HEALTH TIPS

ಇರಾನ್‌ನಿಂದ ತೈಲ ಖರೀದಿ ಆರೋಪ: ಮುಂಬೈ ಮೂಲದ 2 ಕಂಪೆನಿಗಳು, ಐವರು ಭಾರತೀಯರಿಗೆ ಅಮೆರಿಕ ನಿರ್ಬಂಧ

ನವದೆಹಲಿ:  ಇರಾನ್‌ನಿಂದ ಪೆಟ್ರೋಲಿಯಂ ಉತ್ಪನ್ನಗಳ ವ್ಯಾಪಾರದಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಮುಂಬೈ ಮೂಲದ ಎರಡು ಕಂಪೆನಿಗಳು ಮತ್ತು ಐವರು ಭಾರತೀಯ ಪ್ರಜೆಗಳ ಮೇಲೆ ಅಮೆರಿಕ ಸರಕಾರವು ಗುರುವಾರ ನಿರ್ಬಂಧಗಳನ್ನು ವಿಧಿಸಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ. 


ಅಮೆರಿಕದ ವಿದೇಶಾಂಗ ಇಲಾಖೆಯು ಇರಾನ್‌ನಿಂದ ಪೆಟ್ರೋಲಿಯಂ ಉತ್ಪನ್ನಗಳ ಆಮದಿಗೆ ಅನುಕೂಲ ಕಲ್ಪಿಸಿದ್ದಕ್ಕಾಗಿ 'ಎಸ್‌ಎಸ್‌ಪಿಎಲ್ ಸೊಲ್ಯೂಷನ್ಸ್ ಪ್ರೈ. ಲಿ.' ಮತ್ತು 'ಸಮುದ್ರ ಮರೈನ್ ಸರ್ವೀಸಸ್ ಪ್ರೈ.ಲಿ.' ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ಹೇರಿದೆ. ಇದರೊಂದಿಗೆ, ಎಸ್‌ಎಸ್‌ಪಿಎಲ್ ಸಂಸ್ಥೆಯೊಂದಿಗೆ ಗುರುತಿಸಿಕೊಂಡಿರುವ ಧ್ವನಿ ಮತ್ತು ನಿಸರ್ಗ್ ವೋರಾ ಹಾಗೂ ಸಮುದ್ರ ಮರೈನ್ ಸಂಸ್ಥೆಯೊಂದಿಗೆ ನಂಟು ಹೊಂದಿರುವ ಕೇತನ್ ಕೊಚಿಕರ್, ಭೂಪೇಂದ್ರಸಿಂಗ್ ಸಾಹು ಮತ್ತು ಹರಿಶ್ಯಾಮ್ ಹರಿಹರನ್ ಚುಂಡಾಕಟ್ಟಿಲ್ ಅವರು ತಮ್ಮ ಸಂಸ್ಥೆಗಳಿಗೆ ಸಂಬಂಧಿಸಿದ ವಹಿವಾಟುಗಳನ್ನು ನಡೆಸುವುದನ್ನು ನಿರ್ಬಂಧಿಸಲಾಗಿದೆ.

ಭಾರತೀಯ ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧದ ಈ ಕ್ರಮವು 'ಆಪರೇಷನ್ ಇಕಾನಮಿಕ್ ಔಟ್‌ಕಾಸ್ಟ್' ಅಡಿ ಇರಾನ್ ವಿರುದ್ಧ ಅಮೆರಿಕದ ಕಠಿಣ ಕ್ರಮದ ಒಂದು ಭಾಗವಾಗಿದೆ.

ಇರಾನ್ ಮೂಲದ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳ ವ್ಯಾಪಾರಕ್ಕೆ ಸಂಬಂಧಿಸಿದಂತೆ ಒಟ್ಟು ಹತ್ತು ಸಂಸ್ಥೆಗಳು, ಆರು ವ್ಯಕ್ತಿಗಳು ಮತ್ತು ಐದು ನೌಕೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಎಂದು ಅಧಿಕೃತ ಹೇಳಿಕೆಯು ತಿಳಿಸಿದೆ. ಈ ಘಟಕಗಳು ಇರಾನ್ ಆಡಳಿತಕ್ಕೆ ಲಕ್ಷಾಂತರ ಡಾಲರ್‌ಗಳನ್ನು ಪಾವತಿಸುವ ಮೂಲಕ ಅದರ ಅತ್ಯಂತ ನಿರ್ಣಾಯಕ ಆದಾಯ ಮೂಲಗಳಲ್ಲೊಂದನ್ನು ಬಲಪಡಿಸಿವೆ ಮತ್ತು ಅದರ ನಿರಂತರ ಕಾನೂನುಬಾಹಿರ ನಡವಳಿಕೆಗೆ ಬೆಂಬಲವಾಗಿ ನಿಂತಿವೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯು ಆರೋಪಿಸಿದೆ. ಈ ವ್ಯಾಪಾರವನ್ನು ಉತ್ತೇಜಿಸುತ್ತಿರುವ ಖರೀದಿದಾರರು ಮತ್ತು ಮಾರಾಟಗಾರರು ಇಬ್ಬರ ಮೇಲೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಆದಾಗ್ಯೂ, ಸಮುದ್ರ ಮರೈನ್ ಸರ್ವೀಸಸ್ ಸಂಸ್ಥೆಗೆ ತನ್ನ ಅಸ್ತಿತ್ವದಲ್ಲಿರುವ ವ್ಯವಹಾರಗಳನ್ನು ಪೂರ್ಣಗೊಳಿಸಿ ಹೊರಬರಲು ಅಮೆರಿಕವು ಅ.23ರವರೆಗೆ ಕಾಲಾವಕಾಶವನ್ನು ನೀಡಿದೆ.

ಪ್ರತ್ಯೇಕವಾಗಿ, ಅಮೆರಿಕದ ಹಣಕಾಸು ಇಲಾಖೆಯು ಇರಾನ್ ಆಡಳಿತಕ್ಕೆ ಹಣದ ಪೂರೈಕೆಯನ್ನು ತಡೆಯಲು ಮತ್ತು ಅದರ ಯುದ್ಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ 17 ಕಂಪೆನಿಗಳು ಮತ್ತು ಅವುಗಳ 'ಶ್ಯಾಡೋ ಫ್ಲೀಟ್ (ರಹಸ್ಯ ಹಡಗುಗಳು)' ನೌಕೆಗಳ ಮೇಲೆ ನಿರ್ಬಂಧ ವಿಧಿಸಿದೆ.

ಇರಾನ್‌ನ ತೈಲ ಮಾರಾಟಕ್ಕೆ ಅವಕಾಶ ಕಲ್ಪಿಸುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಬಿಡುವುದಿಲ್ಲ ಎಂದು ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಎಚ್ಚರಿಸಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries