HEALTH TIPS

ಪ್ರಾಣವನ್ನೇ ಪಣಕ್ಕಿಟ್ಟ ಕ್ಯಾಪ್ಟನ್‌ ಸ್ಮಿತ್‌ಗೆ ಅಭಿನಂದನೆಗಳ ಮಹಾಪೂರ

ನವದೆಹಲಿ/ಮುಂಬೈ (PTI): ಪ್ರಾಣವನ್ನೇ ಪಣಕ್ಕಿಟ್ಟು 174 ಪ್ರಯಾಣಿಕರನ್ನು ರಕ್ಷಿಸಿದ ಭಾರತೀಯ ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಅವರಿಗೆ ವಿಶ್ವದ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ಮುರ್ಮು ಅವರು ಸ್ಮಿತ್‌ ಅವರ 'ನಿಸ್ವಾರ್ಥ ಕಾರ್ಯ' 'ಅಸಾಧಾರಣ ಶೌರ್ಯ' ಮತ್ತು ದೊಡ್ಡ ದುರಂತವನ್ನು ತಪ್ಪಿಸಿದ ಸಮಯ ಪ್ರಜ್ಞೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.  


ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಸ್ಮಿತ್‌ ಅವರನ್ನು 'ನಿಜವಾದ ಜಾಗತಿಕ ಹೀರೊ' ಎಂದು ಕರೆದು, ಅವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.

- ನರೇಂದ್ರ ಮೋದಿ, ಪ್ರಧಾನಿ ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಜೀವದ ಹಂಗು ತೊರೆದು ಧೈರ್ಯದಿಂದ ಹೋರಾಡಿ 9/11 ಮಾದರಿಯ ಮತ್ತೊಂದು ದಾಳಿಯನ್ನು ತಪ್ಪಿಸಿದರು. ಅವರಿಗೆ 140 ಕೋಟಿ ಭಾರತೀಯರ ಪ್ರಣಾಮಗಳುದ್ರೌಪದಿ ಮುರ್ಮು, ರಾಷ್ಟ್ರಪತಿನೂರಾರು ಜೀವಗಳನ್ನು ಉಳಿಸಿದ ಮತ್ತು ದೊಡ್ಡ ದುರಂತವನ್ನು ತಪ್ಪಿಸಿದ ಸ್ಮಿತ್‌ ಶೌರ್ಯದ ಬಗ್ಗೆ ದೇಶವು ಹೆಮ್ಮೆಪಡುತ್ತದೆ. ಅವರ ವಿರೋಚಿತ ಧೈರ್ಯ, ಸಮಯಪ್ರಜ್ಞೆ ಹೃದಯವನ್ನು ಸ್ಪರ್ಶಿಸಿದೆ -ಬೆಂಜಮಿನ್‌ ನೆತನ್ಯಾಹು, ಇಸ್ರೇಲ್‌ ಪ್ರಧಾನಿ ಅಸಾಧಾರಣ ಧೈರ್ಯದ ಮೂಲಕ 174 ಪ್ರಯಾಣಿಕರನ್ನು ರಕ್ಷಿಸಿ, 9/11 ಮಾದರಿಯ ದಾಳಿಯನ್ನು ವಿಫಲಗೊಳಿಸಿದ ಭಾರತೀಯ ಪೈಲಟ್‌ ಸ್ಮಿತ್‌ ನಿಜವಾದ ಹೀರೊಪ್ರತೀಕ್‌ ಗಾಂಧಿ, ಸ್ಮಿತ್‌ ಬಾಲ್ಯದ ಸ್ನೇಹಿತ ಸ್ಮಿತ್‌ ತುಂಬಾ ಶಾಂತ, ಸಭ್ಯ ಮತ್ತು ಸಂಯಮದ ವ್ಯಕ್ತಿ. ಅನಿರೀಕ್ಷಿತ ಪರಿಸ್ಥಿತಿಯನ್ನು ನಿಭಾಯಿಸಿದ ಆತನ ಧೈರ್ಯ, ಶಿಸ್ತು ಮತ್ತು ಸಮರ್ಪಣೆ ಎಲ್ಲರಿಗೂ ಸ್ಫೂರ್ತಿ- ಸ್ಪೈಸ್‌ ಜೆಟ್‌, ಸ್ಮಿತ್‌ ಅವರ ಹಿಂದಿನ ಉದ್ಯೋಗದಾತ ಕಂಪನಿ ಸ್ಮಿತ್‌ ತೋರಿದ ಅಸಾಧಾರಣ ಶೌರ್ಯವು ನೂರಾರು ಜೀವಗಳನ್ನು ಉಳಿಸಿದೆ. ಪೈಲಟ್‌ಗೆ ಹೃದಯಾಂತರಾಳದ ಅಭಿನಂದನೆಗಳು, ಅಪಾರ ಗೌರವದೊಂದಿಗೆ - ಓರ್ಲಿ ವೈಟ್ಜ್ಮನ್, ದಕ್ಷಿಣ ಭಾರತಕ್ಕೆ ಇಸ್ರೇಲ್ ಕಾನ್ಸುಲ್ ಜನರಲ್ಪ್ಲೈದುಬೈ ಘಟನೆಯು ಭಯೋತ್ಪಾದಕ ಕೃತ್ಯವಾಗಿದ್ದು, ಸ್ಮಿತ್‌ ಮಚ್ಚರ್‌ ಅವರು ಅಸಾಧಾರಣ ಧೈರ್ಯ ತೋರದಿದ್ದರೆ ಬಹುದೊಡ್ಡ ದುರಂತವಾಗುತ್ತಿತ್ತು. ಸ್ಮಿತ್‌ ನಿಜವಾದ ಹೀರೊ

ಕ್ಯಾಪ್ಟನ್‌ ಸ್ಮಿತ್‌ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಗುರುವಾರ ವಾರಾಣಸಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು -

' ಕ್ಯಾಪ್ಟನ್‌ ಸ್ಮಿತ್‌ ಮಚ್ಚರ್‌ ಅವರ ಅದಮ್ಯ ಶೌರ್ಯಕ್ಕಾಗಿ 'ವಿಶಿಷ್ಟ ಗುಜರಾತ್‌ ಗರಿಮಾ ಪ್ರಶಸ್ತಿ' ನೀಡುವುದಾಗಿ ಗುಜರಾತ್ ಸರ್ಕಾರ ಗುರುವಾರ ಘೋಷಿಸಿದೆ. ಅವರ ಚೇತರಿಕೆಗಾಗಿ ಸೋಮನಾಥ ದೇಗುಲದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. 'ಹೊಸ ಕಾರ್ಯವಿಧಾನ ಅಗತ್ಯ' ವಿಮಾನಯಾನ ಸಂಸ್ಥೆಗಳು ಪೈಲಟ್‌ಗಳ ಆಯ್ಕೆಗೆ ಕಠಿಣ ಪ್ರಕ್ರಿಯೆಗಳನ್ನು ಹೊಂದಿವೆ. ಆದರೆ ವ್ಯಕ್ತಿಗಳು ಒಂದು ಸಿದ್ಧಾಂತ ಅಥವಾ ಭಯೋತ್ಪಾದನೆಯತ್ತ ಒಲವು ಹೊಂದಿರುವುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ಈ ಹಿನ್ನೆಲೆಯಲ್ಲಿ ಪೈಲಟ್‌ಗಳ ನಡವಳಿಕೆಯನ್ನು ನಿರ್ಣಯಿಸಲು ಹೊಸ ಕಾರ್ಯವಿಧಾನ ಅತ್ಯಗತ್ಯ ಎಂದು ನಿವೃತ್ತ ವಿಂಗ್ ಕಮಾಂಡರ್‌ ಪ್ರಶಾಂತ್‌ ಕರ್ಡೆ ಅಭಿಪ್ರಾಯಪಟ್ಟಿದ್ದಾರೆ.ಗುಜರಾತ್‌ ಗರಿಮಾ ಪ್ರಶಸ್ತಿ






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries