ಮಂಜೇಶ್ವರ: ಕೊಡ್ಲಮೊಗರು ಶ್ರೀವಾಣಿ ವಿಜಯ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಲಿಟಲ್ ಕೈಟ್ಸ್ ಘಟಕದ ಹಂತ 2ರ ಶಿಬಿರ ಗುರುವಾರ ನಡೆಯಿತು. ಪ್ರೋಗ್ರಾಮಿಂಗ್ ಮತ್ತು ಅನಿಮೇಷನ್ ವಿಷಯಗಳಿಗೆ ಸಂಬಂಧಿಸಿದ ಈ ಶಿಬಿರವನ್ನು ಕಡಂಬಾರು ಶಾಲೆಯ ಲಿಟಲ್ ಕೈಟ್ಸ್ ಮಾರ್ಗದರ್ಶಕಿ ಹಾಗೂ ಸಂಪನ್ಮೂಲ ವ್ಯಕ್ತಿ ಗೀತಾ ಎಂ ಅವರು ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯಿನಿ ಕೃಷ್ಣವೇಣಿ ಬಿ. ಉದ್ಘಾಟಿಸಿದರು. ಪಿಟಿಎ ಅಧ್ಯಕ್ಷ ಮೋಹನ ಮಾಸ್ತರ್ ಅಧ್ಯಕ್ಷತೆ ವಹಿಸಿದ್ದರು. ಲಿಟಲ್ ಕೈಟ್ಸ್ ಮಾರ್ಗದರ್ಶಕಿ ಪುಷ್ಪಲತಾ ವಿ ಸ್ವಾಗತಿಸಿ, ಮಧುಶ್ಯಾಮ್ ವಂದಿಸಿದರು.

.jpg)
