HEALTH TIPS

ವ್ಯೂಹಾತ್ಮಕ ಕೇಂದ್ರಗಳ ಪಟ್ಟಿಗೆ ಲಡಾಖ್‌ನ 28 ಸ್ಥಳಗಳು ಸೇರ್ಪಡೆ

ನವದೆಹಲಿ (PTI): ಕೇಂದ್ರ ಸರ್ಕಾರವು ಲಡಾಖ್‌ನ 28 ವ್ಯೂಹಾತ್ಮಕ ಸ್ಥಳಗಳು ಹಾಗೂ ಭೌಗೋಳಿಕ ವೈಶಿಷ್ಟ್ಯಗಳನ್ನು ಭಾರತದ ಅಧಿಕೃತ ನಕ್ಷೆಯಲ್ಲಿ ಶುಕ್ರವಾರ ಗುರುತಿಸಿದೆ.


ಇದರಲ್ಲಿ ವಾಸ್ತವಿಕ ನಿಯಂತ್ರಣ ರೇಖೆಯುದ್ದಕ್ಕೂ ಇರುವ ಗೋಗ್ರಾ ಹಾಗೂ ಹಾಟ್‌ ಸ್ಪ್ರಿಂಗ್‌ನಂತಹ ಪ್ರಮುಖ ಗಡಿ ಸಂಘರ್ಷದ ಸ್ಥಳಗಳೂ ಸೇರಿವೆ. 

ಇದರಿಂದ ಭಾರತೀಯ ಸೇನೆಯ ಗಸ್ತು ತಿರುಗುವಿಕೆ ಹಾಗೂ ಭದ್ರತಾ ದೃಷ್ಟಿಯಿಂದ ಈ ಸ್ಥಳಗಳಿಗೆ ಅಧಿಕೃತ ಕಾನೂನುಬದ್ಧ ಮಾನ್ಯತೆ ಸಿಕ್ಕಂತಾಗುತ್ತದೆ.

ಈ ಪಟ್ಟಿಯಲ್ಲಿ ಅಲಿಶಾ ಗಿರಿ, ಬ್ರಾಂಗ್ಸಾ, ಚಾಪ್ಚಿಂಗಲ್‌ ಪಾಸ್‌, ಕನಿಷ್ಕ ಶಿಖರ, ಕರುಣ್‌ ಪೀರ್‌ ಪರ್ವತ, ಕುಕ್ಸೆಲ್‌, ಮಾರ್ತಾಂಡ್‌ ಗಿರಿ, ಪಾರ್ಪಿಕ್‌ ಹಿಮನದಿ, ಸ್ಕಾಮ್ರಿ ಹಿಮನದಿ, ಶಾಚ್ಮಿರಿಕ್‌ ಪಾಸ್‌, ಶ್ಕೋರ್ಗಾ ಕಣಿವೆ, ಜೊರಾವರ್‌ ಶಿಖರ, ದೆಹ್ರಾ ಕಂಪಾಸ್‌ ಮತ್ತು ದ್ರಾಕ್‌ ಕರ್ಪೋ ಸೇರಿವೆ.

ಜೋಲ್ಮೋರಿ, ಕುಮಾರಾಯಣ ಪಾಯಿಂಟ್‌, ಪಾಂಗ್ಲಂಗ್‌, ರಿಂಚೆನ್‌ ಜಾಂಗ್ಪೋ, ಶಾಕ್ಯಶ್ರೀ ಗಿರಿ, ಗುರು ರಿಂಪೋಚೆ, ಶಾಮಲ್‌ ಲುಂಗ್ಪಾ (1950ರ ದಶಕದಲ್ಲಿ ಗಸ್ತು ಮತ್ತು ಸಿದ್ಧತಾ ಮಾರ್ಗ), ಯಾಂಗ್ಪಾ ನದಿ, ಮಾರ್ಪಾ ಲೋತ್ಸಾವಾ ರಿ, ಮಿಲಾರೇಪಾ ಕಾಂಗ್ರಿ, ಶಿವ ರಿ ಮತ್ತು ಮಹೇಶ್ವರ ರಿ ಇವುಗಳನ್ನು ಸಹ ಅಧಿಕೃತ ನಕ್ಷೆಯಲ್ಲಿ ಗುರುತಿಸಲಾಗಿದೆ.

ಪ್ಯಾಂಗಾಂಗ್‌ ಸರೋವರದ ಪ್ರದೇಶಗಳಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯ ನಂತರ, 2020ರ ಮೇ 5ರಂದು ಭಾರತ ಮತ್ತು ಚೀನಾ ಸೇನೆಗಳ ನಡುವೆ ಪೂರ್ವ ಲಡಾಖ್‌ ಗಡಿ ಬಿಕ್ಕಟ್ಟು ಭುಗಿಲೆದ್ದಿತ್ತು. 2022ರಲ್ಲಿ ಉಭಯ ದೇಶಗಳು ತಮ್ಮ ಸೇನೆಯನ್ನು ಹಿಂತೆಗೆದುಕೊಂಡಿದ್ದವು. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries