HEALTH TIPS

ಮದ್ಯಪಾನ ಮಾಡಿ ಶಾಲಾ ವಾಹನ ಚಲಾಯಿಸಿದ 21 ಚಾಲಕರ ಬಂಧನ; ತಪಾಸಣೆ ಮುಂದುವರಿಯಲಿದೆ: ಎಡಿಜಿಪಿ

 ರಾಜ್ಯಾದ್ಯಂತ ವಿಶೇಷ ಕಾರ್ಯಾಚರಣೆ; 4,504 ಶಾಲಾ ಬಸ್‌ಗಳ ತಪಾಸಣೆ

ಕೋಟಯಂ: ರಾಜ್ಯಾದ್ಯಂತ ನಡೆಸಿದ ವಿಶೇಷ ಶಾಲಾ ವಾಹನ ತಪಾಸಣೆಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ 21 ಚಾಲಕರು ಸಿಕ್ಕಿಬಿದ್ದಿದ್ದಾರೆ. 


ಇಂದು ಬೆಳಗ್ಗೆ 5ರಿಂದ 8 ಗಂಟೆಯವರೆಗೆ ವಿಶೇಷ ತಪಾಸಣಾ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಒಟ್ಟು 4,504 ಶಾಲಾ ಬಸ್‌ಗಳನ್ನು ಪರಿಶೀಲಿಸಲಾಯಿತು.

ಪಾಲಕ್ಕಾಡ್ ಮತ್ತು ಮಲಪ್ಪುರಂ  ಜಿಲ್ಲೆಗಳಲ್ಲಿ ತಲಾ ಐದು ಪ್ರಕರಣಗಳು, ಕೋಟಯಂನಲ್ಲಿ ಮೂರು ಹಾಗೂ ಕಣ್ಣೂರಿನಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ತಿರುವನಂತಪುರಂ ನಗರ ಮತ್ತು ಗ್ರಾಮಾಂತರ, ಕೊಲ್ಲಂ ನಗರ, ಇಡುಕ್ಕಿ, ಕೊಚ್ಚಿ ನಗರ ಹಾಗೂ ತಿೃಶೂರ್ ನಗರ ವ್ಯಾಪ್ತಿಯಲ್ಲಿ ತಲಾ ಒಂದು ಪ್ರಕರಣ ದಾಖಲಿಸಲಾಗಿದೆ.

ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುವುದರ ಜೊತೆಗೆ ಅಮೂಲ್ಯ ಜೀವಗಳು ಬಲಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿಯೂ ಶಾಲಾ ವಾಹನಗಳ ತಪಾಸಣೆ ಮುಂದುವರಿಸಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಪಿ. ವಿಜಯನ್ ತಿಳಿಸಿದ್ದಾರೆ.  







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries