HEALTH TIPS

ಕುಂಬಳೆ ಉಪಜಿಲ್ಲಾ ಕಲೋತ್ಸವ: ವೇದಿಕೇತರ ಸ್ಪರ್ಧೆಗಳು 26 ರಿಂದ ಆರಂಭ

ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದ ವೇದಿಕೇತರ ಸ್ಪರ್ಧೆಗಳು ಬದಿಯಡ್ಕದ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅಕ್ಟೋಬರ್ 26 ರಿಂದ ಆರಂಭವಾಗಲಿವೆ.

ಅಕ್ಟೋಬರ್ 26 ಮತ್ತು 27 ರಂದು ವೇದಿಕೇತರ ಸ್ಪರ್ಧೆಗಳು ನಡೆಯಲಿದ್ದು, ನವೆಂಬರ್ 2, 3 ಮತ್ತು 4ರಂದು ವೇದಿಕೆ ಸ್ಪರ್ಧೆಗಳು ಜರುಗಲಿವೆ. ಉಪಜಿಲ್ಲೆಯ 94 ಶಾಲೆಗಳಿಂದ ಆಗಮಿಸುವ ಯುವ ಪ್ರತಿಭೆಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಲಿದ್ದಾರೆ. ಐದು ದಿನಗಳ ಕಾಲ ನಡೆಯುವ ವಿವಿಧ ಸ್ಪರ್ಧೆಗಳಲ್ಲಿ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಕಲೋತ್ಸವದ ಯಶಸ್ವಿ ಆಯೋಜನೆಗಾಗಿ ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಶಂಕರ ಗೌರವಾಧ್ಯಕ್ಷರಾಗಿ, ಶ್ಯಾಮಪ್ರಸಾದ್ ಮಾನ್ಯ ಕಾರ್ಯಾಧ್ಯಕ್ಷರಾಗಿ, ಶಾಲೆಯ ಪ್ರಾಂಶುಪಾಲ ಎಂ. ಜಗದೀಶ್ ಪ್ರಧಾನ ಸಂಚಾಲಕರಾಗಿ ಹಾಗೂ ಮುಖ್ಯೋಪಾಧ್ಯಾಯಿನಿ ಟಿ.ಎಚ್. ಶಾಹಿದಾ ಬೀಬಿ ಜಂಟಿ ಸಂಚಾಲಕರಾಗಿ ಕಾರ್ಯನಿರ್ವಹಿಸುವ ಸಂಘಟನಾ ಸಮಿತಿಯನ್ನು ರಚಿಸಲಾಗಿದೆ.

ನವೆಂಬರ್ 2ರಂದು ಸಂಜೆ 4 ಗಂಟೆಗೆ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಕಲೋತ್ಸವವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ.

ವೆಚ್ಚವನ್ನು ಕಡಿಮೆಗೊಳಿಸುವುದರ ಜೊತೆಗೆ ಪರಿಸರ ಸ್ನೇಹಿ ರೀತಿಯಲ್ಲಿ ಕಲೋತ್ಸವವನ್ನು ಆಯೋಜಿಸಲು ಸಂಘಟನಾ ಸಮಿತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ ಧನಸಂಗ್ರಹಕ್ಕಾಗಿ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಚಹಾಕೂಟ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.


ಕಲೋತ್ಸವದ ಅಂಗವಾಗಿ ಪರಿಸರ ಕಾಳಜಿಯನ್ನು ಮೂಡಿಸುವ ಉದ್ದೇಶದಿಂದ ಶನಿವಾರ ಪಂಚಾಯಿತಿ ಅಧ್ಯಕ್ಷ ಡಿ. ಶಂಕರ ಮತ್ತು ಸದಸ್ಯರು ತೆಂಗಿನ ಗರಿ ಹೆಣೆಯುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲೋತ್ಸವದಲ್ಲಿ ಪರಿಸರ ಜಾಗೃತಿಯ ಸಂದೇಶ ಸಾರಲು ತೆಂಗಿನ ಗರಿಗಳಿಂದ ತಯಾರಿಸಿದ ಸೂಚನಾ ಫಲಕಗಳು ಹಾಗೂ ಬುಟ್ಟಿಗಳನ್ನು ಸಿದ್ಧಪಡಿಸಲಾಗುತ್ತಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries