HEALTH TIPS

ಆನ್‌ಲೈನ್‌ನಲ್ಲಿ 21 ಲಕ್ಷ ಪಾಲೋವರ್ಸ್‌: ಚುನಾವಣೆಯಲ್ಲಿ ಸಿಕ್ಕಿದ್ದು ಕೇವಲ 33 ಮತ!

ಜೋಧಪುರ: ಸಾಮಾಜಿಕ ಮಾಧ್ಯಮಗಳಲ್ಲಿ ಲಕ್ಷಾಂತರ ಪಾಲೋವರ್ಸ್‌ಗಳನ್ನು ಹೊಂದಿದ್ದ ಮಾತ್ರಕ್ಕೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ ಎಂಬ ಕಹಿ ಸತ್ಯವನ್ನು ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಓಸಿಯಾನ್ ತಹಸೀಲ್‌ನಲ್ಲಿ ನಡೆದ ಪಂಚಾಯಿತಿ ಚುನಾವಣೆಯ ಫಲಿತಾಂಶ ಬಯಲು ಮಾಡಿದೆ.


ಸಾಮಾಜಿಕ ಮಾಧ್ಯಮಗಳಲ್ಲಿ 21 ಲಕ್ಷಕ್ಕೂ ಹೆಚ್ಚು ಪಾಲೋವರ್ಸ್‌ಗಳನ್ನು ಹೊಂದಿದ್ದ ಖ್ಯಾತ ಯೂಟ್ಯೂಬರ್, ಇನ್‌ಪ್ಲುಯೆನ್ಸರ್ ಓಂಪ್ರಕಾಶ್ ಬಿಷ್ಣೋಯಿ ಅವರು ಪಂಚಾಯಿತಿ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದ್ದಾರೆ.

1600 ಮತದಾರರಿರುವ ಇಂದೋನ್ ಕಿ ಧಾನಿ-II ಗ್ರಾಮದಲ್ಲಿ ಬಿಷ್ಣೋಯಿ ಅವರಿಗೆ ದೊರೆತಿದ್ದು ಕೇವಲ 33 ಮತಗಳು ಮಾತ್ರ. ಆನ್‌ಲೈನ್‌ನಲ್ಲಿ ಜನಪ್ರಿಯತೆ ಹೊಂದಿದ್ದ ಹಿನ್ನೆಲೆಯಲ್ಲಿ ಕಠಿಣ ಸ್ಪರ್ಧೆಯ ನಿರೀಕ್ಷೆಯಿತ್ತಾದರೂ, ಫಲಿತಾಂಶವು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಬಿಷ್ಣೋಯಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ 14 ಲಕ್ಷ, ಫೇಸ್‌ಬುಕ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಹಾಗೂ ಯೂಟ್ಯೂಬ್‌ನಲ್ಲಿ 5.5 ಲಕ್ಷ ಪಾಲೋವರ್ಸ್‌ ಹೊಂದಿದ್ದಾರೆ.

ಬಿಷ್ಣೋಯಿ ಅವರು ಗೋಶಾಲೆಯೊಂದರ ಅಧ್ಯಕ್ಷರೂ ಹೌದು. ಬೇರೆಯವರ ಭವಿಷ್ಯ ಹಾಗೂ ಮುಖದ ಲಕ್ಷಣಗಳನ್ನು ಹೇಳುವ ಸಾಮರ್ಥ್ಯ ಹೊಂದಿದ್ದ ಬಿಷ್ಣೋಯಿ ಅವರಿಗೆ ತಮ್ಮದೇ ರಾಜಕೀಯ ಭವಿಷ್ಯವನ್ನು ಊಹಿಸಲು ಸಾಧ್ಯವಾಗಲಿಲ್ಲವೇ ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.

ಪಂಚಾಯತಿ ಚುನಾವಣೆಗಳಲ್ಲಿ ಆನ್‌ಲೈನ್‌ನಲ್ಲಿ ಸಿಗುವ ಲೈಕ್ಸ್ ಮತ್ತು ಕಾಮೆಂಟ್‌ಗಳಿಗಿಂತ, ಗ್ರಾಮದ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಜನರೊಂದಿಗಿನ ನೇರ ಸಂಪರ್ಕವೇ ಮುಖ್ಯ ಎಂಬುದನ್ನು ಈ ಘಟನೆ ನಿರೂಪಿಸಿದೆ. ಆನ್‌ಲೈನ್‌ ಜಗತ್ತಿನ ಜನಪ್ರಿಯತೆಯು ವಾಸ್ತವದ ಮತಗಳಾಗಿ ಬದಲಾಗುವುದಿಲ್ಲ ಎಂಬ ಚರ್ಚೆಯನ್ನು ಈ ಫಲಿತಾಂಶ ಹುಟ್ಟುಹಾಕಿದೆ.

ಗ್ರಾಮದಲ್ಲಿ ಸುಮಾರು 1,600 ಮತದಾರರು ಇದ್ದಾರೆ. ನನ್ನ ಒಳಿತಿಗಾಗಿ ಕುಟುಂಬದ 33 ಸದಸ್ಯರು ಮಾತ್ರ ಮತ ಹಾಕಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವರು ಪೋಸ್ಟ್ ಮಾಡಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries