ಬದಿಯಡ್ಕ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ಬದಿಯಡ್ಕ ಪ್ರಖಂಡದ ವತಿಯಿಂದ ನಡೆಯಲಿರುವ ಗೋಪೂಜೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಗುರುವಾರ ಬದಿಯಡ್ಕ ಶ್ರೀ ಗಣೇಶ ಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು.
ಸ್ಥಳೀಯ ಶ್ರೀ ಭಾರತೀ ವಿದ್ಯಾಪೀಠದ ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಶಿವರಾಜ್ ಭಟ್, ಜಿಲ್ಲಾ ಧರ್ಮಪ್ರಚಾರಕ ಸುರೇಶ್ ಶೆಟ್ಟಿ ಪರಂಕಿಲ, ಜಿಲ್ಲಾ ಕೋಶಾಧಿಕಾರಿ ಹರಿಪ್ರಸಾದ್ ರೈ, ಸಂಘದ ಪ್ರಮುಖರಾದ ಸಂಕಲ್ಪ ಭಂಡಾರಿ, ಭಜರಂಗದಳದ ಕಣ್ಣೂರು ವಿಭಾಗದ ಕಾರ್ಯದರ್ಶಿ ಬಳ್ಳಂಬೆಟ್ಟು, ವಿಶ್ವ ಹಿಂದೂ ಪರಿಷತ್ ಬದಿಯಡ್ಕ ಪ್ರಖಂಡದ ಅಧ್ಯಕ್ಷ ಸಂತೋಷ್ ಕುಮಾರ್ ರೈ ಗಾಡಿಗುಡ್ಡೆ, ಪ್ರಖಂಡ ಪ್ರಧಾನ ಕಾರ್ಯದರ್ಶಿ ಸುನಿಲ್ ಕಿನ್ನಿಮಾಣಿ, ಭಜರಂಗದಳ ಪ್ರಖಂಡ ಸಂಚಾಲಕ ರೂಪೇಶ್ ಶೆಟ್ಟಿ ವಳಮಲೆ, ವಿಶ್ವ ಹಿಂದೂ ಪರಿಷತ್ ನಗರಾಧ್ಯಕ್ಷ ಪ್ರಕಾಶ್ ಸಿ.ಎಚ್., ಭಜರಂಗದಳ ನಗರ ಸಂಚಾಲಕ ಧನೀಶ್, ಉತ್ಸವ ಸಮಿತಿ ಉಪಾಧ್ಯಕ್ಷ ಪುಷ್ಪರಾಜ್ ಬದಿಯಡ್ಕ, ಶಿವರಾಜ್ ಕುಂಟಾಲುಮೂಲೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ಮಂಡಲ ಕಾರ್ಯವಾಹ ಸ್ವರಾಜ್ ಬದಿಯಡ್ಕ, ಹಿರಿಯ ಸಾಮಾಜಿಕ ಕಾರ್ಯಕರ್ತ ಭಾಸ್ಕರ ಬದಿಯಡ್ಕ ಹಾಗೂ ರಮೇಶ್ ಗುರುಸ್ವಾಮಿ ನೀರ್ಚಾಲು ಸೇರಿದಂತೆ ಹಲವು ಸಾಮಾಜಿಕ ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
ನವೆಂಬರ್ 8ರಂದು ಭಾನುವಾರ ಬದಿಯಡ್ಕ ಪೇಟೆಯಲ್ಲಿ ಗೋಪೂಜೆ ಕಾರ್ಯಕ್ರಮ ನಡೆಯಲಿದೆ.

.jpg)
.jpg)
