HEALTH TIPS

ನ್ಯಾಯಾಂಗ ಪ್ರಕ್ರಿಯೆಗೆ AI ನೆರವು,ನ್ಯಾಯಾಧೀಶರನ್ನು ಬದಲಾಯಿಸಲು ಸಾಧ್ಯವಿಲ್ಲ: CJI

ನವದೆಹಲಿ: ನ್ಯಾಯಾಂಗ ಪ್ರಕ್ರಿಯೆಗಳಿಗೆ ಕೃತಕ ಬುದ್ಧಿಮತ್ತೆ (ಎ.ಐ) ಸಂಶೋಧನೆ ಪೂರಕವಾಗಿ ಕೆಲಸ ಮಾಡಬಹುದು. ಆದರೆ ನ್ಯಾಯಾಂಗದ ವಿವೇಚನೆ ಹಾಗೂ ತೀರ್ಪು ನೀಡುವ ನ್ಯಾಯಾಧೀಶರ ಸ್ಥಾನವನ್ನು ಎಂದಿಗೂ ತುಂಬಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೂರ್ಯಕಾಂತ್ ಸ್ಪಷ್ಟಪಡಿಸಿದ್ದಾರೆ. 


ನ್ಯಾಯಾಂಗದಲ್ಲಿ ತಂತ್ರಜ್ಞಾನದ ಬಳಕೆ ನ್ಯಾಯದಾನ ಪ್ರಕ್ರಿಯೆಯನ್ನು ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿಸಬೇಕೇ ಹೊರತು, ಅದು ಸಮಾಜದ ದುರ್ಬಲ ವರ್ಗದವರನ್ನು ದೂರವಿಡುವಂತಾಗಬಾರದು. ಹಾಗೆಯೇ ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೂ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು ಎಂದು ಅವರು ಹೇಳಿದ್ದಾರೆ.

ಹೌದು ಡೇಟಾ ಮತ್ತು ಎಐ ಮೇಲಿನ ನಮ್ಮ ಅವಲಂಬನೆ ಹೆಚ್ಚುತ್ತಿದೆ. ಆದರೆ ಅವುಗಳ ಬಳಕೆಯನ್ನು ನಿಯಂತ್ರಿಸುವ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನ ಎ.ಐ ಸಮಿತಿಯು 2026ರ ಜೂನ್‌ನಲ್ಲಿ ನ್ಯಾಯಾಲಗಳಲ್ಲಿ ಎ.ಐ ಬಳಕೆ ಕುರಿತು ಕರಡು ನಿಯಮಗಳನ್ನುರೂಪಿಸಿತ್ತು. ಇದರಲ್ಲಿ ಮಾನವನ ವಿವೇಚನೆಗಳಿಗಷ್ಟೇ ಆದ್ಯತೆ ನೀಡಿದ್ದು, ಎ.ಐ ಕೇವಲ ಸಂಶೋಧನೆ ಹಾಗೂ ಕಲಾಪ ಪ್ರಕ್ರಿಯೆಗಳಿಗೆ ಮಾತ್ರ ನೆರವಾಗಬಲ್ಲದು ಎಂಬುದನ್ನು ಸ್ಪಷ್ಟಪಡಿಸಿವೆ ಎಂದು ತಿಳಿಸಿದ್ದಾರೆ.

ಉಜ್ಬೇಕಿಸ್ತಾನ ಪ್ರವಾಸದಲ್ಲಿರುವ ಸಿಜೆಐ, ಸಾಂವಿಧಾನಿಕ ಕರ್ತವ್ಯಗಳಿಗೆ ಬದ್ಧವಾಗಿ ತಂತ್ರಜ್ಞಾನವನ್ನು ಎಷ್ಟು ಪರಿಣಾಮಕಾರಿಯಾಗಿ ಸದ್ಬಳಕೆ ಮಾಡಿಕೊಳ್ಳಬಹುದು ಎಂಬುದಷ್ಟೇ ಮುಖ್ಯ ಎಂದು ಪ್ರತಿಪಾದಿಸಿದ್ದಾರೆ.

ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆಯ ಡಿಜಿಟಲೀಕರಣ ಕುರಿತಾಗಿಯೂ ಉಲ್ಲೇಖಿಸಿದ ಅವರು ಜನರಿಗೆ ಕಾನೂನಿನ ನೆರವು ನೀಡುವುದು ಸರ್ಕಾರದ ಕರ್ತವ್ಯ ಎಂದು ಪ್ರಸ್ತಾಪಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries