HEALTH TIPS

ಹಾಲಿಡೇ ಮೂಡ್‌ನಲ್ಲಿ ರಾಹುಲ್ ಮತ್ತೆ ವಿದೇಶಕ್ಕೆ: ಬಿಜೆಪಿ ಟೀಕೆ

ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೆ ವಿದೇಶ ಪ್ರವಾಸ ಕೈಗೊಳ್ಳುತ್ತಿದ್ದು, ರಜಾ ಮೂಡ್‌‍ನಲ್ಲಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.


ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಪೋಸ್ಟ್ ಮಾಡಿದ್ದು, ರಾಹುಲ್ ಗಾಂಧಿ ಮತ್ತೆ ರಜಾ ಮಜಾ ಸವಿಯಲು ವಿದೇಶಕ್ಕೆ ತೆರಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

'ರಾಹುಲ್ ಗಾಂಧಿ ರಜೆ ಕಳೆಯಲು ವಿದೇಶಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ರಾಹುಲ್ ತಮ್ಮ ಹಳೆ ಚಾಳಿಗೆ ಮರಳಿದ್ದು, ವಿರಾಮ ಪಡೆದುಕೊಂಡು ರಜೆಯನ್ನು ಆನಂದಿಸಲು ವಿದೇಶಕ್ಕೆ ತೆರಳುತ್ತಿದ್ದಾರೆ' ಎಂದು ವಾಗ್ದಾಳಿ ನಡೆಸಿದ್ದಾರೆ.

'ರಾಹುಲ್ ಗಾಂಧಿ ಭಾರತದಲ್ಲಿಲ್ಲ! ನವರಾತ್ರಿಯ ಸಮಯದಲ್ಲಿ, ರಾಹುಲ್ ಗಾಂಧಿ ವಿದೇಶದಲ್ಲಿ ಏನು ಮಾಡುತ್ತಿದ್ದಾರೆ?' ಎಂದು ಪ್ರಶ್ನಿಸಿದ್ದಾರೆ.

'ರಾಹುಲ್ ವಿರಾಮವನ್ನು ಆನಂದಿಸುತ್ತಿದ್ದಾರೆಯೇ? ಅಥವಾ ಗೊಂದಲ ಸೃಷ್ಟಿಸುವ ಸಹಚರರನ್ನು ಭೇಟಿಯಾಗಲು ತೆರಳಿದ್ದಾರೆಯೇ' ಎಂದು ಅವರು ಪ್ರಶ್ನಿಸಿದ್ದಾರೆ.

'ಕರ್ತವ್ಯ ಮಾಡುವದಕ್ಕಿಂತಲೂ ಹೆಚ್ಚಾಗಿ ಆರಾಮವಾಗಿ ಕಾಲ ಕಳೆಯುವ ರಾಹುಲ್, ನಂತರ ಮತ ಕಳ್ಳತನ ಎಂದು ಕೂಗುತ್ತಾರೆ' ಎಂದು ವ್ಯಂಗ್ಯವಾಡಿದ್ದಾರೆ.


RAHUL GANDHI IS BACK TO DOING WHAT HE DOES BEST: TAKING A BREAK AND ENJOYING A HOLIDAY! Rahul Gandhi is reportedly travelling abroad for a vacation. Rahul Gandhi is not in India! During Navratri, what is Rahul Gandhi doing abroad? - Enjoying a break - Meeting his “chaos Show more



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries