ಲಖನೌ: ದಸರಾ ಹಬ್ಬದ ಹಿನ್ನೆಲೆ ಉತ್ತರ ಪ್ರದೇಶದ ಲಖನೌ ನಗರದ ಹಲವು ಕಡೆಗಳಲ್ಲಿ ರಾವಣನ ಹತ್ತು ತಲೆಗಳ ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಈ ಹತ್ತು ತಲೆಗಳಲ್ಲಿ ಪ್ರಮುಖ ರಾಜಕೀಯ ನಾಯಕರು ಹಾಗೂ ಇತರೆ ಉದ್ಯಮಿಗಳ ಚಿತ್ರಗಳನ್ನು ಅಳವಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಸನಾತನ ರಕ್ಷಾ ಸಂಘಟನೆಯು ಈ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದು, ಅದಕ್ಕೆ 'ರಾವಣ, ಸನಾತನ ಭಾರತದ ಶತ್ರುಗಳು' ಎಂಬ ಶೀರ್ಷಿಕೆ ನೀಡಿದೆ.
ರಾವಣನ ಹತ್ತು ತಲೆ ಆಕಾರದ ಚಿತ್ರದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದ ಮುಖ್ಯಸ್ಥ ಅಖಿಲೇಶ್ ಯಾದವ್, ಉದ್ಯಮಿ ಇಲಾನ್ ಮಸ್ಕ್, ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್, ಬಾಂಗ್ಲಾದೇಶದ ಅರ್ಥಶಾಸ್ತ್ರಜ್ಞ ಮುಹಮ್ಮದ್ ಯೂನಸ್, ಮುಖ್ತಾರ್ ಅನ್ಸಾರಿ ಮತ್ತು ಅತಿಕ್ ಅಹ್ಮದ್, ಎಸ್‌ಪಿ ನಾಯಕ ಅಜಮ್ ಖಾನ್, ಯುಎಸ್ ಕಾಂಗ್ರೆಸ್ ಮಹಿಳೆ ಇಲ್ಹಾನ್ ಒಮರ್ ಮತ್ತು ಉದ್ಯಮಿ ಜಾರ್ಜ್ ಸೊರೊಸ್ ಅವರ ಚಿತ್ರಗಳಿವೆ.
ರಾಜಕಾರಣ: ರಾಹುಲ್ ಗಾಂಧಿ ರಾಜಕೀಯ ಇತಿಹಾಸ ಪ್ರಶ್ನಿಸಿದ BJP
ಅತಿಕ್ ಅಹ್ಮದ್ 2023ರ ಏಪ್ರಿಲ್‌ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾಗ ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾಗಿದ್ದರು. ಅನ್ಸಾರಿ ಕೂಡ 2024ರ ಮಾರ್ಚ್‌ನಲ್ಲಿ ಉತ್ತರ ಪ್ರದೇಶದ ಜೈಲಿನಲ್ಲಿ ನಿಧನರಾಗಿದ್ದರು.
ಈ ಫ್ಲೆಕ್ಸ್‌ಗಳನ್ನು ಹಜರತ್‌ಗಂಜ್ ಮತ್ತು ಗೋಮತಿ ನಗರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಹಾಕಲಾಗಿದ್ದು, ಸಮಾಜವಾದಿ ಪಕ್ಷದ ಕಾರ್ಯಕರ್ತರು ಈ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿದ್ದಾರೆ.



