ಕಾಸರಗೋಡು: ಕೇರಳದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯನ್ನು ಹೆಚ್ಚಿಸಲು, ಉತ್ತರದ ಜಿಲ್ಲೆಗಳಲ್ಲಿನ ವಿದ್ಯುತ್ ಕೊರತೆಯನ್ನು ನೀಗಿಸಲು ಹಾಗೂ ಕಾಸರಗೋಡಿನ ಉತ್ತರ ಭಾಗಕ್ಕೆ ವಿದ್ಯುತ್ ವಿತರಣೆಯ ದಕ್ಷತೆಯನ್ನು ಸುಧಾರಿಸಲು ಮುನ್ನಾಡ್ 110 ಕೆವಿ ಉಪಕೇಂದ್ರ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ.
ಕುತ್ತಿಕೋಲ್ ಸಬ್‍ಸ್ಟೇಷನ್‍ನಿಂದ ಮುನ್ನಾಡ್‍ವರೆಗೆ 110 ಕೆವಿ ಡಬಲ್-ಸಕ್ರ್ಯೂಟ್ ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಿಸುವ ಸಂಬಂಧ, ಕಾಸರಗೋಡು ತಾಲೂಕಿನ ಮುನ್ನಾಡ್ ಮತ್ತು ಬೆಡಡುಕ್ಕ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ಟೋಬರ್ 7 ರಿಂದ ಕೆಎಸ್‍ಇಬಿ ಅಧಿಕಾರಿಗಳು ಅಥವಾ ಗುತ್ತಿಗೆ ಸಿಬ್ಬಂದಿ ಸಮೀಕ್ಷೆಯನ್ನು ನಡೆಸಲಿದ್ದಾರೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಿಸಿದ್ದಾರೆ.

