HEALTH TIPS

ಕೋಲ್ಕತ್ತಾ ಕಾಲ್ತುಳಿತ ಘಟನೆ | ದುರಂತಕ್ಕೂ ಮುನ್ನ ಜನರ ಗುಂಪು ತಡೆಗೋಡೆಗಳನ್ನು ದಾಟುತ್ತಿರುವ, ಪೊಲೀಸರೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ವೈರಲ್

ಕೋಲ್ಕತ್ತಾ: ಉತ್ತರ ಕೋಲ್ಕತ್ತಾದ ಚೋರ್ಬಾಗನ್ ದುರ್ಗಾ ಪೂಜೆ ಪೆಂಡಾಲ್ ಕುಸಿದು ಸಂಭವಿಸಿದ ಕಾಲ್ತುಳಿತದಲ್ಲಿ 19 ಮಂದಿ ಮೃತಪಟ್ಟು, 25 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಇದರ ಬೆನ್ನಿಗೇ, ಈ ದುರಂತ ಸಂಭವಿಸುವುದಕ್ಕೂ ಮುನ್ನ, ಜನಸಂದಣಿ ತಡೆಗೋಡೆಗಳನ್ನು ನೂಕಿ ಪೆಂಡಾಲ್ ಒಳಗೆ ಹೋಗುತ್ತಿರುವುದು ಹಾಗೂ ಪೊಲೀಸ್ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 


ಈ ದುರಂತಕ್ಕೆ ಕಿಕ್ಕಿರಿದು ನೆರೆದಿದ್ದ ಜನಸಂದಣಿ ಕಾರಣ ಎಂದು ಹೇಳಲಾಗಿದೆ.

ಜನದಟ್ಟಣೆಯನ್ನು ನಿಯಂತ್ರಿಸಲು ಈ ಹಿಂದೆ ನಾಲ್ಕು ದಿನ ಹಲವು ಸಂದರ್ಭಗಳಲ್ಲಿ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದ್ದರೂ, ಚೋರ್ಬಾಗನ್ ದುರ್ಗಾ ಪೂಜೆ ಪೆಂಡಾಲ್ ಪ್ರಾರಂಭವಾದಾಗಿನಿಂದಲೂ, ಭಾರಿ ಜನದಟ್ಟಣೆಗೆ ಈ ಪೆಂಡಾಲ್ ಸಾಕ್ಷಿಯಾಗಿತ್ತು.

ಚೋರ್ಬಾಗನ್ ದುರ್ಗಾ ಪೂಜೆ ಪೆಂಡಾಲ್ ತನ್ನ ಜನಪ್ರಿಯತೆಯಿಂದಾಗಿ ದೊಡ್ಡ ಪ್ರಮಾಣದ ಸಂದರ್ಶಕರು ಹಾಗೂ ಜನಸಂದಣಿಯನ್ನು ತನ್ನತ್ತ ಸೆಳೆದಿತ್ತು. ಹೀಗಾಗಿ, ಈ ಪೆಂಡಾಲ್ ಅನ್ನು ಪ್ರವೇಶಿಸಲು ಇರುವ ಇಕ್ಕಟ್ಟಾದ ಸೆಂಟ್ರಲ್ ಅವೆನ್ಯೂ ರಸ್ತೆಯಲ್ಲಿ ಸಾವಿರಾರು ಮಂದಿ ಕಾಯುತ್ತಿದ್ದರು.

ಈ ಸ್ಥಳದಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ಅವಕಾಶವನ್ನು ನಿರ್ಬಂಧಿಸಲು ಸೀಮಿತ ಸ್ಥಳಾವಕಾಶ ಮಾತ್ರ ಇರುವುದರಿಂದ ಪೊಲೀಸರ ಪಾಲಿಗೆ ಈ ಸ್ಥಳ ದೀರ್ಘಕಾಲದಿಂದಲೂ ಆತಂಕಕಾರಿ ವಿಷಯವಾಗಿಯೇ ಉಳಿದು ಬಂದಿದೆ. ಈ ರಸ್ತೆಯಲ್ಲಿ ಜನರು ಕಿಕ್ಕಿರಿದು ನೆರೆದಾಗ, ಭಾರಿ ಜನದಟ್ಟಣೆಯನ್ನು ಚದುರಿಸುವುದು ಪೊಲೀಸರ ಪಾಲಿಗೆ ಕ್ಲಿಷ್ಟಕರವಾಗಿ ಪರಿಣಮಿಸಿದೆ.

ಮಳೆಯಿಂದಾಗಿ ಸಂದರ್ಶಕರು ಪೆಂಡಾಲ್ ಒಳಗೆ ನುಗ್ಗಿದ್ದರಿಂದ ಹೆಚ್ಚಿದ ಜನದಟ್ಟಣೆ

ಶನಿವಾರ ಸಂಜೆ ಸುಮಾರು 7.30ರ ವೇಳೆಗೆ ದಿಢೀರೆಂದು ಮಳೆ ಸುರಿದ ಪರಿಣಾಮ, ಸಂದರ್ಶಕರು ಆಶ್ರಯ ಪಡೆಯಲು ಪೆಂಡಾಲ್ ಒಳಗೆ ನುಗ್ಗಿದ್ದಾರೆ. ತುಂತುರು ಮಳೆಯಾಗಿ ಪ್ರಾರಂಭಗೊಂಡ ಈ ಮಳೆಯು ದಿಢೀರನೆ ಧಾರಾಕಾರವಾಗಿ ಸುಮಾರು ಒಂದು ಗಂಟೆ ಕಾಲ ಸುರಿಯಲು ಪ್ರಾರಂಭಿಸಿದೆ.

ಮಳೆಯಿಂದಾಗಿ ಪೆಂಡಾಲ್ ನಿಂದ ಹೊರಗೆ ಬರಲು ಜನರು ಹಿಂಜರಿದಿದ್ದರಿಂದ, ಪೆಂಡಾಲ್ ಪ್ರವೇಶ ದ್ವಾರದಲ್ಲಿ ನೆರದಿದ್ದ ಜನರ ನಡುವೆ ನೂಕುನುಗ್ಗಲು ಪ್ರಾರಂಭವಾಗಿದೆ. ಆ ವೇಳೆಗೆ ಸಂದರ್ಶಕರೂ ಪೆಂಡಾಲ್ ಒಳಗೆ ಬಂದಿದ್ದುದರಿಂದ, ನೂಕುನುಗ್ಗಲಿನ ಒತ್ತಡ ಮತ್ತಷ್ಟು ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.


Don’t want to blame the crowd. But look at the crowd that turns into mob behaviour.

This is the pandal where the Stampede happened and around 17 people died. Look at the people and also the Puja Committee volunteers and Police. Tell me who is at fault? Even if army is deployed no one can stop stampede if people has such civic sense!!




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries