಕ್ಕೀಡಾಗಿದ್ದಾರೆ.

ಸೂಡಾನ್‌ನಲ್ಲಿ ಭೀಕರ ಆಹಾರ ಕ್ಷಾಮದ ಭೀತಿ: 30ಕ್ಕೂ ಅಧಿಕ ದೇಶಗಳ ಎಚ್ಚರಿಕೆ

ಸೂಡಾನ್‌ನಲ್ಲಿ ನಡೆಯುತ್ತಿರುವ ಭೀಕರ ಅಂತರ್‌ ಯುದ್ಧದಿಂದಾಗಿ, ಆ ದೇಶದಲ್ಲಿ ಆಹಾರದ ಭದ್ರತೆ, ದಿನದಿಂದ ದಿನಕ್ಕೆ ಹದಗೆಡುತ್ತಿದೆಯೆಂದು ಕಳವಳ ವ್ಯಕ್ತಪಡಿಸಿ ಇತರ 30 ರಾಷ್ಟ್ರಗಳು ಹೊರಡಿಸಿರುವ ಜಂಟಿ ಹೇಳಿಕೆಯೊಂದನ್ನು ಅಮೆರಿಕದ ವಿದೇಶಾಂಗ ಇಲಾಖೆಯು ಸೋಮವಾರ ಬಿಡುಗಡೆಗೊಳಿಸಿದೆ.

2023ರ ಎಪ್ರಿಲ್‌ನಿಂದ ಸೂಡಾನ್‌ನ ಸಶಸ್ತ್ರ ಪಡೆಗಳು ಹಾಗೂ ಅರೆಸೈನಿಕ ಕ್ಷಿಪ್ರ ಬೆಂಬಲಿಗರ ಪಡೆಗಳ ನಡುವೆ ಭುಗಿಲೆದ್ದಿರುವ ಸಂಘರ್ಷದಲ್ಲಿ ಈವರೆಗೆ 2 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಹಾಗೂ 1.30 ಕೋಟಿಗೂ ಅಧಿಕ ಮಂದಿ ನಿರ್ವಸಿತರಾಗಿದ್ದಾರೆ ಹಾಗೂ ಜಗತ್ತಿನಲ್ಲೇ ಅತ್ಯಂತ ಭೀಕರವಾದ ಹಸಿವಿನ ಹಾಗೂ ನಿರಾಶ್ರಿತ ಸಮಸ್ಯೆಯನ್ನು ಎದುರಿಸುತ್ತಿದೆ.

ʼಸಮಗ್ರ ಆಹಾರ ಭದ್ರತಾ ಹಂತ ವರ್ಗೀಕರಣ ಸಂಸ್ಥೆಯು ಎಚ್ಚರಿಕೆ ನೀಡಿರುವಂತೆ, ಮುಂಬರುವ ತಿಂಗಳುಗಳಲ್ಲಿ ತೀವ್ರ ಬರದ ಅಪಾಯ ಎದುರಾಗಲಿದ್ದು, ಅದನ್ನು ಎದುರಿಸಲು ತುರ್ತು ಕ್ರಮದ ಅಗತ್ಯವಿದೆ ಎಂದು ಹೇಳಿಕೆ ತಿಳಿಸಿದೆ. ಲಕ್ಷಾಂತರ ಮಂದಿಯ ಪ್ರಾಣವನ್ನು ಉಳಿಸಲು ಹಾಗೂ ಬರಗಾಲವನ್ನು ತಡೆಯಲು ಇನ್ನು ಹೆಚ್ಚು ಸಮಯ ಉಳಿದಿಲ್ಲ' ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries