HEALTH TIPS

2029ರ ವೇಳೆಗೆ ಭಾರತದಲ್ಲಿ 4 ಉಡ್ಡಯನ ನೆಲೆ: ಇಸ್ರೊ ಅಧ್ಯಕ್ಷ

ಚೆನ್ನೈ: ಭಾರತವು 2029ರ ವೇಳೆಗೆ 4 ಉಡ್ಡಯನ ನೆಲೆಗಳನ್ನು ಹೊಂದುವ ಮೂಲಕ ತನ್ನ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ವಿಸ್ತರಿಸಲಿದೆ ಎಂದು ಇಸ್ರೊ ಅಧ್ಯಕ್ಷ ವಿ. ನಾರಾಯಣನ್ ತಿಳಿಸಿದ್ದಾರೆ.


ಉಪಗ್ರಹ ಅಭಿವೃದ್ಧಿ ವಲಯದಲ್ಲಿ ಜಾಗತಿಕ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ, ಟುಟಿಕೋರಿನ್ ಜಿಲ್ಲೆಯ ಕುಲಶೇಖರಪಟ್ಟಣಂನಲ್ಲಿ 2,000 ಎಕರೆ ವಿಸ್ತೀರ್ಣದ 'ಸ್ಮಾಲ್ ಸ್ಯಾಟಲೈಟ್ ಲಾಂಚ್ ವೆಹಿಕಲ್' ಸಂಕೀರ್ಣ ಸ್ಥಾಪನೆ ಸೇರಿದಂತೆ ಸಂಸ್ಥೆಯ ಮುಂದಿನ ಯೋಜನೆಗಳನ್ನು ಅವರು ವಿವರಿಸಿದರು. 

ಇಸ್ರೊ ಖಾಸಗೀಕರಣವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ಉಪಗ್ರಹಗಳಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಕಂಪನಿಗಳ ಜೊತೆ ಒಡಂಬಡಿಕೆ ಅತ್ಯಾವಶ್ಯಕ ಎಂದು ಹೇಳಿದ್ದಾರೆ.

ಕುಲಶೇಖರಪಟ್ಟಣಂ ಬಾಹ್ಯಾಕಾಶ ಸಂಕೀರ್ಣದಲ್ಲಿ ಉಡ್ಡಯನ ನೆಲೆಗಳು, ರೈಲು ಟ್ರ್ಯಾಕ್ ವ್ಯವಸ್ಥೆ, ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ವ್ಯವಸ್ಥೆಗಳಂತಹ ಪ್ರಮುಖ ಮೂಲಸೌಕರ್ಯಗಳು ಇರಲಿವೆ ಎಂದೂ ಅವರು ತಿಳಿಸಿದ್ದಾರೆ.

ಮುಂದಿನ ಎರಡು ತಿಂಗಳಲ್ಲಿ ಇಸ್ರೊ ಗಗನಯಾನ ಯೋಜನೆಯ ಮೊದಲ ಮಾನವರಹಿತ ಪರೀಕ್ಷೆ ನಡೆಸಲು ಯೋಜಿಸಿದೆ. ಮಾನವಸಹಿತ ಕಾರ್ಯಾಚರಣೆಗೂ ಮುನ್ನ ಇನ್ನೂ ಎರಡು ಮಾನವರಹಿತ ಪರೀಕ್ಷೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಪರೀಕ್ಷೆಗಳು ಸುರಕ್ಷತಾ ವ್ಯವಸ್ಥೆಗಳು, ಸಿಬ್ಬಂದಿ ಪಾರುಗಾಣಿಕಾ ವ್ಯವಸ್ಥೆ ಹಾಗೂ ಮಾಡ್ಯೂಲ್‌ನ ಕಾರ್ಯಕ್ಷಮತೆಯ ಮೌಲ್ಯಮಾಪನ ಮಾಡುತ್ತವೆ ಎಂದು ಹೇಳಿದ್ದಾರೆ.

ಈ ಯೋಜನೆಗಾಗಿ ಇಸ್ರೊ ಸುಮಾರು 8,000 ಭೂ ಆಧಾರಿತ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ. ಗಗನಯಾತ್ರಿಗಳಾಗಿ ಆಯ್ಕೆಯಾದ ನಾಲ್ವರು ಸದ್ಯ ವಿಶೇಷ ತರಬೇತಿ ಪಡೆಯುತ್ತಿದ್ದಾರೆ ಎಂದು ಅವರು ತಿಳಿಸಿದರು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries