ಅಡ್ಡಿಸ್ ಅಬಾಬಾ: ಗುರುವಾರದಿಂದ ಇಥಿಯೋಪಿಯಾದ ಉತ್ತರದ ಪ್ರದೇಶಗಳಲ್ಲಿ ನಡೆದ ಸರಣಿ ಡ್ರೋನ್ ದಾಳಿಗಳಲ್ಲಿ ಮಕ್ಕಳು ಸೇರಿದಂತೆ ಕನಿಷ್ಠ 25 ನಾಗರಿಕರು ಮೃತಪಟ್ಟಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ಶುಕ್ರವಾರ ವರದಿ ಮಾಡಿದೆ.
ಅಮ್ಹಾರಾದಲ್ಲಿ ಗುರುವಾರ ಆಂತರಿಕವಾಗಿ ಸ್ಥಳಾಂತರಗೊಂಡ ಜನರ ಶಿಬಿರದ ಮೇಲೆ ಸತತ ನಾಲ್ಕು ಡ್ರೋನ್ ದಾಳಿಗಳು ನಡೆದವು ಎಂದು ವರದಿ ತಿಳಿಸಿದೆ.
ಇಥಿಯೋಪಿಯಾ ಸರಕಾರವು ಕಳೆದ ಒಂದು ತಿಂಗಳಿಂದ ಅಮ್ಹಾರಾ ಮತ್ತು ತಿಗ್ರಾಯ್ ರಾಜ್ಯಗಳಲ್ಲಿ ಬಂಡುಕೋರರ ವಿರುದ್ಧ ಹೋರಾಡುತ್ತಿದ್ದು, ನಿರ್ಣಾಯಕ ಮುನ್ನಡೆ ಪಡೆಯಲು ತನ್ನಲ್ಲಿರುವ ಅಪಾರ ಸಂಖ್ಯೆಯ ಡ್ರೋನ್‍ಗಳನ್ನು ಬಳಸಿಕೊಳ್ಳುತ್ತಿದೆ. ಆದರೆ, ಈ ದಾಳಿಗಳಲ್ಲಿ ಬೇಕಾಬಿಟ್ಟಿ ದಾಳಿ ನಡೆಸಿ ನಾಗರಿಕರನ್ನು ಕೊಂದಿದೆ ಎಂಬ ಆರೋಪವೂ ಸರಕಾರದ ಮೇಲಿದೆ.


