ಉಪ್ಪಳ: ಮಂಗಲ್ಪಾಡಿ ಏಕಾಹ ಭಜನಾ ಮಂದಿರದಲ್ಲಿ ನಡೆಯಲಿರುವ ಶ್ರೀ ಶಾರದಾ ಮಹೋತ್ಸವದ ಅಂಗವಾಗಿ ಅ. 18 ರಂದು ಸಂಜೆ 6 ರಿಂದ 'ಶಲ್ಯ ಸಾರಥ್ಯ' ಕಥಾಭಾಗದ ತಾಳಮದ್ದಳೆ ಕಾರ್ಯಕ್ರಮ ಜರುಗಲಿದೆ. ಮೂಡಂಬೈಲಿನ ವಾಗ್ದೇವಿ ಯಕ್ಷಗಾನ ಕಲಾಸಂಘದ ಕಲಾವಿದರು ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಿದ್ದಾರೆ.
ಹಿಮ್ಮೇಳದಲ್ಲಿ ಭಾಗವತರಾಗಿ ವಾಸುದೇವ ಮಯ್ಯ ವರ್ಕಾಡಿ ಭಾಗವಹಿಸಲಿದ್ದು, ಚೆಂಡೆ ಮತ್ತು ಮೃದಂಗದಲ್ಲಿ ಸ್ಕಂದರಾಜ್ ಮಯ್ಯ ವರ್ಕಾಡಿ ಹಾಗೂ ಶ್ರೀಕುಮಾರ್ ಮಯ್ಯ ವರ್ಕಾಡಿ ಸಹಕರಿಸಲಿದ್ದಾರೆ.

