ಬದಿಯಡ್ಕ: ರಾಜಸ್ಥಾನದಲ್ಲಿ ನಡೆದ ಪಶ್ಚಿಮ ವಲಯ ಅಂತರ ವಿಶ್ವವಿದ್ಯಾಲಯಗಳ ಮಹಿಳಾ ಚೆಸ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಗಾನಸಮೃದ್ಧಿ ಕನಕಜೆ ಅವರು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಅಕ್ಟೋಬರ್ 12 ರಿಂದ 16 ರವರೆಗೆ ನಡೆದ ಈ ಪಂದ್ಯಾವಳಿಯಲ್ಲಿ ರಾಜಸ್ಥಾನ, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರಗಳ 53 ವಿಶ್ವವಿದ್ಯಾಲಯಗಳ ತಂಡಗಳು ಪ್ರತಿನಿಧಿಸಿದ್ದವು.
ಪ್ರಸ್ತುತ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಎಂ.ಎಸ್ಸಿ. ವ್ಯಾಸಂಗ ಮಾಡುತ್ತಿರುವ ಗಾನಸಮೃದ್ಧಿ ಅವರು, ಎಡನೀರು ಕನಕಜೆಯ ಗೋಪಾಲಕೃಷ್ಣ ಭಟ್ ಮತ್ತು ನಯನ ದಂಪತಿಯ ಪುತ್ರಿ.

-%20Gaanasamrudhi.jpg)
-%20Gaanasamrudhi.jpg)
