ಬದಿಯಡ್ಕ: ಕೇರಳ ಮರಾಠಿ ಶಾರದೋತ್ಸವ ಸಮಿತಿಯ 19ನೇ ವರ್ಷದ ಶಾರದೋತ್ಸವವು ಅಕ್ಟೋಬರ್‍ನಲ್ಲಿ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ವೇದಮೂರ್ತಿ ಶಂಕರನಾರಾಯಣ ಕೆದಿಲಾಯ ನರಂಪಾಡಿ ಅವರ ಪೌರೋಹಿತ್ಯದಲ್ಲಿ ಭಕ್ತಿಭಾವದಿಂದ ನಡೆಯಿತು.
ಬೆಳಗ್ಗೆ ಶ್ರೀ ಶಾರದಾ ಮಾತೆಯ ವಿಗ್ರಹ ಪ್ರತಿಷ್ಠಾಪನೆ, ಪ್ರಾರ್ಥನೆ, ಪೂಜೆ, ಮಹಾಗಣಪತಿ ಹೋಮ, ವಿವಿಧ ಭಜನಾ ತಂಡಗಳಿಂದ ಭಜನೆ, ಧ್ವಜಾರೋಹಣ, ಆಯುಧ ಪೂಜೆ ಹಾಗೂ ಮಕ್ಕಳ ಕಲಾ-ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಬಳಿಕ ಲಲಿತ ಸಹಸ್ರನಾಮ ಪಾರಾಯಣ, ಸಭಾ ಕಾರ್ಯಕ್ರಮ ಮತ್ತು ಸನ್ಮಾನ ಸಮಾರಂಭ ನಡೆಯಿತು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನದ ಬಳಿಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮತ್ತು ಸಂಜೆ ಗಜೇಂದ್ರ ಮೋಕ್ಷ ಯಕ್ಷಗಾನ ಬಯಲಾಟ ಪ್ರೇಕ್ಷಕರ ಗಮನ ಸೆಳೆಯಿತು.
ಬುಧವಾರ ಬೆಳಗ್ಗೆ ಭಜನೆ, ಪೂಜೆ, ಲಲಿತ ಸಹಸ್ರನಾಮ ಪಾರಾಯಣ, ಸಮಾರೋಪ ಸಮಾರಂಭ, ಆರ್. ಚಕ್ರೇಶ್ವರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ನಡೆದವು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಮತ್ತು ಪ್ರಸಾದ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ಸಂಜೆ ಶಾರದಾ ದೇವಿಯ ಶೋಭಾಯಾತ್ರೆಯು ಬದಿಯಡ್ಕ ಶ್ರೀ ಗಣೇಶ ಮಂದಿರದಿಂದ ಹೊರಟು ಬದಿಯಡ್ಕ ಪೇಟೆಯ ಮೂಲಕ ಪೆರಡಾಲ ವರದಾ ನದಿಗೆ ತಲುಪಿತು. ಅಲ್ಲಿ ದೇವಿಯ ವಿಗ್ರಹದ ಜಲಸ್ತಂಭನದೊಂದಿಗೆ ಉತ್ಸವ ಸಂಪನ್ನಗೊಂಡಿತು.
ಶೋಭಾಯಾತ್ರೆಯಲ್ಲಿ ಸಿಂಗಾರಿಮೇಳ, ಮುತ್ತುಕೊಡೆ, ಬೊಂಬೆಕುಣಿತ, ಸ್ತಬ್ಧಚಿತ್ರಗಳು ಹಾಗೂ ವಿವಿಧ ತಂಡಗಳ ಕುಣಿತ ಭಜನೆಗಳು ವಿಶೇಷ ಆಕರ್ಷಣೆಯಾಗಿದ್ದವು.

.jpg)
.jpg)
